131 ಎಸೆತಗಳಲ್ಲಿ 210 ರನ್ ಸಿಡಿಸಿ ದಾಖಲೆ ಬರೆದ ಇಶಾನ್ ಕಿಶನ್, ರಿಕಿ ಪಾಂಟಿಂಗ್ ದಾಖಲೆ ಮುರಿದ ವಿರಾಟ್
ಢಾಕಾ: ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹಲವು ದಾಖಲೆಗಳನ್ನು ಬರೆದು 227 ರನ್ ಗಳ ಭರ್ಜರಿ ಜಯ ಗಳಿಸಿದೆ. ಆರಂಭಿಕ ಆಟಗಾರ ಇಶಾನ್ ಕಿಶನ್ ಅತಿವೇಗದ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ 72ನೇ ಶತಕ ಸರಣಿ ಸೋಲಿನ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿದೆ.
ಭಾರತದ 409 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ 182 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿದೆ. ಈ ಪಂದ್ಯದಲ್ಲಿ 126 ಎಸೆತಗಳನ್ನು ಎದುರಿಸಿದ ಕಿಶನ್ ತಮ್ಮ ದ್ವಿಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೂ ಕಿಶನ್ ಪಾತ್ರರಾದರು. ಒಂದು ಹಂತದಲ್ಲಿ ರೋಹಿತ್ ಅವರ 264 ರನ್ ಗಳ ದಾಖಲೆಯನ್ನು ಮುರಿಯುವಂತೆ ಕಾಣುತ್ತಿದ್ದ ಕಿಶನ್ 210 ರನ್ ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ದಾಖಲೆ ಬರೆದ ಕಿಶನ್ ಮತ್ತು ಕೊಹ್ಲಿ
ಅಂತಾರಾಷ್ಟ್ರೀಯ ಪಂದ್ಯದಲ್ಲಿ ತನ್ನ ಮೊದಲ ಶತಕ ಸಿಡಿಸಿದ ಕಿಶನ್ ದ್ವಿಶತಕ ಸಿಡಿಸಿದ 4ನೇ ಭಾರತೀಯ ಆಟಗಾರ ದ್ವಿಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ ವಿಕೆಟ್ ಕೀಪರ್ ಆಗಿ ದ್ವಿಶತಕ ಮತ್ತು ಅತೀ ಹೆಚ್ಚು ರನ್ ಗಳಿಸಿದ ಧೊನಿಯ ದಾಖಲೆಯನ್ನು ಮುರಿದರು. ಇದೇ ವೇಳೆ ವಿರಾಟ್ ಕೊಹ್ಲಿ 72 ಶತಕ ಸಿಡಿಸಿ ಆಸೀಸ್ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ದಾಖಲೆಯನ್ನು ಮುರಿದರು. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ ಬಳಿಕ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು
ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲಿನಿಂದ ನಿರಾಸೆಗೊಂಡಿದ್ದ ಟೀಂ ಇಂಡಿಯಾ ಅಭಿಮಾನಿಗಳಿಗೆ ಇಶಾನ್ ಕಿಶನ್ ಅವರ ಸ್ಫೋಟಕ ದ್ವಿಶತಕ ಕೊಂಚ ನಿರಾಳ ತಂದಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಿಶನ್ ಕೇವಲ 85 ಎಸೆತಗಳಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕವನ್ನು ಪೂರೈಸಿದರೆ, ಅದನ್ನು ಬೇಗನೆ ದ್ವಿಶತಕವಾಗಿ ಪರಿವರ್ತಿಸಿದರು. ಬಾಂಗ್ಲಾ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಿಶನ್, ಮೈದಾನದ ಅಷ್ಟ ದಿಕ್ಕುಗಳಿಗೆ ಚೆಂಡಿನ ದರ್ಶನ ಮಾಡಿಸಿದರು.
24 ಬೌಂಡರಿ ಹಾಗೂ 10 ಸಿಕ್ಸರ್
ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ತೊಂದರೆ ನೀಡಿದ ಮೆಹದಿ ಹಸನ್ ಮಿರಾಜ್, ಎಬಾದತ್ ಹೊಸೈನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಿಶನ್ ಕೇವಲ 131 ಎಸೆತಗಳಲ್ಲಿ 24 ಬೌಂಡರಿ ಹಾಗೂ 10 ಸಿಕ್ಸರ್ಗಳ ಸಹಿತ 210 ರನ್ ಚಚ್ಚಿದರು. ಗಾಯದ ಕಾರಣ ಖಾಯಂ ನಾಯಕ ರೋಹಿತ್ ಶರ್ಮಾ ಬದಲಿಗೆ ಶಿಖರ್ ಧವನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಿಶನ್, ಭಾರತ ಬೃಹತ್ ಟಾರ್ಗೆಟ್ ಸೆಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಶತಕದ ಬಳಿಕ ಗೇರ್ ಬದಲಿಸಿದ ಕಿಶನ್ ಅನುಭವಿ ಆರಂಭಿಕ ಆಟಗಾರ ಧವನ್ ಔಟಾದ ನಂತರ ಇನ್ನೊಂದು ತುದಿಯಿಂದ ಕೊಹ್ಲಿಯ ಬೆಂಬಲ ಪಡೆದ ಕಿಶನ್ ಶತಕದ ಬಳಿಕ ತಮ್ಮ ವೇಗ ಹೆಚ್ಚಿಸಿದರು. ಮೊದಲು ಶತಕ ಪೂರೈಸಲು 85 ಎಸೆತಗಳನ್ನು ಎದುರಿಸಿದ ಕಿಶನ್ ಈ ಹಂತದಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ ಅಷ್ಟೇ ಬಾರಿಸಿದ್ದರು. ಆ ನಂತರ ರೌದ್ರಾವತಾರ ತಾಳಿದ ಕಿಶನ್ ಕೇವಲ 103 ಎಸೆತಗಳಲ್ಲಿ 150 ರನ್ ಪೂರೈಸಿ ಇತಿಹಾಸ ನಿರ್ಮಿಸಿದರು. ಇದರೊಂದಿಗೆ ಏಕದಿನದಲ್ಲಿ ಅತಿ ವೇಗವಾಗಿ 150 ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು.
ತಂಡಕ್ಕೆ ಗ್ರ್ಯಾಂಡ್ ರೀಎಂಟ್ರಿ
ಟೀಂ ಇಂಡಿಯಾ ಪರ ಕೊನೆಯದಾಗಿ ಕಳೆದ ಅಕ್ಟೋಬರ್ 11 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವನ್ನಾಡಿದ ಕಿಶನ್ಗೆ ನಂತರ ಅವಕಾಶಗಳು ಸಿಕ್ಕಿರಲಿಲ್ಲ. ಅಲ್ಲದೆ ಕಳಪೆ ಫಾರ್ಮ್ನಿಂದಾಗಿ ಬಳಲುತ್ತಿದ್ದ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ವಿರಾಟ್ ಕೊಹ್ಲಿ 91 ಎಸೆತದಲ್ಲಿ 2 ಸಿಕ್ಸ್ 11 ಪೋರ್ ಮೂಲಕ 113 ರನ್ ಗಳಿಸುವ ಮೂಲಕ ಇಬ್ಬರೂ ಬಾಂಗ್ಲಾ ವಿರುದ್ಧ ಅಬ್ಬರಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ 3 ರನ್, ನಾಯಕ ಕೆಎಲ್ ರಾಹುಲ್ 8 ರನ್, ವಾಷಿಂಗ್ಟನ್ ಸುಂರ್ 37 ರನ್, ಅಕ್ಷರ್ ಪಟೇಲ್ 20 ರನ್, ಶಾರ್ದೂಲ್ ಠಾಕೂರ್ 3 ರನ್, ಕುಲದೀಪ್ ಯಾದವ್ 3 ರನ್ ಗಳಿಸಿದರು.
ಬಾಂಗ್ಲಾ ಬೌಲರ್ಗಳು ಸುಸ್ತು:
ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಆರಂಭಿಸಿದ ಬಾಂಗ್ಲಾ ಲೆಕ್ಕಾಚಾರವನ್ನು ಕಿಶನ್ ಮತ್ತು ಕೊಹ್ಲಿ ತಲೆಕೆಳಗಾಗಿಸಿದರು. ಈ ಇಬ್ಬರ ನಿಯಂತ್ರಿಸಲು ಬಾಂಗ್ಲಾ ಬೌಲರ್ಗಳ ಬಳಿ ಸಾಧ್ಯವಾಗಲಿಲ್ಲ. ಬಾಂಗ್ಲಾ ಪರ ಟಸ್ಕಿನ್ ಅಹ್ಮದ್, ಹಸೋನ್ನ ಮತ್ತು ಶಕೀಬ್ ಅಲ್ ಹಸನ್ ತಲಾ 2 ವಿಕೆಟ್ ಪಡೆದರೆ, ಮೆಹೆದ್ದಿ ಹಸನ್ 1 ವಿಕೆಟ್ ಪಡೆದರು.
ಮಂಡ್ಯ: ಸಕ್ಕರೆ ನಗರಿಯಲ್ಲಿ ಶುಕ್ರವಾರ ಆಕ್ಷರಶಃ ದೊಡ್ಡ ಜಾತ್ರೆಯ ಸೊಬಗು ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ; ಅದು…
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…