ನವದೆಹಲಿ : ಆಫ್ರಿಕಾ ಪ್ರಾಂತ್ಯದ ಕೊನೆಯ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ರುವಾಂಡ ತಂಡವನ್ನು ಸೋಲಿಸಿ 2024ರ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಗೆ ಅರ್ಹತೆ ಪಡೆಯುವ ಮೂಲಕ ಉಗಾಂಡ ತಂಡವು ಇತಿಹಾಸ ನಿರ್ಮಿಸಿದೆ.
ಐಸಿಸಿ ವಿಶ್ವಕಪ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಉಗಾಂಡ ತಂಡ ಪಾಲ್ಗೊಳ್ಳಲಿದೆ. ಆ ಮೂಲಕ ನಮೀಬಿಯಾದೊಂದಿಗೆ ಟಿ-20 ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆದ ಎರಡನೆ ಆಫ್ರಿಕಾ ತಂಡವಾಗಿ ಉಗಾಂಡ ಹೊರಹೊಮ್ಮಿದೆ. ಆ ಮೂಲಕ ಟಿ20 ಮಾದರಿಯಲ್ಲಿ ಆಡುತ್ತಿರುವ ಐದನೇ ದೇಶವಾಗಿ ಉಗಾಂಡ ಗುರುತಿಸಿಕೊಂಡಿದೆ.
ತಾನಾಡಿದ ಆರು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗಮನಾರ್ಹ ಗೆಲುವು ಸಾಧಿಸುವ ಮೂಲಕ, ಆಫ್ರಿಕಾ ಪ್ರಾಂತ್ಯದಿಂದ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯಿತು. 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ಆಯೋಜನೆಗೊಳ್ಳಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ನಲ್ಲಿ ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಂಡಿತು.
ಮತ್ತೊಂದೆಡೆ, ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯುವ ನೆಚ್ಚಿನ ತಂಡವಾಗಿದ್ದ ಜಿಂಬಾಬೈ ಕ್ವಾಲಿಫೈ ಆಗುವಲ್ಲಿ ವಿಫಲವಾಗಿದೆ. ತಾನಾಡಿರುವ ಐದು ಪಂದ್ಯಗಳ ಪೈಕಿ ಮೂರು ಪಂದ್ಯಗಳ ಗೆಲುವಿನ ಮೂಲಕ ಆರು ಅಂಕಗಳನ್ನು ಸಂಪಾದಿಸಿರುವ ಜಿಂಬಾಬೈ ತಂಡವು ಸದ್ಯ ಮೂರನೆಯ ಸ್ಥಾನದಲ್ಲಿದೆ.
ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿರುವ ಓಮನ್, ನೇಪಾಳ, ಪಪುವ ನ್ಯೂ ಗಿನಿಯ ಹಾಗೂ ಕೆನಡಾ ತಂಡಗಳೊಂದಿಗೆ ಮತ್ತೊಂದು ಆಫ್ರಿಕಾ ತಂಡವಾಗಿ ನಮೀಬಿಯಾ ಕೂಡಾ ಅರ್ಹತೆ ಗಿಟ್ಟಿಸಿದೆ. ಅತಿಥಿ ದೇಶ ಎಂಬ ಕಾರಣಕ್ಕೆ ಅಮೆರಿಕಾ ಕೂಡಾ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿದೆ.
1998ರಿಂದ ಉಗಾಂಡವು ಐಸಿಸಿಯ ಸಹ ಸದಸ್ಯ ದೇಶವಾಗಿದ್ದರೂ ಈವರೆಗೆ ಅದಕ್ಕೆ ಟೆಸ್ಟ್ ಅಥವಾ ಏಕದಿನ ತಂಡದ ಸ್ಥಾನಮಾನ ದೊರೆತಿಲ್ಲ.
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…