ನವದೆಹಲಿ: ಕನ್ನಡತಿ ಶ್ರೇಯಾಂಕ್ ಪಾಟಿಲ್ (12/4), ಎಲಿಸ್ ಪೆರ್ರಿ (35) ಅಮೋಘ ಪ್ರದರ್ಶನದ ಸಹಾಯದಿಂದ ಆರ್‌ಸಿಬಿ ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸಿ ಡಬ್ಲ್ಯೂಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ. ಆ ಮೂಲಕ ಸೀಸನ್ 2ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಡಬ್ಲ್ಯೂಪಿಎಲ್ ಸೀಸನ್ 2ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ನೀಡಿದ್ದ 113 ರನ್ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 19.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿಗೆ ನಾಯಕಿ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಮೊದಲ ಉತ್ತಮ ಜೊತೆಯಾಟ ನೀಡಿದರು. ಲ್ಯಾನಿಂಗ್ (23)ರನ್‌ಗೆ ಆಟ ಮುಗಿಸಿದರು. ಶಫಾಲಿ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಬಾರಿಸಿ ನಿರ್ಗಮಿಸಿದರು. ನಂತರ ಬಂದ ಜೆಮಿಮಾ ರಾಡ್ರಿಗಸ್ ಖಾತೆ ತೆರೆಯದೆ ಹಿಂದಿರುಗಿದರು. ಆಲಿಸ್ ಕ್ಯಾಪ್ಸಿ ಕೂಡ ಶೂನ್ಯಕ್ಕೆ ಪೆವಿಲಿಯನ್ ಹಾದಿ ಹಿಡಿದರು. ಸೋಫಿ ಮೊಲಿನೆಕ್ಸ್ ಒಂದೇ ಓವರ್ನಲ್ಲಿ 3 ವಿಕೆಟ್ ಕಬಳಿಸಿ ಡೆಲ್ಲಿ ತಂಡಕ್ಕೆ ಆಘಾತ ನೀಡಿದರು. ಆರ್‌ಸಿಬಿ ಸಂಘಟಿತ ಬೌಲಿಂಗ್ ಡೆಲ್ಲಿಯನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಡೆಲ್ಲಿ 18.3 ಓವರ್‌ಗಳಲ್ಲಿ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತು.
ಆರ್‌ಸಿಬಿ ಪರ ಬೌಲಿಂಗ್ನಲ್ಲಿ ಮಿಂಚಿದ ಕನ್ನಡತಿ ಶ್ರೇಯಾಂಕ ಪಾಟೀಲ್ 4 ವಿಕೆಟ್ ಪಡೆದರೆ, ಸೋಫಿ ಮೊಲಿನೆಕ್ಸ್ 3 ಹಾಗೂ ಆಶಾ ಶೋಭನಾ 2 ವಿಕೆಟ್ ಪಡೆದರು.
ಇನ್ನು ಈ ಸಾಧಾರಣ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ಉತ್ತಮ ಆರಂಭ ದೊರೆಯಿತು. ಸೋಫಿ ಡಿವೈನ್ (32) ಶಿಕಾ ಪಾಂಡೆ ಎಲ್‌ಬಿಡಬ್ಲ್ಯೂ ಬಲೆಗೆ ಡಿವೈನ್ ಬಿದ್ದರು. ನಾಯಕಿ ಸ್ಮೃತಿ ಮಂದನಾ (31) ರನ್ ಕಲೆಹಾಕಿ ಮಿನ್ನು ಮಣಿಗೆ ವಿಕೆಟ್ ಒಪ್ಪಸಿ ಹೊರನಡೆದರು. ನಂತರ ಬಂದ ಭರವಸೆಯ ಆಟಗಾರ್ತಿ ಎಲಿಸ್ ಪರ್ರಿ ಹಾಗೂ ರಿಚಾ ಘೋಷ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಇಬ್ಬರು ಆಟಗಾರ್ತಿಯರು ತಲಾ (35) ಮತ್ತು (17) ರನ್ ಕಲೆಹಾಕಿದರು.
ಡೆಲ್ಲಿ ಪರ ಶೀಖಾ ಪಾಂಡೆ ಮತ್ತು ಮಿನ್ನು ಮಣಿ ತಲಾ ಒಂದೊಂದು ವಿಕೆಟ್ ಪಡೆದರು.
ಡಬ್ಲ್ಯೂಪಿಎಲ್ ಸೀಸನ್ 2ರ ಪ್ರಮುಖಾಂಶಗಳು:
ವಿನ್ನರ್ಸ್: ಆರ್‌ಸಿಬಿ ( ನಗದು 6 ಕೋಟಿ)
ರನ್ನರ್ಸ್ : ಡೆಲ್ಲಿ (ನಗದು 3 ಕೋಟಿ)
ಆರೆಂಜ್ ಕ್ಯಾಪ್: ಎಲ್ಲಿಸ್ ಪೆರ್ರಿ (347 ರನ್)
ಪರ್ಪಲ್ ಕ್ಯಾಪ್: ಶ್ರೇಯಾಂಕ ಪಾಟೀಲ್ (13 ವಿಕೆಟ್)
ಪಂದ್ಯ ಶ್ರೇಷ್ಠ: ಸೋಫಿ ಮೋಲಿನ್
ಸರಣಿ ಶ್ರೇಷ್ಠ: ದೀಪ್ತಿ ಶರ್ಮಾ
ಉದಯೋನ್ಮುಕ ಆಟಗಾರ್ತಿ: ಶ್ರೇಯಾಂಕ ಪಾಟೀಲ್
ಫೇರ್ ಪ್ಲೇ ಅವಾರ್ಡ್: ಆರ್‌ಸಿಬಿ
ಉತ್ತರಾಖಂಡ: ಇಲ್ಲಿನ ಅಲ್ಮೋರಾದ ಭಿಕಿಯಾಸೈನ್ ಪ್ರದೇಶದಲ್ಲಿ ಪ್ರಯಾಣಿಕರಿದ್ದ ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, 12 ಮಂದಿ…
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ತಮ್ಮ ಬಹುಕಾಲದ ಗೆಳತಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಒಂದು ಅವಕಾಶ ಕೊಡಿ. ಭಯ, ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಉತ್ತಮ ಆಡಳಿತದೊಂದಿಗೆ…
ಬೆಂಗಳೂರು: ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್)ಯನ್ನು ಕರ್ನಾಟಕದಲ್ಲೂ ನಡೆಸಬೇಕೆಂದು ಕೇಂದ್ರ ಸಚಿವೆ ಶೋಭಾ…
ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಹಿತಿ ಪ್ರಕಾರ…
ಟಿ.ನರಸೀಪುರ: ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದ್ದು, ಟಿ.ನರಸೀಪುರದ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ…