ಇಂದೋರ್ : ದಕ್ಷಿಣ ಆಫ್ರಿಕಾ ನೀಡಿದ್ದ ಬೃಹತ್ ಮೊತ್ತವನ್ನು ಭೇದಿಸಲಾಗದೇ ಭಾರತ ಸೋಲು ಕಂಡಿದೆ. ಬ್ಯಾಟಿಂಗ್ ವೈಫಲ್ಯದಿಂದ ಭಾರತ 178ರನ್ಗೆ ಆಲ್ ಔಟ್ ಆಗಿದೆ. ಈ ಮೂಲಕ ಭಾರತದ ಎದುರು ದಕ್ಷಿಣ ಆಫ್ರಿಕಾ 49ರನ್ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಹರಿಣಗಳು ರಿಲೀ ರೊಸೊವ್ ಅವರ ಶತಕ ಹಾಗೂ ಕ್ವಿಂಟನ್ ಡಿ ಕಾಕ್ ಅರ್ಧ ಶತಕದ ನೆರವಿನಿಂದ ಭಾರತಕ್ಕೆ 228 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ರಬಾಡ ಮೊದಲ ಓವರ್ನಲ್ಲೇ ರೋಹಿತ್ ಶರ್ಮಾ(0) ವಿಕೆಟ್ ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದರು.
ನಂತರ ಬಂದ ಶ್ರೇಯಸ್ ಅಯ್ಯರ್(1) ಕೂಡಾ ಬಂದ ಕೂಡಲೇ ಎಲ್ಬಿಡ್ಲ್ಯೂಗೆ ವಿಕೆಟ್ ಒಪ್ಪಿಸಿದರು. ಆರಂಭಿಕರಾಗಿ ಬಂದಿದ್ದ ರಿಷಬ್ ಪಂತ್(27) ಬೃಹತ್ ಮೊತ್ತ ಚೇಸಿಂಗ್ ಮಾಡಲಿರುವ ಕಾರಣ ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಅವರೊಂದಿಗೆ ದಿನೇಶ್ ಕಾರ್ತಿಕ್ ಕೂಡ ಕ್ವಿಕ್ ಇನ್ನಿಂಗ್ಸ್ ಕಟ್ಟಿದರು 21 ಬಾಲ್ಗೆ 4 ಬೌಂಡರಿ ಮತ್ತು ಸಿಕ್ಸ್ ಗಳಿಸಿ 46ರನ್ಗೆ ಔಟ್ ಆದರು.
ಸೂರ್ಯಕುಮಾರ್ ಯಾದವ್(8) ಇಂದು ವಿಫಲತೆ ಕಂಡರು. ಅವರೊಂದಿಗೆ ಅಕ್ಷರ್ ಪಟೇಲ್(9), ಹರ್ಷಲ್ ಪಟೇಲ್(17), ಅಶ್ವನ್(2) ಸಹ ಕ್ರಿಸ್ನಲ್ಲಿ ನಿಲ್ಲಲೇ ಇಲ್ಲ. ದಿಪಕ್ ಚಹಾರ್(31) ಕೊನೆಯ ಗಳಿಗೆಯಲ್ಲಿ ರನ್ ಕದಿಯುವ ಪ್ರಯತ್ನ ಮಾಡಿದರು. ಸಿರಾಜ್ 5 ರನ್ ಹೊಡೆದು ಔಟ್ ಆದರೆ ಉಮೇಶ್ ಯಾದವ್ (20) ಅಜೇಯರಾಗಿ ಉಳಿದರು.
ದಕ್ಷಿಣ ಆಫ್ರಕಾ ಪರ ಡ್ವೈನ್ ಪ್ರಿಟೋರಿಯಸ್ ಮೂರು ವಿಕೆಟ್ ಪಡೆದರು. ವೇಯ್ನ್ ಪಾರ್ನೆಲ್, ಲುಂಗಿ ಎನ್‌ಗಿಡಿ ಮತ್ತು ಕೇಶವ್ ಮಹಾರಾಜ್ ತಲಾ ಎರಡು ಹಾಗೇ ಕಗಿಸೊ ರಬಾಡ ಒಂದು ವಿಕೆಟ್ ಪಡೆದರು.
ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…
ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…
ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…
ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…