ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದಾದ್ಯಂತ ಹೆಚ್ಚಿನ ಪ್ರಶಂಸೆ ಪಡೆಯುತ್ತಿದೆ. ಕ್ರಿಕೆಟ್ ಜಗತ್ತಿನ ಅತಿದೊಡ್ಡ ಟಿ20 ಟೂರ್ನಿಯಾಗಿದೆ. ಇದೊಂದು ಹೊಸ ಟ್ರೆಂಟ್ ಸೆಟ್‌ನ್ನು ಹುಟ್ಟುಹಾಕಿದೆ. ಅಂದಹಾಗೆ ಐಪಿಎಲ್ ನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಆಡುವ ಬಯಕೆಯಿದೆ. ಈ ಬಯಕೆಯನ್ನು ಪಾಕಿಸ್ತಾನ ಬೌಲರ್ ವ್ಯಕ್ತಪಡಿಸಿದ್ದು, ಇದೀಗ ಬಾರೀ ವೈರಲ್ ಆಗಿದೆ.
ಪಾಕ್ ವೇಗಿ ಹಸನ್ ಅಲಿ ತಮಗೆ ಐಪಿಎಲ್‌ನಲ್ಲಿ ಆಡುವ ಹಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಅಲಿ ಐಪಿಎಲ್ ಆಡಲು ಬಯಸುವ ಲಕ್ಷಾಂತರ ಆಟಗಾರರಲ್ಲಿ ತಾನೂ ಒಬ್ಬ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಐಪಿಎಲ್ ಆಡ ಬಯಸುವ ನೂರಾರು ಪಾಕಿಸ್ತಾನದ ಆಟಗಾರರ ಬಯಕೆಯನ್ನು ಒಬ್ಬರೇ ವ್ಯಕ್ತಪಡಿಸಿದ್ದಾರೆ.
ನಾವು ಪಾಕಿಸ್ತಾನಿ ಎಂಬ ಕಾರಣಕ್ಕೆ ಐಪಿಎಲ್ ಆಡಲು ಸಾಧ್ಯವಾಗುತ್ತಿಲ್ಲ. ಹಸನ್ ಅಲಿ ಪಾಕಿಸ್ತಾನಿ ಸುದ್ದಿ ವಾಹಿನಿ ಸಾಮಾ ಟಿವಿಯೊಂದಿಗೆ ಮಾತನಾಡುವಾಗ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ನಿಮಗೆ ಐಪಿಎಲ್‌ನಲ್ಲಿ ಆಡಲು ಆಫರ್ ಬಂದರೆ ಅಲ್ಲಿ ಆಡಲು ಇಚ್ಛಿಸುವಿರಾ ಎಂಬ ಪ್ರಶ್ನೆಗೆ ಒಂದು ಸೆಕೆಂಡ್ ಕೂಡ ವ್ಯರ್ಥ ಮಾಡದೆ, ‘ಇದು ಒಳ್ಳೆಯ ಪ್ರಶ್ನೆ. ನೋಡಿ ಐಪಿಎಲ್ ಒಂದು ದೊಡ್ಡ ಟೂರ್ನಿ. ಅವರಲ್ಲಿ ಸಾಕಷ್ಟು ಅವಕಾಶ ಮತ್ತು ಹಣವಿದೆ. ಪ್ರತಿಯೊಬ್ಬ ಆಟಗಾರನೂ ಐಪಿಎಲ್ ಆಡಲು ಬಯಸುತ್ತಾನೆ ಎಂದರು.
ಪಾಕಿಸ್ತಾನದ ಆಟಗಾರನು ತನ್ನ ಮನದಾಳವನ್ನು ಮುಂದಿಟ್ಟಿದ್ದಾರೆ. ಪ್ರತಿಯೊಬ್ಬ ಆಟಗಾರನು ಐಪಿಎಲ್ ಆಡಲು ಬಯಸುತ್ತಾನೆ ಎಂದು ಹೇಳಿದರು. ಆದರೆ ನಾವು ಆಡಲು ಸಾಧ್ಯವಿಲ್ಲ. ಇದು ಎಲ್ಲರಿಗೂ ತಿಳಿದಿರುವ ಕಾರಣ ನಾನು ಇದರ ಕಾರಣವನ್ನು ಹೇಳಲು ಇಷ್ಟಪಡುವುದಿಲ್ಲ. ಹೌದು, ನನಗೆ ಅವಕಾಶ ಸಿಕ್ಕರೆ, ನಾನು ಖಂಡಿತವಾಗಿಯೂ ಐಪಿಎಲ್ ಆಡಲು ಬಯಸುತ್ತೇನೆಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಹಸನ್ ಅಲಿ ಐಪಿಎಲ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ ಮೊದಲ ಪಾಕಿಸ್ತಾನಿ ಆಟಗಾರನಲ್ಲ. ಇದಕ್ಕೂ ಮೊದಲು, ಪಾಕಿಸ್ತಾನದ ಅನೇಕ ಆಟಗಾರರು ಇದನ್ನು ಮಾಡಿದ್ದಾರೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಬಿಸಿಸಿಐ ಪಾಕಿಸ್ತಾನದ ಆಟಗಾರರನ್ನು ಐಪಿಎಲ್ ಆಡದಂತೆ ನಿಷೇಧಿಸಿದೆ.
ಹೊಸದಿಲ್ಲಿ : ಕರ್ನಾಟಕ ರಾಜ್ಯದಲ್ಲಿ ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಹಾಗೂ ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ…
ಮೈಸೂರು : ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ…
ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ…
ಬೆಂಗಳೂರು: ನಾಳೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಡಿ ಬಾಸ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.…
ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಿಲ್ಲ, ಮನೆ…
ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ನೂರಾರು ವಿಮಾನಗಳು ರದ್ದಾಗಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ…