ಬಾರ್ಬಡೋಸ್: ಇಲ್ಲಿನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್-8ನಲ್ಲಿ ಮುಖಾಮುಖಿಯಾಗಿದ್ದ ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಿನ ಪಂದ್ಯದಲ್ಲಿ ಅಫ್ಘನ್ ವಿರುದ್ಧ ಟೀಂ ಇಂಡಿಯಾ 47 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 181 ರನ್‌ಗಳಿಸಿ 182 ರನ್‌ಗಳ ಗುರಿ ನೀಡಿತು. ಈ ಬೃಹತ್ ಮೊತ್ತ ಬೆನ್ನತ್ತಿದ ಅಫ್ಘಾನಿಸ್ತಾನ್ 20 ಓವರ್‌ಗಳಲ್ಲಿ ಆಲ್‌ಔಟ್ ಆಗುವ ಮೂಲಕ 134ರನ್ ಗಳಿಸಿ 47 ರನ್‌ಗಳ ಅಂತರದಿಂದ ಸೋಲು ಕಂಡಿದೆ.
ಟೀಂ ಇಂಡಿಯಾ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು. ರೋಹಿತ್ 8(13) ರನ್, ವಿರಾಟ್ ಕೊಹ್ಲಿ 24(24)ರನ್ ಗಳಿಸಿದರು. ಈ ಇಬ್ಬರು ಆರಂಭಿಕರ ನಿರ್ಗಮನದ ಬಳಿಕ ಬಂದ ರಿಷಭ್ ಪಂತ್ 20(11)ರನ್ ಗಳಿಸಿದರೇ, ಒಂಟಿಯಾಗಿ ಇನ್ನಿಂಗ್ಸ್ ಕಟ್ಟಿದ ಸೂರ್ಯಕುಮಾರ್ ಯಾದವ್ 28ಎಸೆತಗಳಲ್ಲಿ 5ಬೌಂಡರಿ ಹಾಗೂ 3ಸಿಕ್ಸರ್ ಸಹಿತ 53 ರನ್ ಗಳಿಸಿ ಔಟಾದರು.
ಉಳಿದಂತೆ ಶಿವಂ ದುಬೆ 10(7) ರನ್, ಹಾರ್ದಿಕ್ ಪಾಂಡ್ಯ 32(24) ರನ್, ರವೀಂದ್ರ ಜಡೇಜಾ 7(5)ರನ್, ಅಕ್ಷರ್ ಪಟೇಲ್ 12(6)ರನ್ ಹಾಗೂ ಅರ್ಷ್‌ದೀಪ್ ಔಟಾಗದೇ 2(2) ರನ್ ಗಳಿಸಿದರು.
ಅಫ್ಘನ್ ಪರ ನಾಯಕ ರಶೀದ್ ಖಾನ್ ಹಾಗೂ ಫರೂಖಿ ತಲಾ 3 ವಿಕೆಟ್, ನವೀನ್ ಉಲ್-ಹಕ್ ಒಂದು ವಿಕೆಟ್ ಪಡೆದು ಗಮನ ಸೆಳೆದರು.
ಅಫ್ಘಾನಿಸ್ತಾನ್ ಇನ್ನಿಂಗ್ಸ್: ಟೀಂ ಇಂಡಿಯಾ ನೀಡಿದ ಬೃಹತ್ ಬೆನ್ನತ್ತಿದ ಅಫ್ಘಾನಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಯಿತು. ಅರ್ಜತ್ತುಲ್ಲಾ ಝಾಝಿ 2(4) ಬುಮ್ರಾ ಅವರ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. ಗುರ್ಬಾಜ್ 11(8)ರನ್, ಜರ್ದಾನ್ 8(11) ರನ್ ಗಳಿಸಿ ಔಟಾದರು. ಅಫ್ಘನ್ ಪವರ್ ಪ್ಲೇನಲ್ಲಿ ಕೇವಲ 23ರನ್ ಗಳಿಸಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ತಂಡದ ಪರವಾಗಿ ಓಮರ್ಜಾಯ್ 26(20)ರನ್ ಗಳಿಸಿದ್ದೆ ಅತಿಹೆಚ್ಚು ರನ್ ಆಗಿತ್ತು. ಗಲ್ಬದಿನ್ ನೈಬ್ 17(21) ರನ್, ಜರ್ದಾನ್ 19(17) ರನ್, ಮೊಹಮದ್ ನಬಿ 14(14) ರನ್, ನಾಯಕರ ರಶೀದ್ ಖಾನ್ 2(6) ರನ್, ನೂರ್ ಅಹ್ಮದ್ 12(18) ರನ್, ನವೀನ್ ಉಲ್-ಹಕ್ ಶೂನ್ಯಕ್ಕೆ ಔಟಾದರೇ, ಫರೂಕಿ ಔಟಾಗದೇ 4(1) ರನ್ ಗಳಿಸಿದರು.
ಟೀಂ ಇಂಡಿಯಾ ಪರ ಜಸ್‌ಪ್ರಿತ್ ಬುಮ್ರಾ 4 ಓವರ್ ಬೌಲಿಂಗ್ ಮಾಡಿ ಕೇವಲ 7 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಅರ್ಷದೀಪ್ 3 ವಿಕೆಟ್, ಕುಲ್ದೀಪ್ ಯಾದವ್ 2 ವಿಕೆಟ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ಪಡೆದು ಮಿಂಚಿದರು.
ಪಂದ್ಯ ಶ್ರೇಷ್ಠ: ಸೂರ್ಯಕುಮಾರ್ ಯಾದವ್
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಸಮೀಪದ ಕಲ್ಲುಕಟ್ಟೆ ಬಳಿಯ ಜಮೀನಿನ ತೋಟದ ಮನೆಯ ಬಳಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಪೈಕಿ ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ನೆರೆಯ ತಮಿಳುನಾಡು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು,…
ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ರಣವೀರ್ ಸಿಂಗ್ ಅಭಿನಯದ ಧುರಂಧರ್-2 ದಾಖಲೆಗಳನ್ನು ಮುರಿಯುತ್ತಿದೆ. ನಾಲ್ಕು ದಿನಗಳ ಹಿಂದೆ ಬಿಡುಗಡೆಯಾದ ಚಿತ್ರವು ಬಾಕ್ಸಾಫೀಸ್‌ನಲ್ಲಿ…
ವಾಷಿಂಗ್ಟನ್: ಅಮೇರಿಕಾದ ಜೊತೆ ಮಾತುಕತೆ ನಡೆಸಲು ಇರಾನಿನ ಹೊಸ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.…
ಬೆಂಗಳೂರು: ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ದೊರಕಿಸಲಾಗುವುದು ಎಂದು…