ಮುಂಬೈ: ಟೀಂ ಇಂಡಿಯಾ ತಂಡವು 2013ರ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಸತತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟದ ಫೈನಲ್ ತಲುಪಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಟೀಂ ಇಂಡಿಯಾದ ಟ್ರೋಫಿ ಬರದ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭಾರತದ ವೈಫಲ್ಯಗಳಿಗೆ ಮಾನಸಿಕ ಒತ್ತಡಕ್ಕಿಂತ ಹೆಚ್ಚಾಗಿ ಯೋಜನೆಯ ಕಾರ್ಯಗತಗೊಳಿಸುವಲ್ಲಿನ ಕೊರತೆಯೇ ಕಾರಣ ಎಂದು ಗಂಗೂಲಿ ಹೇಳಿದ್ದಾರೆ.
“ನಾವು ನಿರ್ಣಾಯಕ ಹಂತಗಳಲ್ಲಿ ಕೆಲವೊಮ್ಮೆ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಮಾನಸಿಕ ಒತ್ತಡ ಎಂದು ನಾನು ಭಾವಿಸುವುದಿಲ್ಲ, ಆದರೆ ಕಾರ್ಯಗತ ಮಾಡುವುದಕ್ಕೆ ಸಂಬಂಧಿಸಿದೆ. ಅವರು ಮಾನಸಿಕವಾಗಿ ಬಲವಾದ ಜನರು. ಆಶಾದಾಯಕವಾಗಿ, ಅವರು ಶೀಘ್ರದಲ್ಲೇ ಆ ಗೆರೆಯನ್ನು ದಾಟುತ್ತಾರೆ” ಎಂದು ಗಂಗೂಲಿ ಹೇಳಿದರು
ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಈ ಬಾರಿಯೂ ತಂಡವನ್ನು ಗಡಿ ದಾಟಿಸುವ ಭರವಸೆಯನ್ನು ಗಂಗೂಲಿ ವ್ಯಕ್ತಪಡಿಸಿದ್ದಾರೆ.
ಹೌದು, ಯಾವಾಗಲೂ ಭರವಸೆಯಿದೆ. ಡಬ್ಲ್ಯೂಟಿಸಿ ಯ ಫೈನಲ್‌ಗೆ ನಾವು ಅರ್ಹತೆ ಪಡೆದಿದ್ದೇವೆ, ಅದು ಸಹ ಸಾಧನೆಯಾಗಿದೆ. ನಮಗೆ ವಿಶ್ವಕಪ್ ನಲ್ಲಿ ಅವಕಾಶವಿದೆ. ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ, ಆಶಾದಾಯಕವಾಗಿ, ಈ ಬಾರಿ ವಿಶ್ವಕಪ್ ಗೆಲ್ಲುತ್ತೇವೆ” ಅವರು ಸೇರಿಸಿದರು.
2023ರ ಏಕದಿನ ವಿಶ್ವಕಪ್ ಕೂಟಕ್ಕೆ ಭಾರತ ಆತಿಥ್ಯ ವಹಿಸಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕೂಟವು ಭಾರತದ ಹತ್ತು ನಗರಗಳಲ್ಲಿ ನಡೆಯಲಿದೆ.
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…
ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…
ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…
ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…
ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…