ಕ್ರೀಡೆ

48 ವರ್ಷಗಳ ಇತಿಹಾಸದಲ್ಲೇ ಫಸ್ಟ್‌ ಟೈಂ ವಿಶ್ವಕಪ್‌ ಟೂರ್ನಿಯಿಂದಲೇ ವೆಸ್ಟ್‌ ಇಂಡೀಸ್‌ ಔಟ್‌

ಹರಾರೆ : 48 ವರ್ಷಗಳ ವಿಶ್ವಕಪ್‌ ಕ್ರಿಕೆಟ್‌ ಸುದೀರ್ಘ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಿಂದ ವೆಸ್ಟ್ ಇಂಡೀಸ್ ತಂಡ ಔಟ್‌ ಆಗಿದೆ.

ಏಕದಿನ ವಿಶ್ವಕಪ್‍ನ ಅರ್ಹತೆ ಪಡೆಯಲು ನಡೆಯುತ್ತಿರುವ ಸೂಪರ್ ಸಿಕ್ಸ್‌ ಪಂದ್ಯದಲ್ಲಿ ಶನಿವಾರ ವೆಸ್ಟ್ ಇಂಡೀಸ್‌ ವಿರುದ್ಧ ಸ್ಕಾಟ್ಲೆಂಡ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಸೋಲು ಕ್ರಿಕೆಟ್ ಅಭಿಮಾನಿಗಳನ್ನು ದಂಗುಬಡಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್‌ಗಳಲ್ಲಿ ಕೇವಲ 181 ರನ್‌ಗಳಿಗೆ ಆಲೌಟ್‌ ಆಯ್ತು. ಸ್ಕಾಟ್ಲೆಂಡ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು 43.3 ಓವರ್‌ಗಳಲ್ಲಿ185 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು.

ಸ್ಕಾಟ್ಲೆಂಡ್ ಪರ ಆಲ್‍ರೌಂಡರ್ ಆಟವಾಡಿದ ಬ್ರ್ಯಾಂಡನ್ ಮೆಕ್‍ಮುಲ್ಲೆನ್ ಬೌಲಿಂಗ್‍ನಲ್ಲಿ 3 ವಿಕೆಟ್ ಪಡೆದರೆ ಬ್ಯಾಟಿಂಗ್‍ನಲ್ಲಿ 69 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

ಸ್ಕಾಟ್ಲೆಂಡ್ ವಿರುದ್ಧ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಸೂಪರ್ ಸಿಕ್ಸ್ ಹಂತದಲ್ಲೇ ಹೊರ ಬಿದ್ದಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2022ರ ಟಿ20 ವಿಶ್ವಕಪ್‍ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.

1975 ಮತ್ತು 1979ರಲ್ಲಿ ಮೊದಲ ಎರಡು ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಆಗಿತ್ತು. ಅಲ್ಲದೇ 1983ರಲ್ಲಿ ರನ್ನರ್ ಅಪ್ ಕೂಡ ಆಗಿತ್ತು. ಒಟ್ಟಾರೆ ಇದೀಗ ಐಸಿಸಿ ಏಕದಿನ ವಿಶ್ವಕಪ್‍ನ 13ನೇ ಆವೃತ್ತಿಯಲ್ಲಿ ಅಂದರೆ 48 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವಿಲ್ಲದೇ ವಿಶ್ವಕಪ್ ಟೂರ್ನಿ ನಡೆಯಲಿದೆ.

lokesh

Recent Posts

ನಟ ಶಿವರಾಜ್‌ ಕುಮಾರ್‌-ಉಪೇಂದ್ರ ಅಭಿನಯದ 45 ಚಿತ್ರದ ಟ್ರೇಲರ್‌ ರಿಲೀಸ್‌

ಬೆಂಗಳೂರು: ನಟ ಶಿವರಾಜ್‌ ಕುಮಾರ್‌-ಉಪೇಂದ್ರ ಅಭಿನಯದ ಬಹು ನಿರೀಕ್ಷಿತ 45 ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಖ್ಯಾತ ಸಂಗೀತ ನಿರ್ದೇಶಕ…

5 mins ago

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಇಡಿ ಚಾರ್ಜ್‌ಶೀಟ್‌ ಪರಿಗಣಿಸಲು ಕೋರ್ಟ್‌…

38 mins ago

ಚಾಮುಂಡಿಬೆಟ್ಟಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಭೇಟಿ

ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಭೇಟಿ ನೀಡಿ ತಾಯಿಯ ದರ್ಶನ…

1 hour ago

ಕೊಡಗು: ಚಟ್ಟಳ್ಳಿ ಕಾಫಿ ತೋಟದಲ್ಲಿ ಹುಲಿ ಸಾವು

ಕೊಡಗು: ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಕೆಚ್ಚೆಟ್ಟರ ಎಸ್ಟೇಟ್‌ ಕಾಫಿ ತೋಟದಲ್ಲಿ ಹುಲಿಯೊಂದು ಸಾವನ್ನಪ್ಪಿದೆ. ಕಳೆದ ಕೆಲ ದಿನಗಳ ಹಿಂದೆ…

2 hours ago

ನಂಜನಗೂಡಿನಲ್ಲಿ ಮುಂದುವರಿದ ಕಳ್ಳರ ಹಾವಳಿ: ಶಿಕ್ಷಕ ದಂಪತಿ ಮನೆಯಲ್ಲಿ ಕಳ್ಳತನ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಳ್ಳರ ಹಾವಳಿ ಮುಂದುವರಿದಿದ್ದು, ಸೂರ್ಯೋದಯ ನಗರ ಬಡಾವಣೆಯಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಮುಸುಕುಧಾರಿ…

2 hours ago

ಓದುಗರ ಪತ್ರ:  ನೀರಿನ ಪೈಪ್ ದುರಸ್ತಿ ಮಾಡಿ

ಮೈಸೂರಿನ ಲಷ್ಕರ್ ಮೊಹಲ್ಲಾದ ವೀರನಗೆರೆ ಮಾರಿಗುಡಿ ಸ್ಥಳದಲ್ಲಿ ಕುಡಿಯುವ ನೀರಿನ ಪೈಪು ಒಡೆದಿದ್ದು, ದುರಸ್ತಿ ಮಾಡಿದರೂ ಕಳಪೆ ಕಾಮಗಾರಿಯಿಂದಾಗಿ ಮತ್ತೆ…

2 hours ago