ಗಯಾನಾ: ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 68 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಅರ್ಧಶತಕ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಕಿ ಎದುರಾಳಿ ಇಂಗ್ಲೆಂಡ್‌ಗೆ 172 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದರು. ವಿರಾಟ್ ಕೊಹ್ಲಿ 9 ರನ್‌ಗಳಿಗೆ ಔಟ್ ಆದರೆ, ರೋಹಿತ್ ಶರ್ಮಾ 57 (39) ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ರಿಷಬ್ ಪಂತ್ 4 ರನ್ ಕಲೆಹಾಕಿದರೆ, ಸೂರ್ಯಕುಮಾರ್ ಯಾದವ್ 47 (36) ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ 23 (13) ರನ್, ರವೀಂದ್ರ ಜಡೇಜಾ ಅಜೇಯ 17, ಶಿವಮ್ ದುಬೆ ಡಕ್‌ಔಟ್, ಅಕ್ಷರ್ ಪಟೇಲ್ 10 ಮತ್ತು ಅರ್ಷ್‌ದೀಪ್ ಸಿಂಗ್ ಅಜೇಯ 1 ರನ್ ಗಳಿಸಿದರು.
ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್ 3 ವಿಕೆಟ್, ಆದಿಲ್ ರಶೀದ್, ಸ್ಯಾಮ್ ಕರನ್, ಜೋಫ್ರಾ ಆರ್ಚರ್ ಮತ್ತು ರೀಸ್ ಟಾಪ್ಲಿ ತಲಾ ಒಂದೊಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಇನ್ನಿಂಗ್ಸ್: ಭಾರತ ನೀಡಿದ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲಿಫ್ ಸಾಲ್ಟ್ 5 ರನ್ ಹಾಗೂ ಜೋಸ್ ಬಟ್ಲರ್ 23 ರನ್ ಗಳಿಸಿದರು. ಇನ್ನುಳಿದಂತೆ ಮೊಯಿನ್ ಅಲಿ 8, ಜಾನಿ ಬೈರ್‌ಸ್ಟೋ ಡಕ್‌ಔಟ್, ಹ್ಯಾರಿ ಬ್ರೂಕ್ 25, ಸ್ಯಾಮ್ ಕರನ್ 2, ಲಿಯಾಮ್ ಲಿವಿಂಗ್‌ಸ್ಟನ್ 11, ಕ್ರಿಸ್ ಜೋರ್ಡನ್ 1, ಜೋಫ್ರಾ ಆರ್ಚರ್ 21, ಆದಿಲ್ ರಶೀದ್ 2 ಮತ್ತು ರೀಸ್ ಟಾಪ್ಲಿ ಅಜೇಯ 3 ರನ್ ಗಳಿಸಿದರು.
ಭಾರತದ ಪರ ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ತಲಾ 3 ವಿಕೆಟ್ ಪಡೆದರೆ, ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.
ಹುಣಸೂರು: ರಸ್ತೆ ಮಣ್ಣಿನ ವಿಚಾರಕ್ಕೆ ಗಲಾಟೆ ನಡೆದ ಪರಿಣಾಮ ಮೂವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ…
ಹುಣಸೂರು: ಪಾಳು ಬಾವಿಗೆ ಬಿದ್ದಿದ್ದ ಕಾಡುಹಂದಿಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಮದಲ್ಲಿ…
ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಮೇ.1ರಿಂದ ಜಾರಿಗೆ ಬರುವಂತೆ 993ರೂ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ 991…
ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಮಂಡ್ಯ:ಪತ್ನಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ೨ನೇ ಅಪರ ಜಿಲ್ಲಾ…
ಜಾಗೃತಿ ಉಳುಮೆಗೆ ಮಳೆಯಿಲ್ಲದೆ ಕುಲುಮೆಯಾಗಿದೆ ಇಳೆ ಹೆಚ್ಚಿದ ತಾಪಮಾನ ಬದಲಾವಣೆಯ ಹವಾಮಾನಕೆ ದೇಹದ ಆಂತರಿಕ ತಂಪು ವಿಫಲ ಅದಕೆ ಹೆಚ್ಚುತ್ತಿದೆ…
ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಸ್ವಾಗತಾರ್ಹ. ಇಂದಿನ ಶೇ.೮೦ರಷ್ಟು ಸಿನಿಮಾ ಹಾಡುಗಳು ದ್ವಂದ್ವಾರ್ಥ ಹಾಗೂ…