ಏಷ್ಯಾಕಪ್ 2023 : ಪಾಕ್ ಪ್ರಸ್ತಾವನೆಯಂತೆ ಎಸಿಸಿ ಈಗಾಗಲೇ ಏಷ್ಯಾಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಏಷ್ಯಾಕಪ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ.
ಎಲ್ಲಾ ಸರ್ಕಸ್ಗಳ ನಂತರ , ಈ ವರ್ಷದ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಆಯೋಜನೆಗೆ ಅಂತಿಮ ಮುದ್ರೆ ಬಿದ್ದಿತ್ತು. ಬಿಸಿಸಿಐ ಹಾಗೂ ಪಿಸಿಬಿ ನಡುವಣ ಶೀತಲ ಸಮರಕ್ಕೆ ಕೊನೆಗೂ ಅಂತ್ಯ ಸಿಕ್ಕಿತ್ತು. ಆತಿಥೇಯ ಪಾಕಿಸ್ತಾನ ನಿರ್ಧರಿಸಿದಂತೆ, ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ (9ಪಂದ್ಯಗಳನ್ನು ಶ್ರೀಲಂಕಾದಲ್ಲಿ ಮತ್ತು ಉಳಿದ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ) ನಡೆಸಲು ಎಸಿಸಿ ನಿರ್ಧರಿಸಿತ್ತು. ಆದರೆ ಇದೀಗ ಪಾಕಿಸ್ತಾನ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಲು ಮುಂದಾಗಿದೆ.
ವಾಸ್ತವವಾಗಿ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ ನಜಮ್ ಸೇಥಿ ಹೈಬ್ರಿಡ್ ಮಾದರಿಯನ್ನು ಎಸಿಸಿ ಮುಂದೆ ಪ್ರಸ್ತಾಪಿಸಿದ್ದರು. ಆದರೀಗ ಸೇಥಿ ಅಧಿಕಾರಾವಧಿ ಮುಗಿದಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಝಾಕಾ ಅಶ್ರಫ್ ಇನ್ನೇನು ಅಧಿಕಾರ ಸ್ವೀಕರಿಸಲಿದ್ದಾರೆ. ಇದೀಗ ಅಧಿಕಾರ ಸ್ವೀಕಾರಕ್ಕೂ ಮುನ್ನ ಏಷ್ಯಾಕಪ್ ಆಯೋಜನೆಯ ಬಗ್ಗೆ ಗುಡುಗಿರುವ ಅಶ್ರಫ್ ಹೈಬ್ರಿಡ್ ಮಾದರಿಯನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
ವಾಸ್ತವವಾಗಿ ಈ ವರ್ಷದ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿದೆ. ಇದರ ಪ್ರಕಾರ ಏಷ್ಯಾಕಪ್ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಬೇಕಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಹದಗೆಟ್ಟಿರುವ ಸಂಬಂಧಗಳಿಂದಾಗಿ ಟೀಂ ಇಂಡಿಯಾವನ್ನು ಪಾಕ್ ನೆಲಕ್ಕೆ ಕಳುಹಿಸಲು ಭಾರತ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಬಿಸಿಸಿಐ, ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವ ಮನವಿಯನ್ನು ಎಸಿಸಿ ಮುಂದಿಟ್ಟಿತ್ತು. ಆ ಬಳಿಕ ಪಿಸಿಬಿ ಹೈಬ್ರಿಡ್ ಮಾದರಿಯ ಪ್ರಸ್ತಾವನೆಯನ್ನು ಎಸಿಸಿ ಮುಂದೆ ಮಂಡಿಸಿತ್ತು. ನಾನಾ ಕಸರತ್ತುಗಳ ನಂತರ ಬಿಸಿಸಿಐ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಈ ಹೈಬ್ರಿಡ್ ಮಾದರಿಯ ಬದಲಾವಣೆಯನ್ನು ಎಸಿಸಿ ಒಪ್ಪಿಕೊಂಡಿತ್ತು. ಆದರೆ ಇದೀಗ ಅಶ್ರಫ್ ಹೇಳಿಕೆ ಮತ್ತೆ ಸಂಚಲನ ಮೂಡಿಸಿದೆ.
ನಾನು ಈಗಾಗಲೇ ನಿರಾಕರಿಸಿದ್ದೆ : ಮಾಧ್ಯಮಗಳೊಂದಿಗೆ ಮಾತನಾಡಿದ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಅಶ್ರಫ್ ಅವರು ಈಗಾಗಲೇ ಈ ಹೈಬ್ರಿಡ್ ಮಾದರಿಯನ್ನು ನಾನು ವಿರೋಧಿಸಿ ತಿರಸ್ಕರಿಸಿದ್ದೆ. ಪಾಕಿಸ್ತಾನ ಏಷ್ಯಾಕಪ್ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಅಂದ ಮೇಲೆ ಪಂದ್ಯಾವಳಿ ಪಾಕಿಸ್ತಾನದಲ್ಲೇ ನಡೆಯಬೇಕು. ಎಲ್ಲಾ ಪ್ರಮುಖ ಪಂದ್ಯಗಳು ಪಾಕಿಸ್ತಾನದ ಹೊರಗೆ ನಡೆಯುತ್ತಿವೆ. ಕೇವಲ ನೇಪಾಳ ಮತ್ತು ಭೂತಾನ್ನಂತಹ ತಂಡಗಳು ಪಾಕಿಸ್ತಾನದಲ್ಲಿ ಆಡಲಿವೆ. ಇದು ಪಾಕಿಸ್ತಾನಕ್ಕೆ ನ್ಯಾಯೋಚಿತವಲ್ಲ. ಮಂಡಳಿಯು ಈ ಹಿಂದೆ ಏನು ನಿರ್ಧರಿಸಿದೆ ಎಂದು ನನಗೆ ತಿಳಿದಿಲ್ಲ. ನಾನು ಪರಿಶೀಲಿಸುತ್ತೇನೆ, ಕಡಿಮೆ ಸಮಯದಲ್ಲಿ ಏನು ಮಾಡಬಹುದೋ ಅದನ್ನು ಪಾಕಿಸ್ತಾನದ ಒಳಿತಿಗಾಗಿ ಮಾಡುತ್ತೇನೆ” ಎಂದು ಅವರು ಹೇಳಿದರು.
ವಿಶ್ವಕಪ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದರೆ ವೇಳಾಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ. ಪಾಕಿಸ್ತಾನದ ಮುಂದೆ ಸವಾಲುಗಳಿವೆ, ಬಾಕಿ ಉಳಿದಿರುವ ಸಮಸ್ಯೆಗಳಿವೆ, ಏಷ್ಯಾಕಪ್ ಇದೆ, ನಂತರ ವಿಶ್ವಕಪ್, ತಂಡದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆಗಳು ನಮ್ಮ ಮುಂದಿವೆ. ಸದ್ಯಕ್ಕೆ ನಾನು ಯಾರ ವಿರುದ್ಧವೂ ಮಾತನಾಡಲು ಬಯಸುವುದಿಲ್ಲ ಏಕೆಂದರೆ ನಾನು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ.
ನಾನು ಅಧಿಕಾರ ವಹಿಸಿಕೊಂಡ ನಂತರ, ಸನ್ನಿವೇಶ ಏನೆಂದು ನೋಡುತ್ತೇನೆ. ನಾನು ಏನನ್ನೂ ಮುಚ್ಚಿಡುವುದಿಲ್ಲ. ಎಲ್ಲವನ್ನೂ ಮಾಧ್ಯಮದ ಮುಂದೆ ತೆರೆದಿಡುತ್ತೇನೆ. ಪಾಕಿಸ್ತಾನದ ಒಳಿತಿಗಾಗಿ ನಾವು ಕೆಲಸ ಮಾಡಬೇಕು, ನಮಗೆ ಸ್ಪಷ್ಟ ಪ್ರಜ್ಞೆ ಇದೆ ಎಂದು ಅಶ್ರಫ್ ಹೇಳಿದರು.
ಪಾಕಿಸ್ತಾನವಿಲ್ಲದೆ ಏಷ್ಯಾಕಪ್ ನಡೆಯುವ ಸಾಧ್ಯತೆ : ಅಶ್ರಫ್ ಹೇಳಿಕೆ ಕುರಿತು ಬಿಸಿಸಿಐ ಅಥವಾ ಎಸಿಸಿಯಿಂದ ಇದುವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ಪಾಕ್ ಪ್ರಸ್ತಾವನೆಯಂತೆ ಎಸಿಸಿ ಈಗಾಗಲೇ ಏಷ್ಯಾಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಏಷ್ಯಾಕಪ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಹೀಗಿರುವಾಗ ಅಶ್ರಫ್ ಹೇಳಿಕೆ ಗಾಳಿಯಲ್ಲಿ ಗುಂಡು ಹಾರಿಸಿದಂತ್ತಾಗಿದೆ. ಒಂದು ವೇಳೆ ಅಶ್ರಫ್ ತಮ್ಮ ನಿಲುವು ಬದಲಾಯಿಸದಿದ್ದರೆ, ಪಾಕಿಸ್ತಾನವಿಲ್ಲದೆ ಏಷ್ಯಾಕಪ್ ನಡೆಯುವ ಸಾಧ್ಯತೆಗಳಿವೆ.
ಬೆಂಗಳೂರು: ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆದ ಬೃಹತ್ ಹೋರಾಟ ಕುರಿತು ಗೃಹ ಸಚಿವ ಪರಮೇಶ್ವರ್…
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ 11 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು…
ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು ಪುನರ್ರಚಿಸಬೇಕು, ಮೊದಲ ಬಾರಿ ಶಾಸಕರಾಗಿರುವವರಿಗೆ ಸಂಪುಟದಲ್ಲಿ ಐದು ಸ್ಥಾನಗಳನ್ನು ನೀಡಬೇಕು, ಕೆಲಸ ಮಾಡದ…
ಮೈಸೂರು: ಮೈಸೂರು ನಗರ ಪೊಲೀಸ್ ಸ್ವತ್ತು ಕಳುವು ಪ್ರಕರಣಗಳನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಕೆಟ್ಟ ಕೊಳಕು ಆಡಳಿತದಿಂದ ಸಮಾಜದ ಪ್ರತಿ ವರ್ಗ ಬೀದಿಗಿಳಿದು ಹೋರಾಟ ನಡೆಸುತ್ತಿದೆ ಎಂದು ವಿಪಕ್ಷ…
ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದುಗೆ ಉರುಳಿ ಬಿದ್ದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ…