ಕ್ರೀಡೆ

ವಿಶ್ವಕಪ್ ಫೈನಲ್‌ ಸೋಲು ಕಾಡುತ್ತಿದೆ: ಸೂರ್ಯಕುಮಾರ್ ಯಾದವ್

ಬೆಂಗಳೂರು : ಇಂದಿನಿಂದ ಭಾರತ ಮತ್ತು ಸೌಥ್‌ ಆಫ್ರಿಕಾ ನಡುವಿನ ಮೊದಲ ಟಿ೨೦ ಪಂದ್ಯ ಇಂದು ಸಂಜೆ ೭.೩೦ ( ಭಾರತೀಯ ಕಾಲಮಾನ) ಆರಂಭವಾಗಲಿದೆ. ವಿಶ್ವಕಪ್‌ ನಂತರ ಭಾರತ ತಂಡ ಮೊದಲ ಬಾರಿಗೆ ಪ್ರವಾಸ ಕೈಗೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ೩ ಏಕದಿನ, ೩ ಓಡಿಐ ಮತ್ತು ೨ ಟಸ್ಟ್‌ ಪಂದ್ಯಗಳಲ್ಲಿ ಕಾದಾಡಲಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ೨೦೨೩ರ ಏಕದಿನ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ೬ ವಿಕೆಟ್‌ಗಳ ಸೋಲು ಕಂಡು ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ವಿಶ್ವಕಪ್‌ ನಂತರ ಆಸ್ಟ್ರೇಲಿಯಾ ವಿರುದ್ಧ ಮೊಲದ ಟಿ೨೦ ಸರಣಿಯ ಆಡಿ ಅದರಲ್ಲಿ ೪-೧ ಅಂತರದಿಂದ ಗೆದ್ದ ಬೀಗಿದ್ದ ಭಾರತ ತಂಡಕ್ಕೆ ದ. ಆಫ್ರಿಕಾ ತಂಡ ಸವಾಲೋಡ್ಡಲಿದೆ.

ಇಂದಿನಿಂದ ದ. ಆಫ್ರಿಕಾ ವಿರುದ್ಧ ಆರಂಭವಾಗುವ ಸರಣಿಗೂ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಂಗಾಮಿ ಟಿ೨೦ ನಾಯಕ ಸೂರ್ಯಕುಮಾರ ಯಾದವ್‌, ಆಸೀಸ್‌ ವಿರುದ್ಧದ ಸರಣಿ ಗೆಲುವು ಸೌಥ್‌ ಆಫ್ರಿಕಾ ವಿರುದ್ಧ ಭಯಮುಕ್ತ ಆಟವಾಡಲು ಸಹಕರಿಸಲಿದೆ ಮತತು ಆತ್ಮಸ್ಥೈರ್ಯ ಹೆಚ್ಚಾಗಿದೆ. ಆದರೆ ವಿಶ್ವಕಪ್‌ ಸೋಲು ನನ್ನನ್ನು ಸದಾ ಕಾಡುತ್ತಿದೆ ಎಂದು ಸೂರ್ಯ ಹೇಳಿದ್ದಾರೆ.

ಆಸೀಸ್‌ ವಿರುದ್ಧದ ವಿಶ್ವಕಪ್ ಸೋಲು ನಿರಾಶಾದಾಯಕವಾಗಿದ್ದು, ಇದನ್ನು ನಾವು ಮರೆಯುವುದು ತುಂಬಾ ಕಷ್ಟ. ಆದರೆ ವಿಶ್ವಕಪ್‌ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವು ಆಟಗಾರರಲ್ಲಿ ಧೈರ್ಯ ತುಂಬಿದೆ. ಕಾಂಗರೂ ವಿರುದ್ಧ ನಾವು ಭಯಮುಕ್ತ ಆಟ ಆಡಿದ್ದೆವು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಇದೇ ಆಟ ಮುಂದುವರೆಸುತ್ತೇವೆ ಎಂದರು.

6ನೇ ಬೌಲರ್ ಬಗ್ಗೆ ಚಿಂತನೆ ನಡೆಸಿದ್ದೇವೆ : ನಾವು ಈಗಾಗಲೇ ತಂಡದ ಪರ 6ನೇ ಬೌಲರ್ ಜವಾಬ್ದಾರಿ ಯಾರಿಗೆ ನೀಡಬೇಕೆಂದು ಯೋಚಿಸಿದ್ದೇವೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆ ಬಿಸಿಸಿಐ ಸೆಲೆಕ್ಟರ್‌ಗಳು ಯಂಗ್ ಪ್ಲೇಯರ್‌ಗಳ ಮೇಲೆ ನಂಬಿಕೆ ಇಟ್ಟಿದ್ದರು. ಅದಕ್ಕೆ ತಕ್ಕಂತೆ ಉತ್ತಮ ಫಲಿತಾಂಶ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಇದೇ ಸಂಸ್ಕೃತಿ ಮುಂದುವರಿಯುತ್ತಾ ಎಂಬುದನ್ನು ನೋಡಬೇಕು. ಹಾಗೆಯೇ ನಮ್ಮಲ್ಲಿ 6ನೇ ಬೌಲರ್‌ಗಾಗಿ ಸಾಕಷ್ಟು ಆಯ್ಕೆಗಳಿವೆ. ತಂಡವು ಉತ್ತಮ ಆಟಗಾರರ ಸಂಯೋಜನೆಯನ್ನು ಹೊಂದಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸಲು ಸಂತೋಷವಾಗುತ್ತಿದೆ,” ಎಂದು ಸೂರ್ಯಕುಮಾರ್ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ.

ಯುವ ಆಟಗಾರರಿಗೆ ಸೂರ್ಯ ನೀಡಿದ ಸಲಹೆ ಏನು? : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಯುವ ಆಟಗಾರರಾದ ರಿಂಕು ಸಿಂಗ್ ಹಾಗೂ ಜಿತೇಶ್ ಶರ್ಮಾ ಅವರಿಗೆ ತಮ್ಮ ರಾಜ್ಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ನೀಡುವ ಪ್ರದರ್ಶನವನ್ನೇ ಮುಂದುವರಿಸುವಂತೆ ಸಲಹೆ ನೀಡಿದ್ದೆವು. ತಮ್ಮ ರಾಜ್ಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲೂ ಅವರು ಈಗ ಸ್ಥಾನ ಪಡೆದುಕೊಂಡಿದ್ದಾರೆ. ಸ್ಥಳೀಯ ಹಾಗೂ ಐಪಿಎಲ್ ಟೂರ್ನಿಯ ತಂಡಗಳಲ್ಲಿ ನೀಡುವ ಪ್ರದರ್ಶನವನ್ನೇ ರಾಷ್ಟ್ರೀಯ ತಂಡದಲ್ಲೂ ಪ್ರದರ್ಶಿಸಿ ಅದಕ್ಕಿಂತ ಹೆಚ್ಚಿನದನ್ನು ಮಾಡಬೇಡಿ ಎಂದು ಸಲಹೆ ನೀಡಿದ್ದೆವು,” ಎಂದು ಸೂರ್ಯಕುಮಾರ್‌ ಯಾದವ್‌ ಹೇಳಿದ್ದಾರೆ.

andolanait

Recent Posts

ಗ್ರಾಮ ಪಂಚಾಯ್ತಿ ಚುನಾವಣೆ : ಸಿದ್ಧತೆಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸರ್ಕಾರ

ಬೆಂಗಳೂರು : 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ…

20 mins ago

ಗ್ರಾಮ ಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ್ದು ಗಾಂಧಿಜೀ : ಸಿಎಂ

ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ…

31 mins ago

ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ಚಾಕು ಇರಿತ ; ವಧು ಮಾಜಿ ಲವರ್‌ನಿಂದ ಕೃತ್ಯ ಶಂಕೆ

ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…

2 hours ago

ಚಿರತೆ ದಾಳಿ : ರೈತನಿಗೆ ಗಾಯ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…

3 hours ago

ಮಹಾತ್ಮ ಗಾಂಧಿ ಪುಣ್ಯತಿಥಿ | ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ನಮನ

ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…

3 hours ago

ಡ್ರಗ್ಸ್‌ ಗುಮಾನಿ | ಎನ್‌ಸಿಬಿ ಅಧಿಕಾರಿಗಳ ದಾಳಿ ಫಾಲೋಅಪ್‌ ಅಷ್ಟೇ : ಗೃಹ ಸಚಿವ

ಮೈಸೂರು : ಮೈಸೂರಿನಲ್ಲಿ ಡ್ರಗ್ಸ್‌ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್‌.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್‌…

4 hours ago