ಕ್ರೀಡೆ

ಕೆಲವೊಮ್ಮೆ ಹೆಚ್ಚು ಹಣ ಬಂದರೆ ದುರಹಂಕಾರವೂ ಬರುತ್ತದೆ: ಭಾರತದ ಕ್ರಿಕೆಟಿಗರ ವಿರುದ್ಧ ಕಪಿಲ್ ದೇವ್ ಕಿಡಿ

ನವದೆಹಲಿ : ಕೆಲವೊಮ್ಮೆ ಹೆಚ್ಚು ಹಣ ಬಂದರೆ ದುರಹಂಕಾರವೂ ಬರುತ್ತದೆ. ಈ ಕ್ರಿಕೆಟಿಗರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ. ಸಹಾಯದ ಅಗತ್ಯವಿರುವ ಅನೇಕ ಕ್ರಿಕೆಟಿಗರು ಇದ್ದಾರೆ. ಸುನೀಲ್ ಗವಾಸ್ಕರ್ ಇರುವಾಗ ನೀವು ಏಕೆ ಮಾತನಾಡಬಾರದು? ಎಂದು ಹೇಳಿರುವ ಭಾರತದ ಮಾಜಿ ನಾಯಕ ಕಪಿಲ್ ದೇವ್ ಹಾಲಿ ಕ್ರಿಕೆಟಿಗರ ಕುರಿತು ಬೇಸರ ವ್ಯಕ್ತಪಡಿಸಿದರು. ಈ ಮೂಲಕ ಈ ಹಿಂದೆ ಆಟಗಾರರ ಅಹಂಕಾರದ ಕುರಿತಂತೆ ಹೇಳಿಕೆ ನೀಡಿದ್ದ ಇನ್ನೋರ್ವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಮಾತಿಗೆ ಧ್ವನಿಗೂಡಿಸಿದ್ದಾರೆ.

The Weekಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ದೇವ್, ಈಗಿನ ಹೆಚ್ಚಿನ ಆಟಗಾರರು ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ ಎಂಬುದು ನನ್ನ ಅನಿಸಿಕೆ. ಆದರೆ ಅವರಲ್ಲಿ ನಕಾರಾತ್ಮಕ ಅಂಶವೂ ಇದೆ. ನಮಗೆ ಎಲ್ಲವೂ ತಿಳಿದಿದೆ. ನಾವು ಯಾರಿಂದಲೂ ಸಲಹೆ ಪಡೆಯಬೇಕಾಗಿಲ್ಲ ಎಂದು ಅವರು ಭಾವಿಸುತ್ತಾರೆ. ಅದಕ್ಕಿಂತ ಉತ್ತಮವಾಗಿ ಅದನ್ನು ಹೇಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ಅನುಭವಿ ವ್ಯಕ್ತಿ ನಿಮಗೆ ಸಹಾಯ ಮಾಡಬಹುದು ಎಂದು ನಾವು ನಂಬುತ್ತೇವೆ ಎಂದು ಹೇಳಿದರು.

ಕಳೆದ ತಿಂಗಳು ಟೀಮ್ ಇಂಡಿಯಾ ಆಸ್ಟ್ರೇಲಿಯ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್-2023ರ ಫೈನಲ್ ಪಂದ್ಯವನ್ನು ಸೋತ ನಂತರ ಸುನೀಲ್ ಗವಾಸ್ಕರ್ ಭಾರತ ತಂಡವನ್ನು ಟೀಕಿಸಿದ್ದರು. ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಹೊರತುಪಡಿಸಿ ಬೇರ್ಯಾವ ಆಟಗಾರನು ನನ್ನ ಬಳಿ ಸಲಹೆ ಕೇಳಲು ಬಂದಿಲ್ಲ ಎಂದು ಹೇಳಿದ್ದರು.

ಈಗಿನ ಆಟಗಾರರ ಕುರಿತು ಗವಾಸ್ಕರ್ ಹೇಳಿಕೆಯ ಬಗ್ಗೆ ಕಪಿಲ್ ದೇವ್ ಮಾತನಾಡಿದ್ದು, ನನ್ನನ್ನು ಈ ತನಕ ಯಾವುದೇ ವೇಗದ ಬೌಲರ್ ಸಲಹೆ ಕೇಳಿ ಸಂಪರ್ಕಿಸಿಲ್ಲ. ನಾನು ಗವಾಸ್ಕರ್ ರಿಂದ ಒಂದು ವಿಚಾರ ತಿಳಿದುಕೊಂಡಿದ್ದೇನೆ. ಅದೇನೆಂದರೆ, ಆಟಗಾರರಿಗೆ ಅಗತ್ಯವಿರುವ ತನಕ ಸಲಹೆ ನೀಡುವುದು ಬೇಡ. ನಿನ್ನ ಬಳಿ ಸಲಹೆ ಕೇಳುವ ತನಕ ಸಲಹೆ ನೀಡಬೇಡ ಎಂದು ಅವರು ನನಗೆ ಹೇಳಿದ್ದರು ಎಂದರು.

ಬಾರ್ಬಡೋಸ್ ನಲ್ಲಿ ಶನಿವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು 40.1 ಓವರ್ಗಳಲ್ಲಿ 181 ರನ್ ಗೆ ಆಲೌಟಾಯಿತು. ಇಶಾನ್ ಕಿಶನ್ ಹಾಗೂ ಶುಭಮನ್ ಗಿಲ್ ಹೊರತುಪಡಿಸಿ ಹೆಚ್ಚಿನ ಎಲ್ಲ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಸುಮಾರು 4 ವರ್ಷಗಳ ನಂತರ ಮೊದಲ ಗೆಲುವು ದಾಖಲಿಸಿದ್ದ ವೆಸ್ಟ್ಇಂಡೀಸ್ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು.

andolanait

Recent Posts

ನೈಜ ಘಟನೆಗೆ ಸಿನಿಮೀಯ ಸ್ಪರ್ಶ ‘ತಲ್ವಾರ್’ ಹಿಡಿದ ಧರ್ಮ ಕೀರ್ತಿರಾಜ್

ಕೆಲವು ವರ್ಷಗಳ ಹಿಂದೆ ಧರ್ಮ ಕೀರ್ತಿರಾಜ್ ಅಭಿನಯದಲ್ಲಿ ‘ಮಮ್ತಾಜ್’ ಎಂಬ ಪ್ರೇಮಕಥೆಯನ್ನು ನಿರ್ದೇಶಿಸಿದ್ದರು ಮುರಳಿ. ಈಗ ಅವರು ಧರ್ಮ ಕೈಗೆ…

2 hours ago

‘ಬಲರಾಮನ ದಿನಗಳು’ ಚಿತ್ರದಲ್ಲಿ ಪ್ರಿಯಾ ಆನಂದ್

ಕಳೆದ ವರ್ಷ ‘ಕರಟಕ ದಮನಕ’ ಚಿತ್ರದಲ್ಲಿ ಕಾಣಿಸಿ ಕೊಂಡು ಮರೆಯಾಗಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್, ಇದೀಗ ‘ಬಲರಾಮನ ದಿನಗಳು’…

2 hours ago

ಪಿನಾಕಪಾಣಿಯಾಗಲಿರುವ ಗಣೇಶ

ಶಿವ ಪಿನಾಕವನ್ನು ಹಿಡಿದಿರುವುದರಿಂದ ಅವನಿಗೆ ಪಿನಾಕಪಾಣಿ ಎಂದು ಹೆಸರಾಯಿತು. ಶಿವನ ಕೈಲಿರುವ ಈ ಆಯುಧ ತ್ರಿಶೂಲ ಎಂದೂ ಹೇಳಲಾಗುತ್ತಿದೆ. ಬಿಲ್ಲು…

2 hours ago

ಸಂಜು ವೆಡ್ಸ್ ಗೀತಾ ೨’ಗೆ ಸುದೀಪ್ ಕಥೆ!

ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ ೨’ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಕುರಿತು…

2 hours ago

ಹೊಸ ವರ್ಷ; ಹೊಸ ನಿರೀಕ್ಷೆ ೨೦೨೫ರ ಕೆಲವು ಪ್ರಮುಖ ಚಿತ್ರಗಳು

ಪ್ರತಿ ವರ್ಷ ನೂರಾರು ಚಿತ್ರಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಆದರೆ, ಜನರಿಗೆ ಕೆಲವು ಚಿತ್ರಗಳ ಮೇಲೆ ಮಾತ್ರ ವಿಶೇಷ ಆಸಕ್ತಿ, ಕುತೂಹಲ…

2 hours ago

ಓದುಗರ ಪತ್ರ: ‘ವರಿ’

ಸಾಹಿತ್ಯ ಸಮ್ಮೇಳನದ ದಾರಿ: ಮಂಡ್ಯದಿಂದ ಬಳ್ಳಾರಿ; ಅವೇ ಸಮಸ್ಯೆಗಳು, ಅವೇ ನಿರ್ಣಯಗಳು. ಹೊಸತೇನಿಲ್ಲ; ಏನಂತೀರಿ? (ಬಾಡೂಟಕ್ಕೆ ಬೇಡ ‘ವರಿ?’) -ಸಿಪಿಕೆ,…

3 hours ago