ಕ್ರೀಡೆ

ಟೆನ್ನಿಸ್ ಅಂಗಳಕ್ಕೆ ವಿದಾಯ ಹೇಳಿದ ರೋಜರ್ ಫೆಡರರ್

ಟೆನಿಸ್​ ಲೋಕದ ದಿಗ್ಗಜ, 20 ಗ್ರ್ಯಾಂಡ್​ಸ್ಲ್ಯಾಮ್​ಗಳ ಒಡೆಯ ರೋಜರ್ ಫೆಡರರ್​ ಟೆನಿಸ್​ ಅಂಗಳದಿಂದ ಹಿಂದೆ ಸರಿದಿದ್ದಾರೆ. ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್ ನಂತರ ಅಧಿಕೃತವಾಗಿ ಟೆನ್ನಿಸ್​ ಅಂಗಳದಿಂದ ನಿವೃತ್ತಿ ಹೊಂದುವುದಾಗಿ 41 ವರ್ಷದ ಟೆನ್ನಿಸ್ ಪಟು ರೋಜರ್ ಫೆಡರರ್ ಟ್ವೀಟ್​ ಮಾಡಿದ್ದಾರೆ.

ವಿದಾಯದ ಬರಹವುಳ್ಳ ಎರಡು ಪುಟಗಳನ್ನು ಪೋಸ್ಟ್​ ಮಾಡಿರುವ ರೋಜರ್​, ಟೆನ್ನಿಸ್‌ನೊಂದಿಗಿನ ಸಂಬಂಧವನ್ನು ಮುಂದುವರೆಸುವೆ. ಆದರೆ ಲಂಡನ್​ನಲ್ಲಿ ನಡೆಯುವ ಲೇವರ್ ಕಪ್ ನನ್ನ ವೃತ್ತಿಯ ಕೊನೆಯ ಟೂರ್ನಿಯಾಗಲಿದೆ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಗಾಯದ ಸಮಸ್ಯೆ, ಶಸ್ತ್ರಚಿಕಿತ್ಸೆಗಳ ಗೋಜಿಲಿನಿಂದ ಬಳಲಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ಮರಳಲು ಇಚ್ಛಿಸಿದ್ದೆ. ಆದರೆ, ನನ್ನ ದೇಹ ಸಹಕರಿಸುತ್ತಿಲ್ಲ. ಅದರ ಇತಿಮಿತಿಗಳು ನನಗೆ ತಿಳಿದಿದೆ. ನನಗೀಗ 41 ವರ್ಷ’ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

24 ವರ್ಷಗಳಲ್ಲಿ 1,500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ಲೋಕ ನಾನಂದುಕೊಂಡಿದ್ದಕ್ಕಿಂತ ಹೆಚ್ಚೇ ನನ್ನನ್ನು ಬಿಗಿದಪ್ಪಿದೆ. ಈ ಸಮಯ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸಲು ಸುಸಮಯ ಎಂಬುದನ್ನು ಅರಿತುಕೊಂಡಿದ್ದೇನೆ. ಭವಿಷ್ಯದಲ್ಲಿ ಟೆನಿಸ್ ಆಡಿದರೂ, ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ಟೆನ್ನಿಸ್​ ಲೋಕದ ಹಿರಿಯ ಆಟಗಾರನಾಗಿರುವ ರೋಜರ್​ ಫೆಡರರ್​ 2018 ರಲ್ಲಿ ಆಸ್ಟ್ರೇಲಿಯನ್​ ಓಪನ್​ ಗೆದ್ದಿದ್ದೇ ಕೊನೆಯ ಗ್ರ್ಯಾಂಡ್​ಸ್ಲ್ಯಾಮ್​ ಆಗಿದೆ. 2019 ರಲ್ಲಿ ವಿಂಬಲ್ಡನ್ ಫೈನಲ್ ತಲುಪಿದ್ದರೂ, ಸೆರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಸೋಲು ಕಂಡು 21 ನೇ ಪ್ರಶಸ್ತಿಯಿಂದ ವಂಚಿತರಾದರು.

ಇದಾದ ಬಳಿಕ ಪದೇ ಪದೆ ಗಾಯಕ್ಕೆ ತುತ್ತಾದ ಫೆಡರರ್​ ಸ್ಪರ್ಧಾತ್ಮಕ ಟೆನ್ನಿಸ್​ಗೆ ಮರಳಲು ಪರದಾಡಿದರು. ಕಳೆದ ವರ್ಷವೂ ವಿಂಬಲ್ಡನ್​ ಟೂರ್ನಿ ವೇಳೆ ಗಾಯಗೊಂಡು ಹೊರಬಿದ್ದಿದ್ದರು. ಟೆನ್ನಿಸ್​ ಜಗತ್ತಿನ ತ್ರಿವಳಿಗಳಲ್ಲಿ ಒಬ್ಬರಾಗಿದ್ದ ಫೆಡರರ್​ಗಿಂತಲೂ ಸ್ಪೇನ್​ನ ರಾಫೆಲ್​ ನಡಾಲ್​ 22, ಸರ್ಬಿಯಾದ ನೊವಾಕ್​ ಜಾಕೊವಿಕ್​ 21 ಗ್ರ್ಯಾಂಡ್​ಸ್ಲ್ಯಾಮ್​ ಜಯಿಸಿದ್ದಾರೆ.

 

 

andolanait

Recent Posts

ಕೆಕೆಆರ್‌ಗೆ ಮುಖಭಂಗ ; ಮೊದಲ ಗೆಲುವು ದಾಖಲಿಸಿದ ಎಸ್‌ಆರ್‌ಎಚ್‌

ಕೋಲ್ಕತ್ತಾ : ಹೆನ್ರಿಚ್ ಕ್ಲಾಸೆನ್ ಅರ್ಧಶತಕದಾಟ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡರ್ ಆಟದ ನೆರವಿನಿಂದ ಅತಿಥೇಯ ಕೋಲ್ಕತ್ತಾ…

5 hours ago

ಮೈಸೂರು ಫಾಲ್ಕನ್ ಟೈರ್ಸ್‌ನ ಮಾಜಿ ಮಾಲೀಕ ರುಹಿಯಾ ಬಂಧನ

315 ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನ ಕೋಲ್ಕತ್ತಾ : ಶೆಲ್‌ ಕಂಪನಿಗಳು ಮತ್ತು ಕ್ರಿಪ್ಟೋಕರೆನ್ಸಿ ಆಧಾರಿತ ಹಣ ವರ್ಗಾವಣೆಯ…

6 hours ago

ಹೊರ್ಮುಜ್ ಕುರಿತು ಬ್ರಿಟನ್ ನೇತೃತ್ವದ ಸಭೆಯಲ್ಲಿ ಭಾರತ ಭಾಗವಹಿಸಲಿದೆ

ಲಂಡನ್‌ : ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಫೆಬ್ರವರಿ 28ರಿಂದ ಮುಚ್ಚಲ್ಪಟ್ಟಿರುವ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಚರ್ಚಿಸಲು ಬ್ರಿಟನ್…

6 hours ago

ಸಂವಿಧಾನ ಬದಲಾವಣೆ ಅಸಾಧ್ಯ : ಮುಖ್ಯಮಂತ್ರಿ ಚಂದ್ರು

ಮೈಸೂರು : ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲ ತತ್ವಗಳನ್ನು…

7 hours ago

KSOU | ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ…

8 hours ago

ನಕ್ಸಲ್ ಮುಕ್ತ ಮಾಡಿದ ಮೊದಲ ರಾಜ್ಯ ಕರ್ನಾಟಕ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ಬಹಳ ವರ್ಷಗಳ ಹಿಂದೆಯೇ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌) ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು…

9 hours ago