ಈ ಬಾರಿ ವಿಶ್ವಕಪ್‌ನಲ್ಲಿ ೧೬ ತಂಡಗಳು ಭಾಗಿ; ನ.೧೩ರಂದು ಫೈನಲ್ ಪಂದ್ಯಾವಳಿ
ಮೈಸೂರು: ಭರಪೂರ ಮನೋರಂಜನೆಯ ಆಗರ ಎಂದೇ ಖ್ಯಾತಿ ಗಳಿಸಿರುವ ಟಿ-೨೦ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಇಂದಿನಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ.
ನ.೧೩ರಂದು ನಡೆಯಲಿರುವ ಫೈನಲ್ ಪಂದ್ಯವನ್ನು ಸೇರಿಸಿಕೊಂಡು ಒಟ್ಟು ೪೫ ಪಂದ್ಯಗಳು ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲಿದೆ.
ಈ ಬಾರಿ ವಿಶ್ವಕಪ್‌ನಲ್ಲಿ ೧೬ ತಂಡಗಳು ಭಾಗವಹಿಸಲಿದ್ದು, ಅದರಲ್ಲಿ ೮ ತಂಡಗಳನ್ನು ತಲಾ ೪ ತಂಡಗಳಂತೆ ಎರಡು ಗ್ರೂಪ್‌ಗಳಾಗಿ ಮಾಡಲಾಗಿದೆ. ಈ ಎರಡು ಗ್ರೂಪ್‌ನಲ್ಲಿ ಮೊದಲ ಎರಡು ಸ್ಥಾನವನ್ನು ಗಳಿಸುವ ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಸಿಕ್ಸ್ ವಿಭಾಗದಲ್ಲೂ ಎರಡು ಗುಂಪುಗಳನ್ನು ಮಾಡಲಾ ಗಿದ್ದು, ಇಲ್ಲೂ ತಮ್ಮ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿವೆ.
ಅರ್ಹತಾ ಸುತ್ತಿನ ಮೊದಲ ಪಂದ್ಯವು ಅ.೧೬ರಂದು ಶ್ರೀಲಂಕಾ ಹಾಗೂ ನಮಿಬಿಯಾ ನಡುವೆ ಪ್ರಾರಂಭವಾಗುವುದರೊಂದಿಗೆ ಟಿ-೨೦ ವಿಶ್ವಕಪ್ ಪಂದ್ಯಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಸೂಪರ್ ಸಿಕ್ಸ್ ಪಂದ್ಯಗಳು ಅ.೨೨ರಂದು ಪ್ರಾರಂಭವಾಗಲಿದ್ದೂ, ಕಳೆದ ಪಂದ್ಯಾವಳಿಯಲ್ಲಿ ಟ್ರೋಫಿಯನ್ನು ಗೆದ್ದ ಆಸ್ಟ್ರೇಲಿಯಾ ಹಾಗೂ ರನ್ನರ್ ಅಪ್ ಆಗಿದ್ದ ನ್ಯೂಜಿಲ್ಯಾಂಡ್ ನಡುವೆ ಪಂದ್ಯ ನಡೆಯುತ್ತದೆ. ಭಾರತ ತಂಡವು ಸೂಪರ್ ಸಿಕ್ಸ್‌ನ ೨ನೇ ಗ್ರೂಪಿನಲ್ಲಿ ಇದೆ. ಇದೇ ಗುಂಪಿನಲ್ಲಿರುವ ಪಾಕಿಸ್ತಾನದ ಜತೆ ಅ.೨೩ರಂದು ಪಂದ್ಯ ಆಡುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
—————-
ಪ್ರಮುಖ ದಿನಗಳು
* ಅ.೧೬ರಂದು ಟೂರ್ನಿ ಶುರು
* ಅ.೨೨ರಂದು ಸೂಪರ್ ಸಿಕ್ಸ್ ಪ್ರಾರಂಭ
* ನ.೯ರಂದು ಮೊದಲ ಸೆಮಿ ಫೈನಲ್
* ನ.೧೦ರಂದು ಎರಡನೇ ಸೆಮಿ ಫೈನಲ್
* ನ.೧೩ರಂದು ಅಂತಿಮ ಪಂದ್ಯಾವಳಿ
———-
ಭಾರತ ತಂಡದ ಪಂದ್ಯಗಳು
ಅ.೨೩- ಪಾಕಿಸ್ತಾನ
ಅ.೨೭ -ಎ೨
ಅ.೩೦- ದಕ್ಷಿಣ ಆಫ್ರಿಕಾ
ನ.೨- ಬಾಂಗ್ಲಾದೇಶ
ನ.೬- ಬಿ೧
———
ಭಾರತದ ತಂಡ
ರೋಹಿತ್ ಶರ್ಮಾ(ನಾಯಕ), ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಶದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿಬಿಷ್ಣೋಯಿ, ದೀಪಕ್ ಚಹರ್.
—————
ಸೂಪರ್ ಸಿಕ್ಸ್ ವಿಭಾಗ
ಗ್ರೂಪ್-೧ : ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಆಫ್ಘಾನಿಸ್ತಾನ, ಇಂಗ್ಲೆಂಡ್, ಎ೧, ಬಿ೨
ಗ್ರೂಪ್-೨: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಎ೨, ಬಿ೧
———–
ಅರ್ಹತಾ ಸುತ್ತು ವಿಭಾಗ
ಗ್ರೂಪ್-ಎ: ಶ್ರೀಲಂಕಾ, ನಮಿಬಿಯಾ, ಯುಎಇ, ನೆದರ್ ಲ್ಯಾಂಡ್.
ಗ್ರೂಪ್-ಬಿ: ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬ್ಬಾವ್ವೆ, ಐರ್ಲೆಂಡ್
ವಿಶ್ವಕಪ್ ಗೆದ್ದ ತಂಡಗಳು
೨೦೦೭: ಭಾರತ
೨೦೦೯: ಪಾಕಿಸ್ತಾನ
೨೦೧೦: ಇಂಗ್ಲೆಂಡ್
೨೦೧೨: ವೆಸ್ಟ್ ಇಂಡೀಸ್
೨೦೧೪: ಶ್ರೀಲಂಕಾ
೨೦೧೬: ವೆಸ್ಟ್ ಇಂಡೀಸ್
೨೦೨೧: ಆಸ್ಟ್ರೇಲಿಯಾ
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…