ಕ್ರೀಡೆ

ಆರ್‌ಸಿಬಿ ಸಂಘಟಿತ ಹೋರಾಟಕ್ಕೆ ಸಂದ ಜಯ: ಫ್ಲೇ-ಆಫ್‌ ಕಸಸು ಜೀವಂತ

ಜೋಧ್​ಪುರ್​: ಬೌಲರ್​ಗಳ ಸಂಘಟಿತ ದಾಳಿಯ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್​ ವಿರುದ್ಧ 112ರನ್​ಗಳ ಜಯ ದಾಖಲಿಸಿತು.

ಇಲ್ಲಿನ ಜೋಧ್​ಪುರದ ಸವಾಯಿ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 171ರನ್​ ಗಳಿಸಿತ್ತು. ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ 18(19) ಆಸಿಫ್‌ಗೆ ವಿಕೆಟ್‌ ಒಪ್ಪಿಸಿ ನಿರ್ಗಮಿಸಿದರು. ನಂತರ ನಾಯಕ ಫಾಪ್‌ ಡು ಪ್ಲೆಸಿ (55 ರನ್​, 44 ಎಸೆತ, 3 ಬೌಂಡರಿ, 2 ಸಿಕ್ಸರ್​) ಮತ್ತು ಮ್ಯಾಕ್ಸ್‌ವೆಲ್‌ (54 ರನ್​, 33 ಎಸೆತ, 5 ಬೌಂಡರಿ, 3 ಸಿಕ್ಸರ್​) ಜುಗಲ್‌ ಬಂದಿ ಪ್ರದರರ್ಶನ ತೋರುವ ಮೂಲಕ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಆರ್‌ಸಿಬಿ ನೀಡಿದ 171 ರನ್‌ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಆರ್​ಸಿಬಿ ಬೌಲರ್​ಗಳು ಕಾಡಿದರು. ಆರಂಬಿಕ ಆಟಗಾರರಾದ ಯಶಸ್ವಿ ಜೈಸ್ವಾಲ್‌ ಮತ್ತು ಜಾಸ್‌ ಬಟ್ಲರ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ನಡೆದರು. ನಾಯಕ ಸ್ಯಾಮ್ಸನ್‌ 4 ರನ್‌ ಗಳಿಸಿ ಪೆವಿಲನ್‌ ಕಡೆ ಮುಖ ಮಾಡಿದರು. ಶಿಮ್ರೋನ್​ ಹೆಟ್ಮೆಯರ್​(35 ರನ್​, 19 ಎಸೆತ, 1 ಬೌಂಡರಿ, 4 ಸಿಕ್ಸರ್​) ರಾಜಸ್ಥಾನ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು, ಆದರೆ ಉಳಿದ ಆಟಗಾರರು ಪೆವಿಲಿಯನ್‌ ಪೆರೇಡ್‌ ನಡೆಸಿದರು. ಆರ್​ಸಿಬಿ ಬೌಲರ್​ಗಳ ಸಂಘಟಿತ ದಾಳಿಗೆ ನಲುಗಿದ ತಂಡವು 59ರನ್​ಗಳಿಗೆ ಸರ್ವಪತನ ಕಂಡಿತು.

ಆರ್‌ಸಿಬಿ ಪರ ವೇಯ್ನ್​ ಪಾರ್ನೆಲ್ (3 ಓವರ್‌, 10ರನ್‌, 3 ವಿಕೆಟ್‌) ಕಬಳಿಸಿದರು. ಮೈಕೆಲ್​ ಬ್ರೇಸ್​ವೆಲ್​, ಮತ್ತು ಕರಣ್‌ ಶರ್ಮಾ ತಲಾ 2 ವಿಕೆಟ್‌ ಪಡೆದರು. ಮೊಹಮ್ಮದ್​ ಸಿರಾಜ್ ಹಾಗೂ ಗ್ಲೇನ್‌ ಮ್ಯಾಕ್ಸ್‌ವೆಲ್‌ ತಲಾ ಒಂದು ವಿಕೆಟ್‌ ಪಡೆಯುವ ಮೂಲಕ ರಾಜಸ್ಥಾನ್‌ ತಂಡವನ್ನು 10.3 ಓವರಗಳಲ್ಲಿ 59 ರನ್‌ ಗಳಿಗೆ ಕಟ್ಟಿ ಹಾಕಲು ಶಕ್ತರಾದರು.

ಪಂದ್ಯಶ್ರೇಷ್ಠ: ವೇಯ್ನ್‌ ಪಾರ್ನೆಲ್‌.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago