ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ ತಂಡದ ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 67 ರನ್‌ಗಳ ಅಂತರದ ಸೋಲು ಕಂಡಿದೆ.
ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಸೀಸನ್ 17ರ ಐಪಿಎಲ್ ಟೂರ್ನಿಯಲ್ಲಿನ ಲೀಗ್ ಪಂದ್ಯದಲ್ಲಿ ಎಸ್‌ಆರ್‌ಎಚ್ ಹಾಗೂ ಡಿಸಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 266ರನ್ ಕಲೆಹಾಕಿ ಡಿಸಿಗೆ 267ರನ್‌ಗಳ ಗುರಿ ನೀಡಿತ್ತು. ಈ ಮೊತ್ತ ಚೇಸ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 19.1ಓವರ್‌ಗಳಲ್ಲಿ ಆಲ್‌ಔಟ್ ಆಗುವ ಮೂಲಕ 199 ರನ್ ಕೆಲಹಾಕಿ 67 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತು.
ಎಸ್‌ಆರ್‌ಎಚ್ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್‌ಗೆ ಭರ್ಜರಿ ಆರಂಭ ದೊರೆಯಿತು. ಅಭಿಷೇಕ್ ಶರ್ಮಾ 46(12) ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಇವರಿಗೆ ಜೊತೆಯಾಗಿ ಕಳೆದ ಮ್ಯಾಚ್‌ನಲ್ಲಿ ಸೆಂಚುರಿ ಬಾರಿಸಿದ್ದ ಹೆಡ್ ಈ ಪಂದ್ಯದಲ್ಲಿ ಅಮೋಘ ಅರ್ಧಶತಕ ಬಾರಿಸಿದರು. ಅವರು, 32ಎಸೆತದಲ್ಲಿ 11ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 89 ರನ್ ಚಚ್ಚಿ ಔಟಾದರು. ಈ ಜೋಡಿ ಪವರ್ ಪ್ಲೇ ನಲ್ಲಿ ಬರೋಬ್ಬರಿ 125 ರನ್ ಚಚ್ಚಿದರು. ಇದು ಐಪಿಎಲ್ ಇತಿಹಾಸದಲ್ಲಿಯೇ ಪವರ್ ಪ್ಲೇನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.
ಉಳಿದಂತೆ ಮಾರ್ಕ್ರಂ 1, ಕ್ಲಾಸೆನ್ 15, ಅಬ್ದುಲ್ ಸಮದ್ 13 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ನಿತೀಶ್ ರೆಡ್ಡಿ 37(27) ಹಾಗೂ ಆಲ್‌ರೌಂಡರ್ ಷಹಬಾಜ್ ಅಹ್ಮದ್ (59ರನ್, 29ಬಾಲ್ 2ಬೌಂಡರಿ ಹಾಗೂ 5ಸಿಕ್ಸ್) ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು 266 ಗಡಿ ಸೇರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್ದೀಪ್ ಯಾದವ್ 4/55 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಅಕ್ಷರ್ ಪಟೇಲ್ ಹಾಗೂ ಮುಖೇಶ್ ತಲಾ ಒಂದೊಂದು ವಿಕೆಟ್ ಪಡೆದು ಸಾಥ್ ನೀಡಿದರು.
ಡೆಲ್ಲಿ ಇನ್ನಿಂಗ್ಸ್: ಈ ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಪೃಥ್ವಿ ಶಾ 15ರನ್ ಗಳಿಸಿ ಮೊದಲ ಓವರ್‌ನಲ್ಲಿಯೇ ನಿರ್ಗಮಿಸಿದರು. ಕೇವಲ ಒಂದು ರನ್‌ಗಳಿಸಿದ ವಾರ್ನರ್ ಎರಡನೇ ಓವರ್‌ನಲ್ಲಿ ಓಟಾಗಿ ಆರಂಭಿಕ ಆಘಾತ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಒಂದಾದ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಹಾಗೂ ಅಭಿಷೇಕ್ ಪೋರೆಲ್ ತಂಡಕ್ಕೆ ಸುಧಾರಣೆ ನೀಡಿದರು. ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್(ಮ್ಯಾಕ್‌ಗುರ್ಕ್ ಕೇವಲ 15 ಬಾಲ್‌ಗಳಲ್ಲಿ ಅರ್ಧಶತಕ ಬಾರಿಸಿದ ಮ್ಯಾಕ್‌ಗುರ್ಕ್ ಡಿಸಿ ಪರ ಅತೀ ಕಡಿಮೆ ಬಾಲ್‌ನಲ್ಲಿ ಅರ್ಧ ಶತಕ ಬಾರಿಸಿದ ದಾಖಲೆ ಬರೆದರು) 18 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 65 ರನ್ ಬಾರಿಸಿ ಅಬ್ಬರಿಸಿದರು. ಜೊತೆಗೆ ಪೋರೆಲ್ 42ರನ್, 22ಎಸೆತ, 7ಬೌಂಡರಿ, 1 ಸಿಕ್ಸ್ ಬಾರಿಸಿ ಗೆಲ್ಲುವ ಭರವಸೆ ಮೂಡಿಸಿ ಔಟಾದರು.
ಉಳಿದಂತೆ ಸ್ಟಬ್ಸ್ 10, ಲಲಿತ್ ಯಾದವ್ 7, ಅಕ್ಷರ್ ಪಟೇಲ್ 6, ಕಲೆಹಾಕಿ ಔಟಾದರು. ಕೊನೆಯಲ್ಲಿ ಕೊಂಚ ಅಬ್ಬರಿಸಿದ ನಾಯಕ ಪಂತ್ 35ಎಸೆತದಲ್ಲಿ 5ಬೌಂಡರಿ, 1ಸಿಕ್ಸರ್ ಸಹಿತ 44 ರನ್ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗದೇ ಸೋಲೊಪ್ಪಿಕೊಂಡರು.
ಹೈದರಾಬಾದ್ ಪರ ನಟರಾಜನ್ 4ಓವರ್ ಬೌಲ್ ಮಾಡಿ, 19ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಮಾರ್ಕಂಡೆ ಹಾಗೂ ನಿತೀಶ್ ಕುಮಾರ್ ತಲಾ 2 ವಿಕೆಟ್ ಪಡೆದರೇ, ಭುವನೇಶ್ವರ್ ಕುಮಾರ್, ವಾಷಿಂಗ್‌ಟನ್ ಸುಂದರ್, ನಿತೀಶ್ ರೆಡ್ಡಿ ತಲಾ ಒಂದೊಂದು ವಿಕಟ್ ಪಡೆದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ,…
ಮಂಡ್ಯ: ರಾಜ್ಯದಲ್ಲಿ ಅತಿಭಾಷೆ ಹೆಚ್ಚು ಕನ್ನಡ ಭಾಷೆ ಮಾತನಾಡುವ ಸ್ಥಳ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಮೂರು ದಿನಗಳ ಕಾಲ…
ಬೆಳಗಾವಿ: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ ಎಂದು…
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿದ್ದು, ಇದರಲ್ಲಿ ಸುಮಾರು 157 ಕಲಾತಂಡಗಳು ಭಾಗವಹಿಸಿ ಸಮ್ಮೇಳನಕ್ಕೆ ಮೆರಗು…
ಮಂಡ್ಯ: ಸಾಮಾನ್ಯವಾಗಿ ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಅವಾಚ್ಯ ಪದ ಬಳಕೆ…
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…