ಬೆಂಗಳೂರು: ಟಿ20 ಕ್ರಿಕೆಟ್ ಪಂದ್ಯದ ಪ್ರಯುಕ್ತ BMRCL ವಿಶೇಷ ಸೇವೆ ವಿಸ್ತರಣೆ

ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ಇದೆ ಭಾನುವಾರದಂದು (ಜೂನ್ 19) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯದ ಪ್ರಯುಕ್ತ ಬೆಂಗಳೂರು ಮೆಟ್ರೋ ರೈಲು ನಿಗಮ ವಾಣಿಜ್ಯ ಸಂಚಾರವನ್ನು ಸೋಮವಾರ (ಜೂನ್ 20) ಬೆಳಿಗ್ಗೆ ಮುಂಜಾನೆವರೆಗೆ ತಮ್ಮ ಸೇವೆಯನ್ನು ವಿಸ್ತರಿಸಿದೆ.

ಕೊನೆಯ ಮೆಟ್ರೋ ರೈಲು ಸೇವೆಯು ಟರ್ಮಿನಲ್ ನಿಲ್ದಾಣಗಳಿಂದ ( ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಹಾಗೂ ರೇಷ್ಮೆ ಸಂಸ್ಥೆ) ಸೋಮವಾರದಂದು 1:00 ಗೆ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣದ ಮೆಜೆಸ್ಟಿಕ್ ಇಂದ ಎಲ್ಲಾ ನಾಲ್ಕು ದಿಕ್ಕಿಗೆ ಮುಂಜಾನೆ 1:30 ಗೆ ಹೊರಡಲಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ತಕ್ಷಣಕ್ಕೆ ನೂಕುನುಗ್ಗಲನ್ನು ನಿಯಂತ್ರಿಸುವ ಸಲುವಾಗಿ ಬಿಎಂಆರ್ಸಿಎಲ್ ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳನ್ನು ನೀಡಲಿದ್ದು, ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ 19ನೇ ಜೂನ್ 2022ರ ಮಧ್ಯಾಹ್ನ ರಾತ್ರಿ ಹತ್ತು ಗಂಟೆಯ ನಂತರ 20ನೇ ಜೂನ್ 2022ರ ವಿಸ್ತೃತ ಅವಧಿಯಲ್ಲಿ ಒಂದು ಪ್ರಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ.

ಪಂದ್ಯವನ್ನು ನೋಡಲು ಬರುವಾಗ ಎಂದಿನಂತೆ ಟೋಕನ್ ವ್ಯವಸ್ಥೆ ಇರುತ್ತದೆ ವಾಪಸ್ ಹೊರಡುವ ಸಮಯದಲ್ಲಿ ಮಾತ್ರವೇ ಬಳಸಲು ಅವಕಾಶ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.