ಕ್ರೀಡೆ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಪಾರುಲ್

ಬುಡಾಪೆಸ್ಟ್ : ಹಂಗೇರಿಯ ಬುಡಾಪೆಸ್ಟ್ ನಲ್ಲಿ ಸೋಮವಾರ ನಡೆದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ 2023 ರ 3,000 ಮೀಟರ್ಸ್ ಸ್ಟೀಪಲ್ ಚೇಸ್ ಫೈನಲ್ ನಲ್ಲಿ ಭಾರತದ ಅತ್ಲೀಟ್ ಪಾರುಲ್ ಚೌಧರಿ ಹನ್ನೊಂದನೇ ಸ್ಥಾನ ಪಡೆದರು.

ಆದಾಗ್ಯೂ, ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಪಾರುಲ್ 9:15.31 ಕ್ಕೆ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಮುರಿದರು.

ರಾಷ್ಟ್ರೀಯ ದಾಖಲೆಯನ್ನು ಸಾಧಿಸುವ ಮೂಲಕ ಪಾರುಲ್ 2024 ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು.

ಬ್ರೂನಿ ಅಥ್ಲೀಟ್ ವಿನ್ ಫ್ರೆಡ್ ಮ್ಯೂಟಿಲ್ ಯವಿ 8:54.29 ಸಮಯದೊಂದಿಗೆ ಗುರಿ ತಲುಪಿ ಚಿನ್ನದ ಪದಕವನ್ನು ಪಡೆದರು, ಕೀನ್ಯಾದ ಬೀಟ್ರಿಸ್ ಚೆಪ್ಕೋಚ್ ಅವರು ತಮ್ಮ ಋತುವಿನ ಅತ್ಯುತ್ತಮ ಸಮಯ 8:58.98 ಸೆಕೆಂಡ್ಗೆ ಗುರಿ ತಲುಪಿ ಬೆಳ್ಳಿ ಗೆದ್ದರು ಹಾಗೂ ಕೀನ್ಯಾದ ಇನ್ನೊಬ್ಬ ಅಥ್ಲೀಟ್ ಫೇಯ್ತ್ ಚೆರೊಟಿಚ್ ತಮ್ಮ ವೈಯಕ್ತಿಕ ಅತ್ಯುತ್ತಮ ಮಾರ್ಕ್ 69:00 ಗೆಲುವನ್ನು ಸಾಧಿಸಿ. ಕಂಚು ಗೆದ್ದರು.

ಸೋಮವಾರ ನಡೆದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ 2023ರಲ್ಲಿ ಭಾರತೀಯ ಪುರುಷರ 4×400 ಮೀಟರ್ಸ್ ರಿಲೇ ತಂಡವು 4×400 ಮೀಟರ್ಸ್ ರಿಲೇ ಓಟದ ಫೈನಲ್ ನಲ್ಲಿ ಐದನೇ ಸ್ಥಾನ ಪಡೆಯಿತು.

ಮುಹಮ್ಮದ್ ಅನಸ್ ಯಾಹ್ಯಾ, ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್ ಹಾಗೂ ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತ ತಂಡವು 2:59.92 ಸೆಕೆಂಡ್ ಗೆ ಗುರಿ ತಲುಪಿತು.

ಕ್ವಿನ್ಸಿ ಹಾಲ್, ವೆರ್ನಾನ್ ನಾರ್ವುಡ್, ಜಸ್ಟಿನ್ ರಾಬಿನ್ಸನ್ ಹಾಗೂ ರೈ ಬೆಂಜಮಿನ್ವಾನ್ ಅವರಿದ್ದ ಅಮೆರಿಕ ತಂಡವು 2:57.31 ಸೆಕೆಂಡ್ ಗೆ ಗುರಿ ತಲುಪಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಫ್ರಾನ್ಸ್ 2:58.45 ಸೆಕೆಂಡ್ ನಲ್ಲಿ ಗುರಿ ತಲುಪಿ ಬೆಳ್ಳಿಯನ್ನು ಪಡೆದರೆ, ಗ್ರೇಟ್ ಬ್ರಿಟನ್ 2:58.71 ಸೆಕೆಂಡ್ ನಲ್ಲಿ ಗುರಿ ತಲುಪಿ ಕಂಚು ಪಡೆದಿದೆ.

andolanait

Recent Posts

ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ: ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ

ಮೈಸೂರು: ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ ಮೈಸೂರು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ಅಧಿಕಾರಿಗಳಿಗೆ ಸೂಚನೆ…

6 hours ago

ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ಪುನರಾರಂಭಿಸಲು ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಭಾರತ ಸರ್ಕಾರವು ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಲ್ವಾನ್‌ ಕಣಿವೆಯಲ್ಲಿ…

6 hours ago

ಶರದ್‌ ಪವಾರ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಮುಂಬೈ: ಆರೋಗ್ಯ ಸಮಸ್ಯೆಯಿಂದ ಮುಂಬೈನ್‌ ಆಸ್ಪತ್ರೆಗೆ ದಾಖಲಾಗಿದ್ದ ಶರದ್‌ ಪವಾರ್‌ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಶರದ್‌ ಪವಾರ್‌…

6 hours ago

ಪತ್ನಿ, ತಾಯಿಯನ್ನು ಕೊಂದು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ವ್ಯಕ್ತಿ

ಅಮರಾವತಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ತಾಯಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ…

8 hours ago

ಚಲುವಾಂಬ ಆಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ಮಗು ಸಾವನ್ನಪ್ಪಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು…

8 hours ago

ಹಾಸನ: ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ

ಹಾಸನ: ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ…

8 hours ago