ಕ್ರೀಡೆ

5 ವರ್ಷದ ಹಳೆಯ ಬಾಲ್ ಬಳಸಿ ಟೆಸ್ಟ್ ಗೆದ್ದಿದ್ದಾರೆ’: ಆಸೀಸ್ ಮಾಧ್ಯಮಗಳ ಆರೋಪ

ದಿ ಓವಲ್‌ : ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡುವೆ ನಡೆದ ಐದು ಪಂದ್ಯಗಳ  ಆಷಸ್‌ ಟೆಸ್ಟ್‌ ಸರಣಿ 2-2 ರ ಸಮಬಲದೊಂದಿಗೆ ಡ್ರಾದಲ್ಲಿ ಅಂತ್ಯಗೊಂಡಿದೆ.

ಕಳೆದ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಆ್ಯಶಸ್ ಗೆದ್ದಿದ್ದರಿಂದ ಈ ಬಾರಿಯೂ ಆ್ಯಶಸ್ ಟ್ರೋಫಿ ಆಸೀಸ್ ಬಳಿಯೇ ಉಳಿದುಕೊಂಡಿದೆ. ಪ್ರತಿ ಆ್ಯಶಸ್ ಟೆಸ್ಟ್ ಸರಣಿ ನಡೆದಾಗಲೂ ಒಂದೊಲ್ಲೊಂದು ಒಂದು ಹೊಸ ವಿವಾದಗಳು ಏಳುವುದು ನಾವು ಈ ಹಿಂದೆಯೂ ಸಾಕಷ್ಟು ಬಾರಿ ನೋಡಿದ್ದೇವೆ. ಇದೀಗ ಈ ಬಾರಿ ನಡೆದ ಆ್ಯಶಸ್ ಸರಣಿಯಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು.

ಬೈರ್​ಸ್ಟೋ ರನೌಟ್​ನಿಂದ ಹಿಡಿದು, ಸ್ಮಿತ್​ರನ್ನು ಹೀಯ್ಯಾಳಿಸಿದ ಪ್ರೇಕ್ಷಕರವರೆಗೆ ಈ ಸರಣಿಯಲ್ಲೂ ಸಾಕಷ್ಟು ವಿವಾದಗಳು ಸೃಷ್ಟಿಯಾಗಿದ್ದವು. ಇದೀಗ ಟೆಸ್ಟ್ ಸರಣಿ ಮುಗಿದ ಬಳಿಕ ಹೊಸ ವಿವಾದ ಹುಟ್ಟಿಕೊಂಡಿದ್ದು, ಐದು ವರ್ಷಗಳ ಹಳೆಯ ಡ್ಯೂಕ್ ಬಾಲ್ ಬಳಸಿ, ಇಂಗ್ಲೆಂಡ್ ತಂಡ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ ಎಂದು ಆಸೀಸ್ ಮೀಡಿಯಾಗಳು ಆರೋಪಿಸಿ ವರದಿ ಮಾಡಿವೆ.

ವಾಸ್ತವವಾಗಿ ಓವಲ್ ಮೈದಾನದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ಇನ್ನಿಂಗ್ಸ್​ನಲ್ಲಿ ಚೆಂಡನ್ನು ಬದಲಾಯಿಸಿದ ವಿಚಾರವಾಗಿ ಈ ವಿವಾದ ಹುಟ್ಟಿಕೊಂಡಿದೆ. ಆಸ್ಟ್ರೇಲಿಯಾ ಇನ್ನಿಂಗ್ಸ್​ನ 37ನೇ ಓವರ್‌ ಬೌಲ್ ಮಾಡಿದ ಇಂಗ್ಲೆಂಡ್ ವೇಗಿ ಮಾರ್ಕ್​ವುಡ್ ಅವರ ಚೆಂಡು ಉಸ್ಮಾನ್ ಖವಾಜಾ ಅವರ ಹೆಲ್ಮೆಟ್​ಗೆ ಬಡಿದಿತ್ತು. ಚೆಂಡು ಎಷ್ಟು ವೇಗವಾಗಿ ಹೆಲ್ಮೆಟ್​ಗೆ ಬಡಿದಿತ್ತೆಂದರೆ, ಚೆಂಡಿನ ಆಕಾರವೇ ಬದಲಾಗಿತ್ತು. ಈ ಕಾರಣಕ್ಕಾಗಿ ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು. ಕಾಕತಾಳೀಯವೆಂಬಂತೆ ಚೆಂಡು ಬದಲಾದ ಬಳಿಕ ಆಸೀಸ್ ಪಾಳಯದ ಪೆವಿಲಿಯನ್ ಪರೇಡ್ ಆರಂಭವಾಗಿತ್ತು. ಅಂತಿಮವಾಗಿ ಸ್ಟೋಕ್ಸ್ ಪಡೆ, ಕಾಂಗರೂಗಳನ್ನು 49 ರನ್​ಗಳಿಂದ ಮಣಿಸಿ, ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿತ್ತು.

ಐದು ವರ್ಷಗಳ ಹಳೆಯ ಚೆಂಡು: ಆಸೀಸ್ ಮಾಧ್ಯಮಗಳು : ಆ ಬಳಿಕ ಚೆಂಡು ಬದಲಾಯಿಸಿದ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ತರಹೇವಾರಿ ವರದಿಗಳು ಪ್ರಕಟಗೊಳ್ಳಲಾರಂಭಿಸಿದವು. ಆಸೀಸ್ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಅಂಪೈರ್‌ಗಳು ಬದಲಿಸಿದ ಚೆಂಡು ಐದು ವರ್ಷದ ಹಳೆಯ ಡ್ಯೂಕ್ಸ್ ಬಾಲ್ ಆಗಿದೆ. ಈ ಚೆಂಡನ್ನು 2018 ಅಥವಾ 2019 ರಲ್ಲಿ ತಯಾರಿಸಲಾಗಿದೆ. ಹೀಗಾಗಿ ಚೆಂಡು ಎಷ್ಟು ಸ್ವಿಂಗ್ ಆಗಬೇಕಿತ್ತೋ ಅದಕ್ಕಿಂತ ಹೆಚ್ಚು ಸ್ವಿಂಗ್ ಆಗುತ್ತಿತ್ತು. ಹೀಗಾಗಿ ಆಸೀಸ್ ತಂಡ ಕೊನೆಯ ಟೆಸ್ಟ್ ಪಂದ್ಯ ಸೋತಿತು ಎಂದು ವರದಿಯಾಗಿತ್ತು. ಆ ಬಳಿಕ ಎಲ್ಲರೂ ಇದರ ಬಗ್ಗೆ ತನಿಖೆಗೆ ಆಗ್ರಹಿಸಿದ್ದರು.

ಚೆಂಡಿನ ಮೇಲೆ ದಿನಾಂಕದ ಮುದ್ರೆ ಇರುತ್ತದೆ : ಇನ್ನು ಡ್ಯೂಕ್ ಚೆಂಡಿನ ಬಗ್ಗೆ ಹುಟ್ಟಿಕೊಂಡಿರುವ ಹೊಸ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಡ್ಯೂಕ್ ಚೆಂಡು ತಯಾರಿಕ ಕಂಪನಿಯ ಮಾಲೀಕ ದಿಲೀಪ್ ಜಜೋಡಿಯಾ, ಈ ಪಂದ್ಯದಲ್ಲಿ ಐದು ವರ್ಷದ ಚೆಂಡನ್ನು ನೀಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಅಂಪೈರ್​​ಗಳು ಬದಲಿಸುವ ಪ್ರತಿಯೊಂದು ಚೆಂಡಿನ ಮೇಲೆ ದಿನಾಂಕದ ಮುದ್ರೆ ಇರುತ್ತದೆ. ಹೀಗಾಗಿ ಐದು ವರ್ಷ ಹಳೆಯ ಚೆಂಡನ್ನು ಈ ಪಂದ್ಯದಲ್ಲಿ ಬಳಸಿರುವ ಸಾಧ್ಯತೆ ಕಡಿಮೆ ಇದೆ. ಇದರಿಂದ ತಮ್ಮ ಹೆಸರಿಗೆ ಧಕ್ಕೆಯಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.

ಐಸಿಸಿ ನೀಡಿದ ಸ್ಪಷ್ಟನೆ ಏನು? : ಈ ವಿವಾದ ವೇಗ ಪಡೆದುಕೊಂಡ ನಂತರ ಅಂಪೈರ್‌ಗಳ ಮೇಲೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಐಸಿಸಿ ಕೂಡ ಸ್ಪಷ್ಟನೆ ನೀಡಿದೆ. ಪಂದ್ಯದ ಮೊದಲು ಚೆಂಡನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಅವರು ಯಾವ ಚೆಂಡನ್ನು ಆಯ್ಕೆ ಮಾಡುತ್ತಾರೆ ಎಂಬುದು ಅಂಪೈರ್‌ಗಳ ನಿರ್ಧಾರ ಎಂದು ಐಸಿಸಿ ವಕ್ತಾರರು ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ (ಪಂದ್ಯದ ಮಧ್ಯದಲ್ಲಿ ಚೆಂಡನ್ನು ಬದಲಾಯಿಸಬೇಕಾದಾಗ), ಅಂಪೈರ್ ಹಿಂದಿನ ಚೆಂಡಿನಂತೆಯೇ ಇರುವ ಚೆಂಡನ್ನು ಆಯ್ಕೆ ಮಾಡುತ್ತಾರೆ. ಅಂಪೈರ್‌ಗಳು ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

2 hours ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

2 hours ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

2 hours ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

2 hours ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

10 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago