ಶ್ರೀಲಂಕಾ: ಬಹುನಿರೀಕ್ಷಿತಾ ವನಿತೆಯರ ಏಷ್ಯಾಕಪ್ 2024ರ ವೇಳಾಪಟ್ಟಿ ಕೊನೆಯೂ ಪ್ರಕಟವಾಗಿದೆ. ಇದೇ ಜು.19ರಿಂದ ಜು.28 ವರೆಗೆ ಈ ಟೂರ್ನಿ ನಡೆಯಲಿದೆ.
ಶ್ರೀಲಂಕಾ ಕ್ರಿಕೆಟ್ ಈ ಟೂರ್ನಿಯನ್ನು ಆಯೋಜಿಸುತ್ತಿದ್ದು, ಒಟ್ಟು ಎಂಟು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಮೊದಲ ಗುಂಪಿನಲ್ಲಿ ಬದ್ಧ ವೈರಿಗಳಾದ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಇತ್ತಂಡಗಳು ಜು.19ರಂದು ಸಂಜೆ 7ಕ್ಕೆ ರಂಗಿರಿ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿವೆ.
ಇನ್ನು ಈ ಟೂರ್ನಿಯ ಆತಿಥ್ಯ ವಹಿಸಿರುವ ಶ್ರೀಲಂಕಾ ತನ್ನ ಮೊದಲ ಪಂದ್ಯವನ್ನು ಜು.20 ರಂದು ಆಡಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳು ರಂಗಿರಿ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಾರ್ವಜನಿಕರಿಗೆ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ನೀಡುವುದಾಗಿ ಕ್ರಿಕೆಟ್ ಮಂಡಳಿ ಘೋಷಿಸಿದೆ.
ಈ ಟೂರ್ನಿಯಲ್ಲಿ ಒಟ್ಟು 2 ಗುಂಪುಗಳಿದ್ದು, ʼಎʼ ಗುಂಪಿನಲ್ಲಿ ನಾಲ್ಕು ತಂಡಗಳು ಹಾಗೂ ʼಬಿʼ ಗುಂಪಿನಲ್ಲಿ ನಾಲ್ಕು ತಂಡಗಳು ಸ್ಥಾನ ಪಡೆದಿವೆ. ಈ ಎರಡು ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಸ್‌ಗೆ ಅರ್ಹತೆ ಪಡೆಯಲಿವೆ. ಹಾಗೂ ಸೆಮಿಸ್‌ನಲ್ಲಿ ಮೊದಲ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಮೊದಲ ತಂಡಕ್ಕು ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದ ನಡುವೆ ಮೊದಲ ಸೆಮಿಸ್ ಪಂದ್ಯ ನಡೆಯುತ್ತದೆ. ಹಾಗೆಯೇ ಎರಡನೇ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ಮತ್ತು ಮೊದಲ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದ ನಡುವೆ ಎರಡನೇ ಸೆಮಿಸ್ ಪಂದ್ಯ ನಡೆಯಲಿದೆ.
ಈ ಪಂದ್ಯಗಳಲ್ಲಿ ಗೆದ್ದ ತಂಡಗಳು ಫೈನಲ್‌ಗೆ ಪ್ರವೇಶ ಪಡೆಯಲಿದ್ದು, ಫೈನಲ್‌ನಲ್ಲಿ ಗೆದ್ದ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ.
ವೇಳಾಪಟ್ಟಿ ಇಂತಿದೆ:
ಜು.19:
ಮೊದಲ ಪಂದ್ಯ: ಯುಎಇ vs ನೇಪಾಳ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೆ ಪಂದ್ಯ: ಭಾರತ vs ಪಾಕಿಸ್ತಾನ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)
ಜು.20
ಮೊದಲ ಪಂದ್ಯ: ಮಲೇಷಿಯಾ vs ಥಾಯ್ಲೆಂಡ್ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಶ್ರೀಲಂಕಾ vs ಬಾಂಗ್ಲಾದೇಶ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)
ಜು.21
ಮೊದಲ ಪಂದ್ಯ: ಭಾರತ vs ಯುಎಇ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಪಾಕಿಸ್ತಾನ vs ನೇಪಾಳ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)
ಜು.22
ಮೊದಲ ಪಂದ್ಯ: ಶ್ರೀಲಂಕಾ vs ಮಲೇಷಿಯಾ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಬಾಂಗ್ಲಾದೇಶ vs ಥಾಯ್ಲೆಂಡ್ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)
ಜು.23
ಮೊದಲ ಪಂದ್ಯ: ಪಾಕಿಸ್ತಾನ vs ಯುಎಇ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಭಾರತ vs ನೇಪಾಳ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)
ಜು.24
ಮೊದಲ ಪಂದ್ಯ: ಬಾಂಗ್ಲಾದೇಶ vs ಮಲೇಷಿಯಾ (ಮದ್ಯಾಹ್ನ 2 ಗಂಟೆ, ರಂಗಿರಿ ಡಂಬುಲ್ಲಾ ಕ್ರೀಡಾಂಗಣ)
ಎರಡನೇ ಪಂದ್ಯ: ಶ್ರೀಲಂಕಾ vs ಥಾಯ್ಲೆಂಡ್ (ಸಂಜೆ 7 ಗಂಟೆ, ರಂಗಿರಿ ಡಂಬುಲ್ಲಾ ಕ್ರಿಡಾಂಗಣ)
ಜು. 26 ರಂದು ಸೆಮಿಸ್ ಹಾಗೂ ಜು.28 ರಂದು ಫೈನಲ್ ಪಂದ್ಯ ನೆಡಲಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…