ಕ್ರೀಡೆ

ಪೂರ್ಣ ಏಷ್ಯಾಕಪ್ ಪಾಕಿಸ್ತಾನದಲ್ಲೇ ನಡೆಯಬೇಕು : ಮತ್ತೆ ಉಲ್ಟಾ ಹೊಡೆದ ಪಾಕಿಸ್ತಾನ

ಏಷ್ಯಾಕಪ್ 2023 : ಪಾಕ್ ಪ್ರಸ್ತಾವನೆಯಂತೆ ಎಸಿಸಿ ಈಗಾಗಲೇ ಏಷ್ಯಾಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಏಷ್ಯಾಕಪ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಎಲ್ಲಾ ಸರ್ಕಸ್​ಗಳ ನಂತರ , ಈ ವರ್ಷದ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಆಯೋಜನೆಗೆ ಅಂತಿಮ ಮುದ್ರೆ ಬಿದ್ದಿತ್ತು. ಬಿಸಿಸಿಐ ಹಾಗೂ ಪಿಸಿಬಿ ನಡುವಣ ಶೀತಲ ಸಮರಕ್ಕೆ ಕೊನೆಗೂ ಅಂತ್ಯ ಸಿಕ್ಕಿತ್ತು. ಆತಿಥೇಯ ಪಾಕಿಸ್ತಾನ ನಿರ್ಧರಿಸಿದಂತೆ, ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ (9ಪಂದ್ಯಗಳನ್ನು ಶ್ರೀಲಂಕಾದಲ್ಲಿ ಮತ್ತು ಉಳಿದ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ) ನಡೆಸಲು ಎಸಿಸಿ ನಿರ್ಧರಿಸಿತ್ತು. ಆದರೆ ಇದೀಗ ಪಾಕಿಸ್ತಾನ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಲು ಮುಂದಾಗಿದೆ.

 ವಾಸ್ತವವಾಗಿ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ ನಜಮ್ ಸೇಥಿ ಹೈಬ್ರಿಡ್ ಮಾದರಿಯನ್ನು ಎಸಿಸಿ ಮುಂದೆ ಪ್ರಸ್ತಾಪಿಸಿದ್ದರು. ಆದರೀಗ ಸೇಥಿ ಅಧಿಕಾರಾವಧಿ ಮುಗಿದಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಝಾಕಾ ಅಶ್ರಫ್ ಇನ್ನೇನು ಅಧಿಕಾರ ಸ್ವೀಕರಿಸಲಿದ್ದಾರೆ. ಇದೀಗ ಅಧಿಕಾರ ಸ್ವೀಕಾರಕ್ಕೂ ಮುನ್ನ ಏಷ್ಯಾಕಪ್ ಆಯೋಜನೆಯ ಬಗ್ಗೆ ಗುಡುಗಿರುವ ಅಶ್ರಫ್ ಹೈಬ್ರಿಡ್ ಮಾದರಿಯನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ವಾಸ್ತವವಾಗಿ ಈ ವರ್ಷದ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿದೆ. ಇದರ ಪ್ರಕಾರ ಏಷ್ಯಾಕಪ್ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಬೇಕಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಹದಗೆಟ್ಟಿರುವ ಸಂಬಂಧಗಳಿಂದಾಗಿ ಟೀಂ ಇಂಡಿಯಾವನ್ನು ಪಾಕ್ ನೆಲಕ್ಕೆ ಕಳುಹಿಸಲು ಭಾರತ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಬಿಸಿಸಿಐ, ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವ ಮನವಿಯನ್ನು ಎಸಿಸಿ ಮುಂದಿಟ್ಟಿತ್ತು. ಆ ಬಳಿಕ ಪಿಸಿಬಿ ಹೈಬ್ರಿಡ್ ಮಾದರಿಯ ಪ್ರಸ್ತಾವನೆಯನ್ನು ಎಸಿಸಿ ಮುಂದೆ ಮಂಡಿಸಿತ್ತು. ನಾನಾ ಕಸರತ್ತುಗಳ ನಂತರ ಬಿಸಿಸಿಐ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಈ ಹೈಬ್ರಿಡ್ ಮಾದರಿಯ ಬದಲಾವಣೆಯನ್ನು ಎಸಿಸಿ ಒಪ್ಪಿಕೊಂಡಿತ್ತು. ಆದರೆ ಇದೀಗ ಅಶ್ರಫ್ ಹೇಳಿಕೆ ಮತ್ತೆ ಸಂಚಲನ ಮೂಡಿಸಿದೆ.

ನಾನು ಈಗಾಗಲೇ ನಿರಾಕರಿಸಿದ್ದೆ : ಮಾಧ್ಯಮಗಳೊಂದಿಗೆ ಮಾತನಾಡಿದ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಅಶ್ರಫ್ ಅವರು ಈಗಾಗಲೇ ಈ ಹೈಬ್ರಿಡ್ ಮಾದರಿಯನ್ನು ನಾನು ವಿರೋಧಿಸಿ ತಿರಸ್ಕರಿಸಿದ್ದೆ. ಪಾಕಿಸ್ತಾನ ಏಷ್ಯಾಕಪ್ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಅಂದ ಮೇಲೆ ಪಂದ್ಯಾವಳಿ ಪಾಕಿಸ್ತಾನದಲ್ಲೇ ನಡೆಯಬೇಕು. ಎಲ್ಲಾ ಪ್ರಮುಖ ಪಂದ್ಯಗಳು ಪಾಕಿಸ್ತಾನದ ಹೊರಗೆ ನಡೆಯುತ್ತಿವೆ. ಕೇವಲ ನೇಪಾಳ ಮತ್ತು ಭೂತಾನ್ನಂತಹ ತಂಡಗಳು ಪಾಕಿಸ್ತಾನದಲ್ಲಿ ಆಡಲಿವೆ. ಇದು ಪಾಕಿಸ್ತಾನಕ್ಕೆ ನ್ಯಾಯೋಚಿತವಲ್ಲ. ಮಂಡಳಿಯು ಈ ಹಿಂದೆ ಏನು ನಿರ್ಧರಿಸಿದೆ ಎಂದು ನನಗೆ ತಿಳಿದಿಲ್ಲ. ನಾನು ಪರಿಶೀಲಿಸುತ್ತೇನೆ, ಕಡಿಮೆ ಸಮಯದಲ್ಲಿ ಏನು ಮಾಡಬಹುದೋ ಅದನ್ನು ಪಾಕಿಸ್ತಾನದ ಒಳಿತಿಗಾಗಿ ಮಾಡುತ್ತೇನೆ” ಎಂದು ಅವರು ಹೇಳಿದರು.

ವಿಶ್ವಕಪ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದರೆ ವೇಳಾಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ. ಪಾಕಿಸ್ತಾನದ ಮುಂದೆ ಸವಾಲುಗಳಿವೆ, ಬಾಕಿ ಉಳಿದಿರುವ ಸಮಸ್ಯೆಗಳಿವೆ, ಏಷ್ಯಾಕಪ್ ಇದೆ, ನಂತರ ವಿಶ್ವಕಪ್, ತಂಡದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆಗಳು ನಮ್ಮ ಮುಂದಿವೆ. ಸದ್ಯಕ್ಕೆ ನಾನು ಯಾರ ವಿರುದ್ಧವೂ ಮಾತನಾಡಲು ಬಯಸುವುದಿಲ್ಲ ಏಕೆಂದರೆ ನಾನು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ.

ನಾನು ಅಧಿಕಾರ ವಹಿಸಿಕೊಂಡ ನಂತರ, ಸನ್ನಿವೇಶ ಏನೆಂದು ನೋಡುತ್ತೇನೆ. ನಾನು ಏನನ್ನೂ ಮುಚ್ಚಿಡುವುದಿಲ್ಲ. ಎಲ್ಲವನ್ನೂ ಮಾಧ್ಯಮದ ಮುಂದೆ ತೆರೆದಿಡುತ್ತೇನೆ. ಪಾಕಿಸ್ತಾನದ ಒಳಿತಿಗಾಗಿ ನಾವು ಕೆಲಸ ಮಾಡಬೇಕು, ನಮಗೆ ಸ್ಪಷ್ಟ ಪ್ರಜ್ಞೆ ಇದೆ ಎಂದು ಅಶ್ರಫ್ ಹೇಳಿದರು.

ಪಾಕಿಸ್ತಾನವಿಲ್ಲದೆ ಏಷ್ಯಾಕಪ್ ನಡೆಯುವ ಸಾಧ್ಯತೆ : ಅಶ್ರಫ್ ಹೇಳಿಕೆ ಕುರಿತು ಬಿಸಿಸಿಐ ಅಥವಾ ಎಸಿಸಿಯಿಂದ ಇದುವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ಪಾಕ್ ಪ್ರಸ್ತಾವನೆಯಂತೆ ಎಸಿಸಿ ಈಗಾಗಲೇ ಏಷ್ಯಾಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಏಷ್ಯಾಕಪ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಹೀಗಿರುವಾಗ ಅಶ್ರಫ್ ಹೇಳಿಕೆ ಗಾಳಿಯಲ್ಲಿ ಗುಂಡು ಹಾರಿಸಿದಂತ್ತಾಗಿದೆ. ಒಂದು ವೇಳೆ ಅಶ್ರಫ್ ತಮ್ಮ ನಿಲುವು ಬದಲಾಯಿಸದಿದ್ದರೆ, ಪಾಕಿಸ್ತಾನವಿಲ್ಲದೆ ಏಷ್ಯಾಕಪ್ ನಡೆಯುವ ಸಾಧ್ಯತೆಗಳಿವೆ.

lokesh

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

2 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

2 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

2 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

2 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

3 hours ago