ಬೆಂಗಳೂರು : ಡಿಸೆಂಬರ್ 19 ರಂದು ನಡೆಯುವ ಐಪಿಎಲ್ ಮಿನಿ ಹರಾಜಿಗೂ ಮುನ್ನಾ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರೀಟೆನ್ ಹಾಗೂ ರಿಲೀಸ್ ನಿರ್ಧಾರ ಬೆನ್ನಲ್ಲೇ ಇಂದು (ಸೋಮವಾರ) ಮತ್ತೊಂದು ಬದಲಾವಣೆ ನಡೆದಿದೆ.
ಸದ್ದಿಲ್ಲದೇ ಮುಂಬೈ ನಡೆಸಿದ ಟ್ರೇಡ್ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಗುಜರಾತ್ ಪ್ರಾಂಚೈಸಿ ಹಾರ್ದಿಕ್ ಅವರನ್ನು ಉಳಿಸಿಕೊಳ್ಳಲಿದೆ ಎಂದು ನೆನ್ನೆ ಅಧಿಕೃತವಾಗಿ ಹೇಳಿದ್ದರು. ಆದರೆ ಇಂದು ಟ್ರೇಡ್ ಮೂಲಕ ಹಾರ್ದಿಕ್ ಮುಂಬೈ ಪಾಲಾಗಿದ್ದಾರೆ. ಮತ್ತೊಂದೆಡೆ ಮುಂಬೈ ತಂಡದಲ್ಲಿದ್ದ ಆಸ್ಟ್ರೇಲಿಯಾ ಆಲ್ ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಆಸ್‌ಸಿಬಿ ಕೊಂಡುಕೊಂಡಿದೆ. ಇವೆರಡು ಸದ್ಯ ಕ್ರೀಡಾಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
ಆರ್‌ಸಿಬಿ ಗ್ರೀನ್ ಅವರನ್ನು ಬರೋಬ್ಬರಿ 17.5 ಕೋಟಿ ನೀಡಿ ಆಲ್‌ರೌಂಡರ್ ಆಟಗಾರನನ್ನು ಖರೀದಿಸಿದೆ. ರಿಲೀಸ್ ಹಾಗೂ ರಿಟೇನ್ ಬಳಿಕ ಆರ್‌ಸಿಬಿ ತಂಡದಲ್ಲಿ 40.75 ಕೋಟಿ ರೂಪಾಯಿ ಬಾಕಿ ಉಳಿದಿತ್ತು. ಈ ಮೊತ್ತದಲ್ಲಿ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ಸಜ್ಜಾಗಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಆರ್‌ಸಿಬಿ 17.5 ಕೋಟಿ ರೂಪಾಯಿಗೆ ಕ್ಯಾಮರೂನ್ ಗ್ರೀನ್ ಖರೀದಿಸಿದೆ. ಈ ಮೂಲಕ ಆರ್‌ಸಿಬಿ ಮತ್ತೊಬ್ಬ ಆಲ್ರೌಂಡರ್ ಆಟಗಾರನ ತಂಡಕ್ಕೇ ಸೇರಿಸಿಕೊಂಡಿದೆ.
ಈ ಬಗ್ಗೆ ಆರ್‌ಸಿಬಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮರೋನ್ ಗ್ರೀನ್ ರೆಡ್ ಅಂಡ್ ಗೋಲ್ಡ್ ಪರವಾಗಿ ಐಪಿಎಲ್-2024 ರಲ್ಲಿ ಆಡಲಿದ್ದಾರೆ ಎಂದು ಬರೆದಿಕೊಂಡಿದ್ದಾರೆ. ಇತ್ತ ಮುಂಬೈಗೆ ವಾಪಾಸಾಗಿರುವ ಕುರಿತು, ನೀತಾ ಅಂಬಾನಿ ಹಾಗೂ ಆಕಾಶ್ ಅಂಬಾನಿ ಅವರು ಪಾಂಡ್ಯಗೆ ಸ್ವಾಗತ ಕೋರಿದ್ದಾರೆ.
ಯಾವ ತಂಡದ ಖಜಾನೆಯಲ್ಲಿ ಎಷ್ಟು ಹಣವಿದೆ: ಆರ್‌ಸಿಬಿ-23.25 ಕೋಟಿ, ಎಸ್‌ಆರ್‌ಎಚ್-34 ಕೋಟಿ, ಕೆಕೆಆರ್-32.7 ಕೋಟಿ, ಸಿಎಸ್‌ಕೆ-31.4 ಕೋಟಿ, ಪಂಜಾಬ್-29.1 ಕೋಟಿ, ಡಿಸಿ-28.95 ಕೋಟಿ, ಎಂಐ- 17.75 ಕೋಟಿ, ಅರ್‌ಅರ್-14.5 ಕೋಟಿ, ಎಲ್‌ಎಸ್‌ಜಿ- 13.15 ಕೋಟಿ, ಜಿಟಿ-38.15 ಕೋಟಿ ಹಣ ಪ್ರತಿ ತಂಡದಲ್ಲಿದೆ.
ಟ್ರೇಡ್‌ನಲ್ಲಿ ಆಟಗಾರರ ವಿನಿಮಯ:
ಟ್ರೇಡ್ ವಿಂಡೋ ನಿಯಮದಡಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಶಹಬಾಜ್ ಅಹಮದ್ ಮತ್ತು ಸನ್‌ರೈಸರ್ಸ್ ತಂಡದಲ್ಲಿದ್ದ ಮಯಾಂಕ್ ಡಾಗರ್ ಅವರನ್ನು ಫ್ರಾಂಚೈಸಿಗಳು ಪರಸ್ಪರ ವಿನಿಮಯ ಮಾಡಿಕೊಂಡಿವೆ. ಮತ್ತು ಮುಂಬೈ ತಂಡದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು 17.5 ಕೋಟಿ ನೀಡಿ ಆರ್‌ಸಿಬಿ ಖರೀದಿಸಿದೆ.
ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಅವರನ್ನು ಪಾಂಡ್ಯ ಟ್ರೇಡ್ ಮೂಲಕ ಮುಂಬೈ ಮತ್ತೆ ತನ್ನ ತಂಡಕ್ಕೆ ಬರಮಾಡಿಕೊಂಡಿದೆ.
ಲಖನೌ ತಂಡದಲ್ಲಿ ರೊಮಾರಿಯೋ ಶೆಫರ್ಡ್ ಮತ್ತು ಅವೇಶ್ ಖಾನ್ ಅವರನ್ನು ಬಿಡುಗಡೆ ಮಾಡಲಾಗಿದೆ. ಶೆಫರ್ಡ್ ಮುಂಬೈ ತಂಡವನ್ನು ಹಾಗೂ ಆವೇಶ್ ರಾಜಸ್ತಾನ ತಂಡವನ್ನು ಸೇರಿಕೊಳ್ಳಲಿದ್ದಾರೆ.
ರಾಜಸ್ತಾನ ತಂಡದಲ್ಲಿದ್ದ ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ಶಾಲಾ ಬಸ್ಸನ್ನು ಒಂಟಿ ಸಲಗ ಅಟ್ಟಿಸಿಕೊಂಡು ಬಂದ ಘಟನೆ…
ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು…
ಶಿವಮೊಗ್ಗ: ಮಂಗನ ಕಾಯಿಲೆ ಸೋಂಕಿನಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲ್ಲೂಕಿನ 29 ವರ್ಷದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸಸಿ ತೋಟದ…
ಬಾರಾಮತಿ: ನಿನ್ನೆ ವಿಮಾನ ದುರಂತದಲ್ಲಿ ಸಾವಿಗೀಡಾದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವದೊಂದಿಗೆ…
ಬೆಂಗಳೂರು: ಇಂದಿನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಬೇಸರಗೊಂಡು ಸಚಿವ ಕೆ.ಜೆ.ಜಾರ್ಜ್ ಸಿಎಂ ಸಿದ್ದರಾಮಯ್ಯ…
ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡಿ ಕಾರ್‌ಗಳಿಗೆ ಸರಣಿ ಅಪಘಾತ ಉಂಟು ಮಾಡಿದ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್…