ಕ್ರೀಡೆ

T20 ವಿಶ್ವಕಪ್‌ : ಶ್ರೀಲಂಕಾ ವಿರುದ್ಧ ನಮೀಬಿಯಾ 55 ರನ್‌ಗಳ ಭರ್ಜರಿ ಜಯ

ಹೋಬರ್ಟ್: ಶ್ರೀಲಂಕಾ ವಿರುದ್ಧ ನಮೀಬಿಯಾ 55 ರನ್‌ಗಳ ಭರ್ಜರಿ ಜಯ ದಾಖಲಿಸಿ ಪುರುಷರ T20 ವಿಶ್ವಕಪ್‌ಗೆ ಭರ್ಜರಿ ಚಾಲನೆ ನೀಡಿದ ಬೆನ್ನಲ್ಲೇ, ಸ್ಕಾಟ್ಲೆಂಡ್ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ 42 ರನ್‌ಗಳಿಂದ ಗೆದ್ದು ಬೀಗಿತು. ಸೋಮವಾರ ಬೆಲ್ಲೆರೀವ್ ಓವಲ್​ನಲ್ಲಿ ನಡೆದ ಗ್ರೂಪ್​ ಬಿ ಯ ಪ್ರಥಮ ಪಂದ್ಯ ಇದಾಗಿತ್ತು.
ಓಪನರ್ ಜಾರ್ಜ್ ಮನ್ಸೆ ಅವರು ಇನ್ನಿಂಗ್ಸ್‌ನಲ್ಲಿ ಅಜೇಯ 66 ರನ್ ಗಳಿಸಿ ಸ್ಕಾಟ್ಲೆಂಡ್‌ 160/5 ಸ್ಕೋರ್ ಗಳಿಸಲು ನೆರವಾದರು. ಎಡಗೈ ಸ್ಪಿನ್ನರ್ ಮಾರ್ಕ್ ವ್ಯಾಟ್ ತಮ್ಮ 3/12 ರೊಂದಿಗೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ 18.3 ಓವರ್​ಗಳಲ್ಲಿ 118 ರನ್‌ಗಳಿಗೆ ಆಲ್ ಔಟ್ ಆಯಿತು.2021ರ ಟಿ 20 ವಿಶ್ವಕಪ್‌ನ ಓಮನ್‌ನ ಅಲ್ ಅಮೇರಾತ್​​ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಆರು ರನ್‌ಗಳಿಂದ ಸೋಲಿಸಿದ ಒಂದು ವರ್ಷದ ನಂತರ ಸ್ಕಾಟ್ಲೆಂಡ್ 42 ರನ್‌ಗಳಿಂದ ಗೆದ್ದಿದೆ.
ಸಂಕ್ಷಿಪ್ತ ಸ್ಕೋರ್: ಸ್ಕಾಟ್ಲೆಂಡ್ 20 ಓವರ್‌ಗಳಲ್ಲಿ 160/5 (ಜಾರ್ಜ್ ಮುನ್ಸಿ ಔಟಾಗದೆ 66, ಕ್ಯಾಲಮ್ ಮ್ಯಾಕ್‌ಲಿಯೊಡ್ 23; ಜೇಸನ್ ಹೋಲ್ಡರ್ 2/14, ಅಲ್ಜಾರಿ ಜೋಸೆಫ್ 2/28) ವೆಸ್ಟ್ ಇಂಡೀಸ್ ಅನ್ನು 18.3 ಓವರ್‌ಗಳಲ್ಲಿ 118 ಆಲೌಟ್ (ಜೇಸನ್ ಹೋಲ್ಡರ್ 38 ಮಾರ್ಕ್ ವ್ಯಾಟ್ 3/12, ಮೈಕಲ್ ಲೀಸ್ಕ್ 2/14) 42 ರನ್‌ಗಳಿಂದ ಸೋಲಿಸಿತು.

andolanait

Recent Posts

ಮೈಸೂರಿನಲ್ಲಿ ಹೊಸತೊಡಕು ಸಂಭ್ರಮ: ಮಾಂಸದಂಗಡಿಯಲ್ಲಿ ಜನವೋ ಜನ

ಮೈಸೂರು: ಯುಗಾದಿ ಹಬ್ಬದ ಮಾರನೇ ದಿನವಾದ ಇಂದು ಹೊಸತೊಡಕಿನ ಸಂಭ್ರಮ ಮನೆಮಾಡಿದ್ದು, ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಯುಗಾದಿ ಹಾಗೂ…

25 mins ago

ಹಾಸನ: ಹಣಕಾಸು ವಿಚಾರಕ್ಕೆ ಯುವಕನ ಹತ್ಯೆ

ಹಾಸನ: ಹಣಕಾಸು ವಿಚಾರಕ್ಕೆ ಯುವಕನನ್ನು ಕರೆದೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವರುಣ್‌ ಎಂಬಾತನೇ…

52 mins ago

ಯುದ್ಧದಲ್ಲಿ ನಾವು ಗೆಲ್ಲುತ್ತಿದ್ದೇವೆ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಂತಸ

ಜೆರುಸೇಲಂ: ಯುದ್ಧದಲ್ಲಿ ನಾವು ಗೆಲುವು ಸಾಧಿಸುತ್ತಿದ್ದು, ಇರಾನ್‌ ತೀವ್ರ ಹಾನಿಗೊಳಗಾಗುತ್ತಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಸಾವಿನ…

1 hour ago

ಅಧ್ಯಾಯ ಎರಡು ಇಲ್ಲಿಂದ ಶುರು: ನಟ ರಿಷಬ್‌ ಶೆಟ್ಟಿ ಮಾಹಿತಿ

ಕಾಂತಾರ ಚಾಪ್ಟರ್‌ 1 ಯಶಸ್ಸಿನಲ್ಲಿರುವ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಯುಗಾದಿ ದಿನವೇ ಅಧ್ಯಾಯ ಎರಡು ಇಲ್ಲಿಂದ ಶುರು…

5 hours ago

ರಾಜ್ಯದಲ್ಲಿ ಮಳೆ ಆರ್ಭಟ: ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಹಾಗೂ ಗುಡುಗು ಸಹಿತ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ…

5 hours ago

ರಾಜ್ಯದಲ್ಲಿ ಇಂದು ಕೂಡ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ಕಳೆದ ಮೂರು ದಿನಗಳಿಂದ ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಇಂದು ಸಂಜೆಯ ವೇಳೆಗೆ ಕೆಲ ಜಿಲ್ಲೆಗಳಲ್ಲಿ ಭಾರೀ ಭಾರೀ…

5 hours ago