ಡಬ್ಲೂಡಬ್ಲೂಇ ಖ್ಯಾತಿಯ ದಿ ಗ್ರೇಟ್ ಖಲಿ ಗಂಡು ಮಗುವಿನ ತಂದೆಯಾಗಿದ್ದಾರೆ. ಎರಡನೇ ಬಾರಿಗೆ ತಂದೆಯಾಗಿರೊ ಖುಷಿಯಲ್ಲಿರುವ ಖಲಿ ತಮ್ಮ ಅಜಾನುಬಾಹು ತೋಳುಗಳಿಂದ ತಮ್ಮ ಮುದ್ದು ಮಗನನ್ನು ಅಪ್ಪಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಆಶಿರ್ವಾದದಿಂದ ಇಂದು ನಾನು ಗಂಡು ಮಗುವಿನ ತಂದೆಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದೀಗ ಖಲಿ ಎರಡನೇ ಬಾರಿಗೆ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಖಲಿ ಅವರಿಗೆ ಈಗಾಗಲೇ 9 ವರ್ಷದ ಅವ್ಲೀನ್ ಕೌರ್ ಎಂಬ ಮಗಳಿದ್ದಾಳೆ. ಇದೀಗ ಖಲಿ ಕುಟುಂಬಕ್ಕೆ ಜ್ಯೂನಿಯ ಖಲಿ ಆಗಮನವಾಗಿದ್ದು, ಖಲಿ ದಂಪತಿಯ ಸಂಭ್ರಮ ದುಪ್ಪಟ್ಟಾಗಿದೆ.
ಡಬ್ಲೂಡಬ್ಲೂಇ ಕಾರ್ಯಕ್ರಮ ಹಿಂದಿನಿಂದಲೂ ಕೂಡ ಯುವ ಸಮೂಹದ ನೆಚ್ಚಿನ ಆಟವಾಗಿದೆ. ಈ ಪಂದ್ಯದಲ್ಲಿ ಸೆಣಸಾಡುವ ಧೈತ್ಯ ಸ್ಪರ್ಧಾಳುಗಳ ದೇಹದಾಡ್ಯತೆಯನ್ನು ನೋಡಿದರೆ ಎಂತಹವರು ಕೂಡ ಹುಬ್ಬೇರಿಸುತ್ತಾರೆ. ಡಬ್ಲೂಡಬ್ಲೂಇ ಪಂದ್ಯಾಟದ ಭಾರತೀಯ ಕುಸ್ತಿ ಪಟು ದಿ ಗ್ರೇಟ್ ಖಲಿಯಬಗ್ಗೆ ಕೇಳದೆ ಇರುವವರಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಖಲಿಯ ಹೆಸರು ದಲೀಪ್ ಸಿಂಗ್ ರಾಣ. ಡಬ್ಲೂಡಬ್ಲೂಇ ಕಾರ್ಯಕ್ರಮದ ಮೂಲಕ ದಿ ಗ್ರೇಟ್ ಖಲಿ ಎಂದೇ ಖ್ಯಾತರಾಗಿರುವ ಇವರು ತಮ್ಮ ಅಸಧಾರಣ ಎತ್ತರ, ನಿಬ್ಬೆರಗಾಗಿಸುವ ಮೈಕಟ್ಟಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ.
ದಿ ಗ್ರೇಟ್ ಖಲಿ ಅವರು ವಿಶ್ವ ವಿಖ್ಯಾತ ಡಬ್ಲೂಡಬ್ಲೂಇ ಸ್ಪರ್ಧೆಯಲ್ಲಿ ಹೆವಿವೆಯ್ಟ್ ಚಾಂಪಿಯನ್‌ಶಿಪ್ ನಲ್ಲಿ ಜಯಗಳಿಸಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಇನ್ನು ಡಬ್ಲೂಡಬ್ಲೂಇ ಚಾಂಪಿಯನ್‌ಶಿಪ್ ಪಡೆದ ಬಳಿಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ದಿ ಗ್ರೇಟ್ ಖಲಿ ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ.ಅದಷ್ಟೇ ಅಲ್ಲದೇ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೊ ಬಿಗ್ ಬಾಸ್ ಹಿಂದಿ ಯಲ್ಲಿಯೂ ಕೂಡ ಸ್ಪರ್ದಿಯಾಗಿ ಭಾಗವಹಿಸಿದ್ದರು.
ಬೆಂಗಳೂರು: ಇಲ್ಲಿನ ಯಲಹಂಕ, ಫಕೀರ್ ಕಾಲೋನಿ ಹಾಗೂ ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳ ತೆರವು ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಬುಲ್ಡೋಜರ್…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್ ಚಿತ್ರಕ್ಕೂ ಪೈರಸಿ…
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಕಷ್ಟ ಎಂದು ಮಾಜಿ ಎಚ್‌ಡಿಡಿ ಹೇಳಿಕೆ ಕುರಿತು ಬಿಜೆಪಿ…
ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…
ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ…
ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ಸರ್ಕಾರದ…