ಕ್ರೀಡೆ

Paris Olympics 2024: ಫೈನಲ್ಸ್‌ ಪ್ರವೇಶಿಸಿ ಐತಿಹಾಸಿಕ ದಾಖಲೆ ಬರೆದ ವಿನೇಶ್‌ ಫೋಗಾಟ್‌

ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ವಿಶ್ವ ವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ನ ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿನ 50 ಕೆಜಿ ವಿಭಾಗದಿಂದ ಭಾರತ ಪರವಾಗಿ ಸ್ಪರ್ಧೆ ಮಾಡಿದ್ದ ವಿನೇಶ್‌ ಫೋಗಾಟ್‌ ಅವರು ಫೈನಲ್ಸ್‌ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ ಒಂದು ಪಕದವನ್ನು ಖಚಿತಪಡಿಸಿದ್ದಾರೆ.

ಇನ್ನು ಫೈನಲ್ಸ್‌ ಪಂದ್ಯದಲ್ಲಿ ಫೋಗಾಟ್‌ ಅವರು ಚಿನ್ನ ಗೆದ್ದದ್ದೇ ಆದಲ್ಲಿ, ಭಾರತ ಪರವಾಗಿ ಕುಸ್ತಿಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ವಿಶ್ವದಾಖಲೆ ಫೋಗಾಟ್‌ ಪಾಲಾಗಲಿದೆ.

ಮಂಗಳವಾರ ನಡೆದ ಸೆಮಿ ಫೈನಲ್ಸ್‌ನಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮಾನ್ ವಿರುದ್ಧ ಪ್ರಾಬಲ್ಯ ಮೆರೆದ ವಿನೀಶ್‌ ಫೋಗಾಟ್‌ 5-0 ಅಂತರಗಳಿಂದ ಗೆದ್ದು ಬೀಗುವ ಮೂಲಕ ಫೈನಲ್ಸ್‌ ತಲುಪಿದರು.

ಇನ್ನು ಉಕ್ರೇನ್‌ನ ಒಸ್ಕಾನ ವಿವಚ್‌ ವಿರುದ್ಧ ಕ್ವಾರ್ಟರ್‌ ಫೈನಲ್ಸ್‌ ಪಂದ್ಯದಲ್ಲಿ 7-5 ಅಂಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿ ಸೆಮಿಸ್‌ಗೆ ಅರ್ಹತೆ ಪಡೆದುಕೊಂಡರು.

ಈ ಪಂದ್ಯಕ್ಕೂ ಮೊದಲು ನಡೆದ ಎಲಿಮಿನೆಟರ್‌ ಸುತ್ತಿನಲ್ಲಿ ನಾಲ್ಕುಬಾರಿ ವಿಶ್ವ ಚಾಂಪಿಯನ್‌ ಜಪಾನಿನ ಯುಇ ಸುಸಾಕಿ ಅವರನ್ನು 3-2ರ ಅಂತರದಿಂದ ಸೋಲಿಸಿದ ವಿನೇಶಾ ಫೋಗಾಟ್‌ ಕ್ವಾರ್ಟರ್‌ಗೆ ಅರ್ಹತೆ ಪಡೆದಿದ್ದರು.

ನಾಳೆ ನಡೆಯಲಿರುವ ಫೈನಲ್ಸ್‌ ಪಂದ್ಯದಲ್ಲಿ ಫೋಗಾಟ್‌ ಅವರು ಅಮೇರಿಕಾದ ಸಾರಾ ಆನ್ ಹಿಲ್ಡೆಬ್ರಾಂಡ್ಟ್ ಅವರ ವಿರುದ್ಧ ಚಿನ್ನಕ್ಕಾಗಿ ಸೆಣೆಸಾಡಲಿದ್ದಾರೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏ.11 ಶನಿವಾರ

27 mins ago

ವಾಹನ ದಟ್ಟನೆ : ಸುಗಮ ಸಂಚಾರಕ್ಕೆ ರೈಲ್ವೆ ಅಂಡರ್‌ ಬ್ರಿಡ್ಜ್‌ ವಿಸ್ತರಿಸಲು ಮನವಿ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು…

12 hours ago

ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲು ಸಂಚಾರ

ಮೈಸೂರು : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು- ಜಲ್ಪೈಗುರಿ ಜಂಕ್ಷನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್…

12 hours ago

ಯಮುನಾ ನದಿಯಲ್ಲಿ ಮುಳುಗಿದ ಪ್ರವಾಸಿಗರ ದೋಣಿ ; 6 ಮಂದಿ ಸಾವು, ಹಲವರು ನಾಪತ್ತೆ

ಮಥುರಾ : ಬೃಂದಾವನದ ಕೇಶಿ ಘಾಟ್ ಸಮೀಪ ಯಮುನಾ ನದಿಯಲ್ಲಿ ಪ್ರವಾಸಿಗರಿಂದ ತುಂಬಿದ ದೋಣಿ ಪಲ್ಟಿಯಾಗಿ ಆರು ಮಂದಿ ಸ್ಥಳದಲ್ಲೇ…

12 hours ago

ಹಡಗುಗಳ ಮೇಲಿನ ಶುಲ್ಕ ನಿಲ್ಲಿಸಿ ; ಇರಾನ್‌ಗೆ ಟ್ರಂಪ್ ಸೂಚನೆ

ಟೆಹ್ರಾನ್ : ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಶುಲ್ಕ ವಿಧಿಸುತ್ತಿದ್ದರೆ, ಅದು ತಕ್ಷಣವೇ ಅದನ್ನು ನಿಲ್ಲಿಸಬೇಕು…

13 hours ago

ನಂಜನಗೂಡು | ದೇವರಾಯಶೆಟ್ಟಿಪುರದಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ

ಮಲ್ಕುಂಡಿ : ರಾತ್ರಿ ವೇಳೆ ರಸ್ತೆ ಮಧ್ಯೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ದೇವರಾಯಶೆಟ್ಟಿಪುರ ಗ್ರಾಮದಿಂದ ಹುರ ಗ್ರಾಮಕ್ಕೆ ತೆರಳುವ ಮುಖ್ಯ…

13 hours ago