ಬೆನೋನಿ: ನಾಯಕ ಉದಯ್ ಸಹರಾನ್ ಮತ್ತು ಸಚಿನ್ ದಾಸ್ ಅವರ ಅಮೊಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. ಆ ಮೂಲಕ ಅಂಡರ್-19 ಏಕದಿನ ವಿಶ್ವಕಪ್ ನಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ಇಲ್ಲಿನ ವಿಲೋಮೂರ್ ಪಾರ್ಕ್ ಮೈದಾನದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 244ರನ್ ಗುರಿಯನ್ನು 48.5 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 248 ರನ್ ಕಲೆಹಾಕಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರೀಕ್ಷಿತ ಆರಂಭ ಕಂಡು ಬರಲಿಲ್ಲ. ಆರಂಭಿಕ ಸ್ಟೀವ್ ಸ್ಟೋಕ್ (14) ಬೇಗನೆ ನಿರ್ಗಮಿಸಿದರು. ನಂತರ ಬಂದ ಟೀಗರ್ ಖಾತೆ ತೆರೆಯದೇ ಹಿಂದುರಿಗಿದರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಲುವಾನ್-ಡ್ರೆ ಪ್ರಿಟೋರಿಯಸ್ ಮತ್ತು ರಿಚರ್ಡ್ ಸೆಲೆಟ್ಸ್ವಾನೆ ಚೇತರಿಕೆ ಆಟವಾಡಿದರು. ಪ್ರಿಟೋರಿಯಸ್ 102 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 76 ರನ್ ಕೆಲಹಾಕಿದರೆ, ರಿಚರ್ಡ್(64) ರನ್ ಬಾರಿಸಿದರು. ಆಲಿವರ್ ವೈಟ್‌ಹೆಡ್ (22), ನಾಯಕ ಜುವಾನ್ ಜೇಮ್ಸ್ (24) ಮತ್ತು ಟ್ರಿಸ್ಟಾನ್ ಲೂಸ್ (23) ಬಾರಿಸಿ ತಂಡ 200 ಗಡಿ ದಾಟಲು ಸಹಕರಿಸಿದರು. ಸೌಥ್ ಅಫ್ರಿಕಾ ಅಂತಿಮವಾಗಿ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 244 ರನ್ ಬಾರಿಸಿತು.
ಟೀಂ ಇಂಡಿಯಾ ಪರ ರಾಜ್ ಲಿಂಬಾನಿ 60/3, ಮುಷೀರ್ ಖಾನ್ 43/2 ವಿಕೆಟ್ ಕಬಳಿಸಿ ಗಮನ ಸೆಳೆದರು.
ಈ ಮೊತ್ತವನ್ನು ಚೇಸ್ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. ಅಂದುಕೊಂಡಂತೆ ಆರಂಭ ಪಡೆಯದ ಟೀಂ ಇಂಡಿಯಾ ಬಹುತೇಕ ಅತಿಥೇಯ ಪ್ರಾಬಲ್ಯಕ್ಕೆ ಸಿಲುಕಿ ಸೋಲು ಕಾಣಲಿದೆ ಎಂದು ಊಹಿಸಲಾಗಿತ್ತು. ಆದರೆ ನಾಯಕ ಉದಯ್ ಸಹರನ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಸಚಿನ್ ದಾಸ್ ತಂಡದ ದಿಕ್ಕನ್ನೇ ಬದಲಿಸಿದರು. ಇವರಿಬ್ಬರು ಮುರಿಯದ ಜೋಡಿಯಾಗಿ 150 ರನ್ ಜೊತೆಯಾಟವಾಡಿ ತಂಡಕ್ಕೆ ಜಯ ತಂದಿಟ್ಟರು.
ಓಪನರ್ ಆದರ್ಶ್ ಸಿಂಗ್ ಶೂನ್ಯಕ್ಕೆ ಔಟಾದರು. ನಂಬಿಕೆಯ ಬ್ಯಾಟರ್ ಮುಷಿರ್ ಖಾನ್ ನಾಲ್ಕು ರನ್‌ಗೆ ನಿರ್ಗಮಿಸಿದರು. ಅರ್ಶಿನ್ ಕುಲ್ಕರ್ಣಿ (12) ಅವಿನಾಶ್ (10) ಆಘಾತ ಅನುಭಿಸಿದ್ದ ವೇಳೆ, ನಾಯಕ ಸಹರನ್ 124 ಎಸೆತಗಳಲ್ಲಿ 6 ಬೌಂಡರಿ ಸಹಿತ 81 ರನ್ ಕಲೆಹಾಕಿದರೇ, ಸಚಿನ್ ದಾಸ್ 95 ಎಸೆತಗಳಲ್ಲಿ 11 ಬೌಂಡರಿ 1 ಸಿಕ್ಸರ್ ಸಹಿತ 96 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಂತಿಮವಾಗಿ 48.5 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದ ಟೀಂ ಇಂಡಿಯಾ ಈ ವಿಶ್ವಕಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.
ದಕ್ಷಿಣ ಆಫ್ರಿಕಾ ಪರ ಕ್ವೆನಾ ಮಫಕಾ 32/3, ಟ್ರಿಸ್ಟಾನ್ ಲೂಸ್ 37/3 ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಉದಯ್ ಸಹರನ್
ಸ್ಕೋರ್ ವಿವರ;
ದಕ್ಷಿಣ ಆಫ್ರಿಕಾ: ಬ್ಯಾಟಿಂಗ್- ಲುವಾನ್-ಡ್ರೆ ಪ್ರಿಟೋರಿಯಸ್ 76, ರಿಚರ್ಡ್ ಸೆಲೆಟ್ಸ್ವಾನೆ 64, ನಾಯಕ ಜುವಾನ್ ಜೇಮ್ಸ್ 24. ಬೌಲಿಂಗ್- ರಾಜ್ ಲಿಂಬಾನಿ 60/3, ಮುಷೀರ್ ಖಾನ್ 43/2
ಟೀಂ ಇಂಡಿಯಾ: ಬ್ಯಾಟಿಂಗ್- ಉದಯ್ ಸಹರನ್ 81, ಸಚಿನ್ ದಾಸ್ 96, ರಾಜ್ ಲಿಂಬಾನಿ 13. ಬೌಲಿಂಗ್- ಕ್ವೆನಾ ಮಫಕಾ 32/3, ಟ್ರಿಸ್ಟಾನ್ ಲೂಸ್ 37/3
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…