ಕ್ರೀಡೆ

ಟಿ-20 ವಿಶ್ವಕಪ್ | ಇಂದು ಭಾರತ-ಪಾಕ್‌ ಹಣಾಹಣಿ

ಕೊಲಂಬೋ : ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಭಾನುವಾರ (ಫೆ.15) ಸಂಜೆ ನಡೆಯುವ ರಣರೋಚಕ ಪಂದ್ಯಕ್ಕೆ ಜಗತ್ತಿನಾದ್ಯಂತ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7ಕ್ಕೆ ಆರಂಭವಾಗಲಿರುವ ಪಂದ್ಯಕ್ಕೆ ಎಲ್ಲರೂ ಕಾತರರಾಗಿದ್ದು ಎರಡೂ ದೇಶಗಳ ನಡುವಿನ ಪಂದ್ಯ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸಲಿದೆ.

ಎರಡೂ ತಂಡಗಳು ಈಗ ಕೊಲಂಬೋದಲ್ಲಿದ್ದು ಬಂಗಾಳಕೊಲ್ಲಿಯ ಆಗ್ನೇಯ ಭಾಗದ ಸಮುದ್ರದಲ್ಲಿ ವಾಯು ಭಾರ ಕುಸಿಯುವ ಸಾಧ್ಯತೆ ಇದ್ದು ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿದೆ. ಸಂಜೆ ಮಳೆ ಸುರಿಯಬಹುದು ಎಂದು ಶ್ರೀಲಂಕಾದ ಹವಾಮಾನ ಇಲಾಖೆಯು ತಿಳಿಸಿದೆ.

ಪಂದ್ಯ ಪ್ರಾರಂಭವಾಗುವ ಎರಡು ಗಂಟೆಗಳ ಮೊದಲು ಅಂದರೆ ಸಂಜೆ 5 ಗಂಟೆಯ ಸುಮಾರಿಗೆ ಮಳೆಯಾಗುವ ಸಾಧ್ಯತೆಯಿದೆ. ಹೀಗಿದ್ದರೂ ಪಂದ್ಯ ನಡೆಯುವ ವೇಳೆ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಿದೆ. ಇದರ ನಡುವೆ ಐಸಿಸಿ ಕೂಡ ಗಮನ ಹರಿಸಿದ್ದು, ತಡವಾದರೂ ಪಂದ್ಯ ನಡೆಸುವ ಇರಾದೆಯಲ್ಲಿದೆ.

ಭಾರತ ಮತ್ತು ಪಾಕ್ ತಂಡಗಳು ಲೀಗ್‌ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿವೆ. ಆದರೂ ರನ್ ರೇಟ್ ಆಧಾರದ ಮೇಲೆ ಭಾರತ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಭಾರತ ತಂಡ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು ಪಾಕ್‌ಗೆ ಮತ್ತೆ ಸೋಲಿನ ರುಚಿ ತೋರಿಸಲು ಹಾತೊರೆಯುತ್ತಿದೆ. ಈಗಾಗಲೇ ಭಾತರದ ವಿರುದ್ಧ ಆಡುವುದಿಲ್ಲ ಎಂದು ಹೈಡ್ರಾಮ ಮಾಡಿದ್ದ ಪಾಕ್‌ಗೆ ಐಸಿಸಿ ಭಾರೀ ದಂಡ ಮತ್ತು ನಿರ್ಬಂಧದ ಎಚ್ಚರಿಕೆ ನೀಡಿದ ನಂತರ ಯೂಟರ್ನ್ ಹೊಡೆದಿದೆ. ಪಾಕ್ ಆಟಗಾರರು ಈ ಎಲ್ಲಾ ಬೆಳವಣಿಗೆಗಳಿಂದ ಒತ್ತಡದಲ್ಲಿದ್ದು, ಜಾಣ್ಮೆಯ ಆಟಕ್ಕೆ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಿಮ್ಯಾಚ್ ಕಾನ್ಛರೆನ್ಸ್‌ನಲ್ಲಿ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವರನ್ನು ಎದುರಾಳಿ ಆಟಗಾರರೊಂದಿಗೆ ಟೀಂ ಇಂಡಿಯಾ ಹ್ಯಾಂಡ್ ಶೇಕ್ ಮಾಡಲಿದೆಯೇ ಎಂದು ಮಾಧ್ಯಮದವರು ಕೇಳಿದಾಗ ಟಾಸ್‌ನಲ್ಲಿ ಹ್ಯಾಂಡ್‌ಶೇಕ್ ಬಗ್ಗೆ ನೋಡೋಣ. ಅದಕ್ಕೆ ಇನ್ನಷ್ಟು ಗಂಟೆ ಕಾಯಿರಿ ಎಂದಷ್ಟೇ ಹೇಳಿದರು. ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಭಿಷೇಕ ಶರ್ಮಾ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಆಡಲಿದ್ದಾರೆ ಎಂಬುದನ್ನು ನಾಯಕ ಸೂರ್ಯಕುಮಾರ್ ಯಾದವ್ ಖಚಿತಪಡಿಸಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಅಮೆರಿಕ-ಇರಾನ್‌ ಕದನ ವಿರಾಮ | ಶಾಂತಿ ಮಾತುಕತೆಗೆ ಪಾಕ್‌ಗೆ ಬಂದಿಳಿದ ಇರಾನ್‌ ನಿಯೋಗ

ಇಸ್ಲಾಮಾಬಾದ್ : ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗಿರುವ ಐತಿಹಾಸಿಕ ಶಾಂತಿ ಮಾತುಕತೆಗೆ ಇರಾನ್…

33 mins ago

ಬೆಳಗಾವಿಯ ನಗರಾಭಿವೃದ್ಧಿ ಕೋಶದ ಎಇಇ ಮನೆಯಲ್ಲಿ 14 ಕೋಟಿ ಅಕ್ರಮ ಆಸ್ತಿ ಪತ್ತೆ

– 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 3 ಕೋಟಿ ಡೆಪಾಸಿಟ್ ಪತ್ತೆ ಬೆಳಗಾವಿ : ಇಲ್ಲಿನ ನಗರಾಭಿವೃದ್ಧಿ…

1 hour ago

ವಿರಾಜಪೇಟೆ ಐತಿಹಾಸಿಕ ಕೆರೆಗಳ ಒತ್ತುವರಿ ಆರೋಪ

ಕಾಂಗೀರ ಬೋಪಣ್ಣ ವಿರಾಜಪೇಟೆ : ಪುರಸಭೆ ವ್ಯಾಪ್ತಿಗೆ ಒಳಪಡುವ ೨ ಐತಿಹಾಸಿಕ ಕೆರೆಗಳು ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿದ್ದು, ಈ…

3 hours ago

ಪಿಯುಸಿ : ಗುಂಡ್ಲುಪೇಟೆಯಲ್ಲಿ ಬಾಲಕಿಯರೇ ಮೇಲುಗೈ

ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಟಾಪರ್ಸ್‌ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ತಾಲ್ಲೂಕಿನ…

3 hours ago

ಮೈಸೂರು ಜಿಲ್ಲೆಯ 147 ಗ್ರಾಪಂಗಳೀಗ ಕ್ಷಯ ಮುಕ್ತ!

ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷಯರೋಗ ಮುಕ್ತ ಗ್ರಾಪಂ ಅಭಿಯಾನ ಮೈಸೂರು : ಜಿಲ್ಲೆಯಲ್ಲಿ ಕ್ಷಯ ರೋಗ ಮತ್ತು ಸಾವಿನ ಪ್ರಮಾಣ…

3 hours ago

ಓದುಗರ ಪತ್ರ | ಜನಗಣತಿ ಪಾರದರ್ಶಕ,ನಿಖರವಾಗಿರಲಿ. . .

ಭಾರತದ ಜನಗಣತಿ ಕಾಯ್ದೆ ೧೯೪೮ರ ಪ್ರಕಾರ ಈ ಬಾರಿಯ ಜನಗಣತಿ ೨೦೨೭ರ ಕಾರ್ಯವು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಈ ಜನಗಣತಿಯು…

3 hours ago