ಮುಂಬೈ : ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಕೋಟ್ಯಂತರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅಭಿಮಾನಿಗಳು ಒಮ್ಮೆಯಾದ್ರೂ ಮಹಿಯನ್ನ ಹತ್ತಿರದಿಂದ ನೋಡ್ಬೇಕು ಅಂತಾ ಆಸೆ ಪಡ್ತಾರೆ. ಅಂತಹ ಒಂದು ಕ್ಷಣ ಸಿಕ್ಕರೂ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲಾರದೇ ಇರೋದಿಲ್ಲ. 2023 IPL ಟೂರ್ನಿಯಲ್ಲಿ ಮಹಿ ನೋಡಲೆಂದೇ ಸಾವಿರಾರು ಕಿಲೋ ಮೀಟರ್‌ಗಳಿಂದ ಅಭಿಮಾನಿಗಳು ಬಂದಿದ್ರು. ಇದೀಗ ಗಗನಸಖಿಯೊಬ್ಬಳು ಅಂತಹದ್ದೇ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲು ಹೋಗಿ ಸುದ್ದಿಯಾಗಿದ್ದಾಳೆ.
ಇತ್ತೀಚೆಗೆ ವಿಮಾನ ಪ್ರಯಾಣ ಸಮಯದಲ್ಲಿ ಎಂ.ಎಸ್.ಧೋನಿ ಪಕ್ಕದಲ್ಲಿ ನಿಂತು ಗಗನ ಸಖಿಯೊಬ್ಬಳು ಫೋಟೋ ತೆಗೆದುಕೊಂಡಿದ್ದಾಳೆ. ಆದ್ರೆ ಈ ಫೋಟೋ ತೆಗೆದುಕೊಳ್ಳುವಾಗ ಧೋನಿ ಸಣ್ಣ ನಿದ್ರೆಗೆ ಜಾರಿದ್ದರು. ಹಾಗಾಗಿ ಇದು ಅವರಿಗೆ ಗೊತ್ತೇ ಇರಲಿಲ್ಲ. ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಗಗನಸಖಿ ವಿರುದ್ಧ ಕಿಡಿ ಕಾರಿದ್ದಾರೆ.
ಒಬ್ಬ ಅಭಿಮಾನಿಯಾಗಿ ನಾನು ಸಹ ಅವರನ್ನ ನೋಡಲು ಬಯಸುತ್ತೇನೆ. ಆದ್ರೆ ಅವರ ಅನುಮತಿಯಿಲ್ಲದೇ ಅವರ ಪರ್ಸನಲ್ ಸ್ಪೇಸ್‌ಗೆ ಅಡ್ಡಿಪಡಿಸಲು ಬಯಸುವುದಿಲ್ಲ. ಇನ್ಮುಂದೆ ಹೀಗೆ ಮಾಡ್ಬೇಡಿ ಅಂತಾ ಅಭಿಮಾನಿಯೊಬ್ಬರು ಕೇಳಿಕೊಂಡಿದ್ದಾರೆ. ಮತ್ತೊಬ್ಬರು, ಯಾರಾದರೂ ಗಗನಸಖಿಯರಿಗೆ ಹೆಚ್ಚು ವೃತ್ತಿಪರರಾಗಿರಲು ಮತ್ತು ಅವರ ಗೌಪ್ಯತೆಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚಿಸಬಹುದೇ ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಧೋನಿ ಜಾಗದಲ್ಲಿ ಯುವತಿ, ಗಗನಸಖಿ ಜಾಗದಲ್ಲಿ ಧೋನಿ ಇದ್ದರೆ ಇಷ್ಟು ಹೊತ್ತಿಗೆ ಮಹಿಳಾ ಹೋರಾಟಗಾರರು ಕಟು ಪದಗಳಲ್ಲಿ ಟೀಕೆ ಮಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 5 ಬಾರಿ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದಿರುವ ಮಹಿ ಮುಂದಿನ ಋತುವಿನಲ್ಲೂ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ಸಂತಗೊಂಡಿದ್ದಾರೆ. ಇತ್ತೀಚೆಗೆ ತಮ್ಮದೇ ನಿರ್ಮಾಣ ಧೋನಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಸಂಸ್ಥೆ ಪ್ರಾರಂಭಿಸುವ ಮೂಲಕ ಮನರಂಜನಾ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.
ಲಖನೌ: ಉತ್ತರ ಪ್ರದೇಶದ ಅಲಿಗಂಜ್‌ನಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು…
ಕೀನ್ಯಾ: ಕಾಂಗೋದಲ್ಲಿ ಎಬೋಲಾ ವೈರಸ್‌ನ ಅಟ್ಟಹಾಸ ಮುಂದುವರಿದಿದ್ದು, ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1003ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ…
ಹಲಗೂರು: ಇಲ್ಲಿಗೆ ಸಮೀಪದ ಗಾಣಾಳು ಜಲಪಾತದಲ್ಲಿ ಈಜಲು ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.…
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಬೆಂಗಳೂರು: ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಶೀಘ್ರದಲ್ಲೇ ರಾಜ್ಯ ಸರ್ಕಾರ ಬಸ್ ಪ್ರಯಾಣ…
ಲಂಡನ್: ನಿರೀಕ್ಷೆಯಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲೇಬರ್ ಪಕ್ಷದೊಳಗೆ…