ಕೊಲೊಂಬೊ: ಶ್ರೀಲಂಕಾ ತಂಡದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ನಲುಗಿದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 32 ರನ್‌ಗಳ ಹೀನಾಯ ಸೋಲು ಕಂಡಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ತಂಡ 1-0 ರಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 240ರನ್ ಬಾರಿಸಿ 241ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಭಾರತ ತಂಡ 42.2 ಓವರ್‌ಗಳಲ್ಲಿ ಆಲ್‌ಔಟ್ ಆಗುವ ಮೂಲಕ ಕೇವಲ 208 ರನ್ ಬಾರಿಸಿ 32 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿತು.
ಶ್ರೀಲಂಕಾ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರವಾಗಿ ನಿಸ್ಸಂಕಾ ಹಾಗೂ ಅವಿಷ್ಕಾ ಫರ್ನಾಂಡೋ ಅವರು ಇನ್ನಿಂಗ್ಸ್ ಆರಂಭಿಸಿದರು. ನಿಸ್ಸಂಕಾ ಮೊದಲ ಓವರ್‌ನಲ್ಲೇ ಡಕ್‌ಔಟ್ ಆಗಿ ಹೊರನಡೆದರು.
ಉತ್ತಮ ಇನ್ನಿಂಗ್ಸ್ ಕಟ್ಟಿದ ಅವಿಷ್ಕಾ ಫರ್ನಾಂಡೋ 62 ಎಸೆತಗಳಲ್ಲಿ 5 ಬೌಂಡರಿ ಸಹಿತ 40 ರನ್ ಬಾರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಲು ಶ್ರೀಲಂಕಾ ಮತ್ತೊಮ್ಮೆ ವಿಫಲವಾಯಿತು. ಕುಶಾಲ್ ಮೆಂಡೀಸ್ 30(42) ರನ್, ಸಮರವಿಕ್ರಮ 14(31) ರನ್, ನಾಯಕ ಅಸಲಂಕ 25(42) ರನ್, ಜನಿತ್ 12(29) ರನ್ ಗಳಿಸಿ ಸಾಧಾರಣ ಮೊತ್ತಕ್ಕೆ ಕುಸಿದು ಬೀಳುವ ಸ್ಥಿತಿಗೆ ತಲುಪಿದರು.
ಕೊನೆಯಲ್ಲಿ ಒಂದಾದ ವೆಲ್ಲಲಗೆ 39(35) ರನ್, ಕಮಿಂದು ಮೆಂಡೀಸ್ 40(44) ರನ್ ಗಳಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಿಸಲು ಸಹಕರಿಸಿದರು. ಉಳಿದಂತೆ ಧನಂಜಯ 15(13) ರನ್, ವಾಮಡರಸೆ ಔಟಾಗದೇ 1(1)ರನ್ ಗಳಿಸಿದರು.
ಭಾರತ ಪರ ವಾಷಿಂಗ್‌ಟನ್ ಸುಂದರ್ ಮೂರು, ಕುಲ್ದೀಪ್ ಯಾದವ್ ಎರಡು, ಸಿರಾಜ್ ಮತ್ತು ಅಕ್ಷರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಟೀಂ ಇಂಡಿಯಾ ಇನ್ನಿಂಗ್ಸ್: ಈ ಸಾದಾರಣ ಮೊತ್ತ ಬೆನ್ನತ್ತಿದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿಕೊಟ್ಟರು. ಅವರು 44 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ 64 ರನ್ ಬಾರಿಸಿ ಗೆಲುವಿನ ನಿರೀಕ್ಷೆ ಹುಟ್ಟಿಸಿದರು. ಇವರಿಗೆ ಜತೆಯಾಗಿ ಶುಬ್‌ಮನ್ ಗಿಲ್ 35(44) ರನ್ ಗಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು.
ಆದರೆ ಬಳಿಕ ಬಂದ ಯಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ 44(44) ಗಳಿಸಿದ್ದು ಹೊರತುಪಡಿಸಿದರೇ ಬೇರಾರಿಂದಲೂ ಗೆಲುವಿನ ಆಟ ಕಂಡುಬರಲಿಲ್ಲ. ಉಳಿದಂತೆ ವಿರಾಟ್ ಕೊಹ್ಲಿ 14(19) ರನ್, ಶಿವಂ ದುಬೆ ಡಕ್‌ಔಟ್, ಶ್ರೇಯಸ್ ಅಯ್ಯರ್ 7(9) ರನ್, ಕೆ.ಎಲ್ ರಾಹುಲ್ ಡಕ್‌ಔಟ್, ವಾಷಿಂಗ್‌ಟನ್ ಸುಂದರ್ 15(40) ರನ್, ಕುಲ್ದೀಪ್ ಯಾದವ್ ಔಟಾಗದೇ 7(27) ರನ್, ಸಿರಾಜ್ 4(18) ರನ್, ಅರ್ಶ್‌ದೀಪ್ ಸಿಂಗ್ 3(4) ರನ್ ಗಳಿಸಿಯೂ ಪಂದ್ಯವನ್ನು ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ.
ಶ್ರೀಲಂಕಾ ಪರ ವಾಂಡರಸೆ 6 ವಿಕೆಟ್, ನಾಯಕ ಚರಿತ ಅಸಲಂಕ 3 ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಪಂದ್ಯ ಶ್ರೇಷ್ಠ: ವಾಂಡರಸೆ
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…