ಕ್ರೀಡೆ

WPL 2024: ನಮ್ಮ ಆರ್‌ಸಿಬಿ ಹೊಸ ತಂಡ ಹೀಗಿದೆ ನೋಡಿ

ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯೂಪಿಎಲ್‌)​ ಸೀಸನ್​-2 ಕ್ಕೆ ಸಿದ್ದತೆ ನಡೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಬಲಿಷ್ಠ ತಂಡವನ್ನು ರೂಪಿಸಿದೆ.

ಈ ಬಾರಿಯ ಹರಾಜಿಗೂ ಮುನ್ನ ಆರ್​ಸಿಬಿ ಒಟ್ಟು 11 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದ ಅರ್‌ಸಿಬಿ, 3.35 ಕೋಟಿ ರೂ.ನೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿತು. ಇದರಲ್ಲಿ ಬೆಂಗಳೂರು ಫ್ರಾಂಚೈಸಿಯು 2.3 ಕೋಟಿ ರೂ. ಖರ್ಚು ಮಾಡಿ ಏಳು ಆಟಗಾರ್ತಿಯರನ್ನು ಖರೀದಿಸಿದೆ. ಅಲ್ಲದೆ 1.05 ಕೋಟಿಯನ್ನು ಪರ್ಸ್ ಮೊತ್ತವಾಗಿ ಉಳಿಸಿಕೊಂಡಿದೆ.

ಆರ್​ಸಿಬಿ ಮೊದಲ ಸುತ್ತಿನಲ್ಲೇ ಆಸ್ಟ್ರೇಲಿಯಾ ಆಟಗಾರ್ತಿ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು ಖರೀದಿಸಿತು. 40 ಲಕ್ಷ ರೂ.ಗೆ ಸ್ಪಿನ್ನರ್​ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು ಖರೀದಿಸಿದ ಬಳಿಕ ಆರ್​ಸಿಬಿ ಮೊದಲ ಸುತ್ತಿನಲ್ಲಿ ಹೆಚ್ಚಿನ ಬಿಡ್​ಗೆ ಆಸಕ್ತಿವಹಿಸಿರಲಿಲ್ಲ. ಆದರೆ ಇಂಗ್ಲೆಂಡ್ ಆಟಗಾರ್ತಿಯ ಕೇಟ್ ಕ್ರಾಸ್ ಹೆಸರು ಬರುತ್ತಿದ್ದಂತೆ ಮತ್ತೆ ಬಿಡ್ಡಿಂಗ್​ಗೆ ಇಳಿದ ಆರ್​ಸಿಬಿ 30 ಲಕ್ಷ ರೂ.ನಲ್ಲಿ ನಲ್ಲಿ ತಂಡಕ್ಕೆ ಸೆಳೆಯಲು ಯಶಸ್ವಿಯಾದರು.

ಇದಾದ ಬಳಿಕ ಟಿ20 ಕ್ರಿಕೆಟ್​ನ ಹ್ಯಾಟ್ರಿಕ್ ವಿಕೆಟ್​ ಸರದಾರಿಣಿ ಏಕ್ತಾ ಬಿಷ್ತ್ ಅವರನ್ನು ಕೊನೆಗೂ 60 ಲಕ್ಷ ರೂ.ಗೆ ತನ್ನದಾಗಿಸಿಕೊಳ್ಳುವಲ್ಲಿ ಆರ್​ಸಿಬಿ ಯಶಸ್ವಿಯಾಯಿತು.

ಇನ್ನು ಆರ್​ಸಿಬಿ ಕರ್ನಾಟಕದ ಆಟಗಾರ್ತಿ ಶುಭಾ ಸತೀಶ್ ಅವರನ್ನು 10 ಲಕ್ಷ ರೂ. ಗೆ ಖರೀದಿಸಿತು. ಆ ಬಳಿಕ ಸಿಮ್ರಾನ್ ಬಹದ್ದೂರ್ (30 ಲಕ್ಷ ರೂ.), ಎಸ್​. ಮೇಘನಾ (30 ಲಕ್ಷ ರೂ.) ಹಾಗೂ ಸೋಫಿ ಮೊಲಿನೆಕ್ಸ್ (30 ಲಕ್ಷ ರೂ.) ಅವರನ್ನು ಖರೀದಿಸಿ ಆರ್​ಸಿಬಿ ತಂಡವು 18 ಸದಸ್ಯರ ಬಳಗದ ಬಲಿಷ್ಠ ತಂಡವನ್ನು ಕಟ್ಟಿತು.

ಆರ್‌ಸಿಬಿ ತಂಡ : ಸ್ಮೃತಿ ಮಂಧಾನ (ನಾಯಕಿ), ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್ ಕೇಟ್ ಕ್ರಾಸ್, ಏಕ್ತಾ ಬಿಷ್ತ್, ಶುಭಾ ಸತೀಶ್, ಎಸ್​. ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್​.

andolanait

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

3 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

3 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

3 hours ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

3 hours ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

3 hours ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

3 hours ago