ನ್ಯೂಯಾರ್ಕ್: ಆತಿಥೇಯ ದೇಶದ 43 ವರ್ಷದ ಆಟಗಾರ್ತಿ ವೀನಸ್ ವಿಲಿಯಮ್ಸ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಯುಎಸ್ ಓಪನ್ ಕೂಟದಿಂದ ನಿರ್ಗಮಿಸಿದ್ದಾರೆ. ಬಹುಶಃ ಇದು ಅವರ ಕೊನೆಯ ಗ್ರ್ಯಾನ್‌ಸ್ಲಾಮ್ ಪಂದ್ಯವಾಗಿರಲೂಬಹುದು ಎಂದು ಭಾವಿಸಿದ ವೀಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು.
2000 ಮತ್ತು 2001ರ ಚಾಂಪಿಯನ್ ಆಗಿರುವ ವೀನಸ್ ವಿಲಿಯಮ್ಸ್ “ಆರ್ಥರ್ ಆ್ಯಶ್ ಸ್ಟೇಡಿಯಂ’ನಲ್ಲಿ ತವರಿನ ಕೂಟದ 100ನೇ ಪಂದ್ಯ ಆಡಲಿಳಿದಿದ್ದರು. ಎದುರಾಳಿ ಬೆಲ್ಜಿಯಂನ ಅರ್ಹತಾ ಆಟಗಾರ್ತಿ ಗ್ರೀಟ್ ಮಿನ್ನೆನ್. ಇವರು 6-1, 6-1 ಅಂತರದಿಂದ ವೀನಸ್ ಅವರನ್ನು ಬಗ್ಗುಬಡಿದರು. ಇಲ್ಲಿ ಆಡಲಾದ ಮೊದಲ ಸುತ್ತಿನ 22 ಪಂದ್ಯಗಳಲ್ಲಿ ವೀನಸ್ ಅನುಭವಿಸಿದ ಮೊದಲ ಸೋಲು ಇದಾಗಿದೆ. 26 ವರ್ಷದ ಗ್ರೀಟ್ ಮಿನ್ನೆನ್ ಕುರಿತು ಹೇಳುವುದಾದರೆ, ವೀನಸ್ ವಿಲಿಯಮ್ಸ್ ಯುಎಸ್ ಓಪನ್‌ನಲ್ಲಿ ಮೊದಲ ಸಲ ಫೈನಲ್ ತಲುಪಿದ ವೇಳೆ (1997) ಮಿನ್ನೆನ್ ಕೇವಲ ಒಂದು ತಿಂಗಳ ಶಿಶು!
ಪೆಗುಲಾ, ಕೀಸ್ ಮುನ್ನಡೆ
3ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ, ಮಾಜಿ ಫೈನಲಿಸ್ಟ್ ಮ್ಯಾಡಿಸನ್ ಕೀಸ್ ದ್ವಿತೀಯ ಸುತ್ತಿಗೆ ಮುನ್ನಡೆದಿದ್ದಾರೆ. ಮಾಂಟ್ರಿಯಲ್ ಪ್ರಶಸ್ತಿ ಗೆದ್ದು ಇಲ್ಲಿ ಆಡಲಿಳಿದ ಪೆಗುಲಾ 6-2, 6-2 ಅಂತರದಿಂದ ಇಟಲಿಯ ಕ್ಯಾಮಿಲಾ ಜಾರ್ಜಿ ಅವರನ್ನು ಮಣಿಸಿದರು, ಕೀಸ್ ನೆದರ್ಲೆಂಡ್ಸ್‌ನ
ಅರಾಂತ್ಸಾ ರುಸ್ ವಿರುದ್ಧ 6-2, 6-4ರಿಂದ ಗೆದ್ದು ಬಂದರು. ಆದರೆ ಫ್ರಾನ್ಸ್‌ನ 7ನೇ ಶ್ರೇಯಾಂಕಿತೆ ಕ್ಯಾರೋಲಿನ್ ಗಾರ್ಸಿಯಾ ಚೀನದ ಅರ್ಹತಾ ಆಟಗಾರ್ತಿ ಯಫಾನ್ ವಾಂಗ್ ವಿರುದ್ಧ 4-6, 1-6 ಅಂತರದ ಆಘಾತಕಾರಿ ಸೋಲನುಭವಿಸಿದರು.
ಅಲ್ಕರಾಜ್ ಎದುರಾಳಿ ಗಾಯಾಳು
ಜರ್ಮನ್ ಎದುರಾಳಿ ಡೊಮಿನಿಕ್ ಕೋಫರ್ ಗಾಯಾಳಾದ ಕಾರಣ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಸುಲಭದಲ್ಲಿ ಮೊದಲ ಸುತ್ತು ದಾಟಿದರು. ಕೋಫರ್ ಪಾದದ ನೋವಿಗೊಳಗಾಗಿ ಪಂದ್ಯ ತ್ಯಜಿಸಿದರು. ಆಗ ಅಲ್ಕರಾಜ್ 6-2, 3-2 ಮುನ್ನಡೆಯಲ್ಲಿದ್ದರು. ಇವರ ಮುಂದಿನ ಎದುರಾಳಿ ದಕ್ಷಿಣ ಆಫ್ರಿಕಾ ಲಾಯ್ಡ ಹ್ಯಾರಿಸ್.
ಕೂಟದ ನೆಚ್ಚಿನ ಆಟಗಾರ ಡ್ಯಾನಿಲ್ ಮಡ್ವೆಡೇವ್ ಸುಲಭದಲ್ಲಿ ಮೊದಲ ಸುತ್ತು ದಾಟಿದ್ದಾರೆ. 3ನೇ ಶ್ರೇಯಾಂಕದ ಅವರು 6-1, 6-1, 6-0 ಅಂತರದಿಂದ ಆ್ಯಟಿಲ್ಲ ಬಲಾಝ್ ವಿರುದ್ಧ ಮೇಲುಗೈ ಸಾಧಿಸಿದರು. 2012ರ ಚಾಂಪಿಯನ್ ಆ್ಯಂಡಿ ಮರ್ರೆ 6-2, 7-5, 6-3ರಿಂದ ಕಾರೆಂಟೀನ್ ಮೌಟೆಟ್ ಅವರನ್ನು; 2016ರ ವಿಜೇತ ಸ್ಟಾನಿಸ್ಲಾಸ್ ವಾವ್ರಿಂಕ 7-6 (7-5), 6-4, 6-4 ಅಂತರದಿಂದ ಜಪಾನ್‌ನ ಯೊಶಿಹಿಟೊ ನಿಶಿಯೋಕ ಅವರನ್ನು ಮಣಿಸಿದರು.
ಕಶನೋವ್‌ಗೆ ಆಘಾತ
ಕಳೆದ ವರ್ಷದ ಸೆಮಿಫೈನಲಿಸ್ಟ್ ಕರೆನ್ ಕಶನೋವ್ ಆಘಾತಕಾರಿ ಸೋಲು ದ್ವಿತೀಯ ದಿನದ ಬಿಗ್ ಅಪ್‌ಸೆಟ್ ಎನಿಸಿತು. ಅಮೆರಿಕದ ವೈಲ್ಡ್‌ಕಾರ್ಡ್ ಆಟಗಾರ ಮೈಕಲ್ ಮೋಹ್ 6-2, 6-4, 6-2ರಿಂದ ಈ ಪಂದ್ಯ ಗೆದ್ದರು. ಅಲೆಕ್ಸಾಂಡರ್ ಜ್ವೆರೇವ್, ಕಾಮ್ ನೂರಿ ಮೊದಲ ಸುತ್ತು ದಾಟಿದ ಇತರ ಶ್ರೇಯಾಂಕಿತ ಆಟಗಾರರು.
ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…
ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…
ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜಾಮೀನು ಮಂಜೂರು ಮಾಡಿ…
ಬೆಂಗಳೂರು: 9823 ರೂ ಕೋಟಿ ಮೌಲ್ಯದ 9 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸರಿ…
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಅವರು ನಾಡಿನ…
ನವದೆಹಲಿ: ಇನ್ನು ಮುಂದೆ ಐದು ಹಾಗೂ ಎಂಟನೇ ತರಗತಿಗಳಲ್ಲೂ ವಿದ್ಯಾರ್ಥಿಗಳನ್ನು ಫೇಲ್ ಮಾಡಬಹುದು ಎಂಬ ಹೊಸ ತಿದ್ದುಪಡಿಯನ್ನು ಕೇಂದ್ರ ಸರ್ಕಾರ…