Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಫಿಫಾ -ವಿಶ್ವಕಪ್ ಫೈನಲ್ ಗೆ ಕ್ಷಣಗಣನೆ 

ಫ್ರಾನ್ಸ್ – ಅರ್ಜೆಂಟಿನಾ ಸಮರಕ್ಕೆ ಲುಸೈಲ್ ಕ್ರೀಡಾಂಗಣ ಸಜ್ಜು  

ಕತಾರ್: ಡಿ.೧೮ರಂದು ಭಾನುವಾರ ರಾತ್ರಿ ಫ್ರಾನ್ಸ್ ಹಾಗೂ ಅರ್ಜಿಂಟಿನಾ ತಂಡಗಳ ನಡುವೆ ಫಿಫಾ -ವಿಶ್ವಕಪ್ ಫುಟ್ಬಾಲ್‌ನ ಕಿರೀಟಕ್ಕಾಗಿ ನಡೆಯುವ ಚರಿತ್ರಾರ್ಹ ಹೋರಾಟಕ್ಕೆ ಅಲ್‌ದಾಯೆನ್ ನಗರದ ಲುಸೈಲ್ ಕ್ರೀಡಾಂಗಣ ಸಜ್ಜುಗೊಂಡಿದೆ.

ವಿಶ್ವದ ಎರಡು ಬಲಿಷ್ಠ ತಂಡಗಳಾದ ಹ್ಯುಗೋ ಲೊರಿಸ್ ನೇತೃತ್ವದ ಫ್ರಾನ್ಸ್ ಮತ್ತು ಲಯೋನಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ನಡುವಿನ ಹೋರಾಟ ವಿಶ್ವದ ಕೋಟ್ಯಂತರ ಕ್ರೀಡಾಭಿಮಾನಿಗಳಲ್ಲಿ ಬಹು ನಿರೀಕ್ಷೆ ಮತ್ತು ಕುತೂಹಲವನ್ನು ಸೃಷ್ಟಿಸಿದೆ.

೧೯೩೦ರಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಈ ಎರಡೂ ತಂಡಗಳು ಎದುರಾಳಿಗಳಾಗಿದ್ದವು. ಈ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟಿನಾ ೧-೦ ಗೋಲಿನಿಂದ ವಿಜಯ ಸಾಧಿಸಿತ್ತು. ೧೯೭೮ರಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಅಜೆಂಟಿನಾ, ಫ್ರಾನ್ಸ್ ವಿರುದ್ಧ ೨-೧ ಗೋಲಿನ ಅಂತರದಿಂದ ಗೆಲುವು ಸಾಧಿಸಿತ್ತು. ೨೦೧೮ರ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಅರ್ಜೆಂಟಿನಾ ವಿರುದ್ಧ ೪-೩ ಗೋಲಿನ ಅಂತರದಲ್ಲಿ ಗೆದ್ದು ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಈ ವರೆಗಿನ ೩ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಅರ್ಜೆಂಟಿನಾ ೨ ಬಾರಿ ಗೆದ್ದರೆ, ಫ್ರಾನ್ಸ್ ತಂಡ ಅರ್ಜೆಂಟಿನಾ ವಿರುದ್ಧ ಒಂದು ಪಂದ್ಯದಲ್ಲಿ ವಿಜಯಿಯಾಗಿ ವಿಶ್ವಕಪ್ ಮಡಿಲಿಗೆ ಹಾಕಿಕೊಂಡಿದೆ.

ಇದೀಗ ಮತ್ತೆ ೨೦೨೨ರ ಫಿಫಾ ವಿಶ್ವಕಪ್ ಫುಟ್ಬಾಲ್‌ನ ಫೈನಲ್ ಪಂದ್ಯದಲ್ಲಿ ೪ನೇ ಬಾರಿಗೆ ಎರಡೂ ದಿಗ್ಗಜ ತಂಡಗಳು ಎದುರುಬದುರಾಗಿ ರಣಾಂಗಣಕ್ಕಿಳಿಯಲಿವೆ. ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದಾರೆ. ರಷ್ಯಾದಲ್ಲಿ ೪ ವರ್ಷಗಳ ಹಿಂದೆ ೨೦೧೮ರಲ್ಲಿ ನಡೆದಿದ್ದ ಟೂರ್ನಿಯ ೧೬ರ ಘಟ್ಟದ ಪಂದ್ಯದಲ್ಲಿ ಫ್ರಾನ್ಸ್ ೪-೩ ಗೋಲಿನ ಅಂತರದಲ್ಲಿ ಅರ್ಜೆಂಟಿನಾ ತಂಡವನ್ನು ಮಣಿಸಿತ್ತು. ಈಗ ಅರ್ಜೆಂಟಿನಾ ಆ ಸೋಲಿಗೆ ಮುಯ್ಯಿ ತೀರಿಸುವ ತವಕದಲ್ಲಿದೆ. ಒಟ್ಟಾರೆ ಎರಡೂ ತಂಡಗಳಿಗೆ ಅಂತಿಮ ಪಂದ್ಯ ಅಗ್ನಿಪರೀಕ್ಷೆಯಾಗಿದೆ.


ಭಾನುವಾರ ರಾತ್ರಿ ಭಾರತೀಯ ಕಾಲಮಾನ ೮-೩೦ ಕ್ಕೆ ಪಂದ್ಯ ಆರಂಭವಾಗಲಿದೆ.

ಅರ್ಜೆಂಟಿನಾ ತಂಡವು ಕ್ರೊವೇಷಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ೩-೦ ಅಂತರದಲ್ಲಿ ಗೆಲುವು ಸಾಧಿಸಿದೆ. ನೆದರ್‌ಲೆಂಡ್ ವಿರುದ್ಧ ೨-೨ ಗೋಲಿನ ಸಮಬಲ ಸಾಧಿಸಿ ಡ್ರಾ ಮಾಡಿಕೊಂಡಿದೆ. ಆಷ್ಟ್ರೇಲಿಯಾ ವಿರುದ್ಧ ೨-೧ರಲ್ಲಿ ಗೆದ್ದಿದೆ. ಪೋಲೆಂಡ್ ವಿರುದ್ಧ ೨-೦ಯಲ್ಲಿ ವಿಜಯ ಸಾಧಿಸಿದೆ. ಮೆಕ್ಸಿಕೋ ವಿರುದ್ಧ ೨-೦ ಯಲ್ಲಿ ಗೆದ್ದು ಬೀಗಿದ ಅರ್ಜೆಂಟಿನಾ, ಸೌದಿ ಅರೇಬಿಯಾ ವಿರುದ್ಧದ ಪಂದ್ಯದಲ್ಲಿ ೨-೧ ಗೋಲಿನ ಅಂತರದಲ್ಲಿ ಅಚ್ಚರಿಯ ರೀತಿಯಲ್ಲಿ ಸೋತು ಆಘಾತ ಅನುಭವಿಸಿತು. ಒಟ್ಟಾರೆ ೬ ಪಂದ್ಯಗಳನ್ನಾಡಿರುವ ಅರ್ಜೆಂಟಿನಾ ೪ರಲ್ಲಿ ಗೆದ್ದು, ಒಂದರಲ್ಲಿ ಡ್ರಾ ಮಾಡಿಕೊಂಡು ಮತ್ತೊಂದರಲ್ಲಿ ಸೋತಿದೆ.


೨೦೧೮ರ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ ಫ್ರಾನ್ಸ್ ತಂಡವು ಮೊರಾಕ್ಕೋ ವಿರುದ್ಧದ ಮೊದಲ ಪಂದ್ಯದಲ್ಲಿ ೨-೦ ಯಲ್ಲಿ ಗೆದ್ದಿದೆ. ಇಂಗ್ಲೆಂಡ್ ವಿರುದ್ಧ ೨-೧ರಲ್ಲಿ ಗೆಲುವು ಸಾಧಿಸಿದೆ. ಪೋಲೆಂಡ್ ವಿರುದ್ಧದ ೩ನೇ ಪಂದ್ಯದಲ್ಲಿ ೩-೧ ಅಂತರದಲ್ಲಿ ವಿಜಯಿಯಾಗಿದೆ. ಟ್ಯುನಿಷಿಯಾ ವಿರುದ್ಧ ೪ನೇ ಪಂದ್ಯದಲ್ಲಿ ೦-೧ರಲ್ಲಿ ಸೋಲನುಭವಿಸಿದೆ. ಡೆನ್ಮಾರ್ಕ್ ವಿರುದ್ಧ ೨-೧ರಲ್ಲಿ ಗೆಲುವು ಮತ್ತು ಆಷ್ಟ್ರೇಲಿಯಾ ವಿರುದ್ಧ ೪-೧ ಅಂತರದಲ್ಲಿ ವಿಜಯಿಯಾಗಿದೆ. ಒಟ್ಟಾರೆ ಆಡಿರುವ ೬ ಪಂದ್ಯಗಳಲ್ಲಿ ೫ ಪಂದ್ಯಗಳನ್ನು ಗೆದ್ದು, ಒಂದರಲ್ಲಿ ಸೋತಿದೆ.

 

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!