ಕ್ರೀಡೆ

ಜಯದೊಂದಿಗೆ ನಿರ್ಗಮಿಸಿದ ಶಿವಮೊಗ್ಗ ಸ್ಟ್ರೈಕರ್ಸ್‌

ಬೆಂಗಳೂರು: ಮಳೆಯಿಂದ ಅಡ್ಡಿಯಾದ ಕೊನೆಯ ಲೀಗ್‌ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಜಯದೊಂದಿಗೆ ನಿರ್ಗಮಿಸಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮನೀಶ್‌ ಪಾಂಡೆ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್‌ 9 ವಿಕೆಟ್‌ ನಷ್ಟಕ್ಕೆ 118 ರನ್‌ ಗಳಿಸಿತ್ತು. ಅಲ್ಪ ಮೊತ್ತವನ್ನು ಬೆಂಬತ್ತಿದ ಶಿವಮೊಗ್ಗ ತಂಡ ಲಗುಬಗನೆ ವಿಕೆಟ್‌ ಕಳೆದುಕೊಂಡಿತ್ತು. 15 ರನ್‌ ಗಳಿಸುವಷ್ಟರಲ್ಲಿಯೇ 2 ವಿಕೆಟ್‌ ಕಳೆದುಕೊಂಡಿತ್ತು, ಆಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ನಂತರ ಶಿವಮೊಗ್ಗಕ್ಕೆ 54 ರನ್‌ ಗುರಿ ನೀಡಲಾಯಿತು. ಶಿವಮೊಗ್ಗ 6.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 54 ರನ್‌ ಗುರಿ ತಲುಪಿತು. ಗುಲ್ಬರ್ಗ ಮಿಸ್ಟಿಕ್ಸ್‌ ಈಗಾಗಲೇ ಪ್ಲೇ ಆಫ್‌ ತಲುಪಿದ್ದರಿಂದ ಈ ಸೋಲು ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಶಿವಮೊಗ್ಗಕ್ಕೆ ಸಾಧಾರಣ ಗುರಿ ನೀಡಿದ ಗುಲ್ಬರ್ಗ:
ಒಂದು ತಂಡ ಈಗಾಗಲೇ ಪ್ಲೇ ಆಫ್‌ ಹಂತ ತಲುಪಿದೆ. ಇನ್ನೊಂದು ತಂಡ ಗೆದ್ದರೂ ಪ್ರಯೋಜವಿಲ್ಲವೆಂಬ ಸ್ಥಿತಿಯಲ್ಲಿದೆ. ಆದ್ದರಿಂದ ಗುಲ್ಬರ್ಗ ಮಿಸ್ಟಿಕ್ಸ್‌ ಹಾಗೂ ಶಿವಮೊಗ್ಗ ಸ್ಟ್ರೈಕರ್ಸ್‌ ನಡುವಿನ ಪಂದ್ಯದ ಫಲಿತಾಂಶದ ಬಗ್ಗೆ ವೀಕ್ಷಕರಿಗೆ ಕುತೂಹಲ ಇಲ್ಲದಿಂದದ್ದರೂ ಆಟದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ.
ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಕೆ. ಗೌತಮ್‌ ನಾಯಕತ್ವದ ಶಿವಮೊಗ್ಗ ಸ್ಟ್ರೈಕರ್ಸ್‌ನ ಬೌಲರ್‌ಗಳು ಇದುವರೆಗೂ ನೀಡಿರದ ಉತ್ತಮ ಪ್ರದರ್ಶನ ನೀಡಿದರು. ಪ್ರತಿಯೊಂದು ಪಂದ್ಯದಲ್ಲೂ ಮಿಂಚಿದ್ದ ಗುಲ್ಬರ್ಗದ ಬ್ಯಾಟ್ಸ್‌ಮನ್‌ಗಳು ಶಿವಮೊಗ್ಗದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಜಸ್ವತ್‌ ಆಚಾರ್ಯ (22) ಮತ್ತು ರಿತೇಶ್‌ ಭಟ್ಕಳ್‌ (38) ಗುಲ್ಬರ್ಗ ಸ್ಟ್ರೈಕರ್ಸ್‌ ಪರ ದಾಖಲಾದ ಗರಿಷ್ಠ ರನ್‌. 17 ಓವರ್‌ಗೆ 83 ರನ್‌ ಗಳಿಸಿ 8 ವಿಕೆಟ್‌ ಕಳೆದುಕೊಂಡಿದ್ದ ಗುಲ್ಬರ್ಗಕ್ಕೆ ಚೇತರಿಸುವಂತೆ ಬ್ಯಾಟಿಂಗ್‌ ಮಾಡಿದ್ದು ರಿತೇಶ್‌ ಭಟ್ಕಳ್‌. 24 ಎಸೆತಗಳನ್ನೆದುರಿಸಿದ ರಿತೇಶ್‌ 3 ಸಿಕ್ಸರ್‌ ಹಾಗೂ 1 ಬೌಂಡರಿ ನೆರವಿನಿಂದ 38 ರನ್‌ ಸಿಡಿಸಿ ಸಾಧಾರಣ ಮೊತ್ತದಲ್ಲಿ ಗರಿಷ್ಠ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದರು. ಅಂತಿಮವಾಗಿ ಗುಲ್ಬರ್ಗ ಮಿಸ್ಟಿಕ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 118 ರನ್‌ ಗಳಿಸಿತು.
ನಾಯಕ ಕೃಷ್ಣಪ್ಪ ಗೌತಮ್‌ 4 ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿ 1 ವಿಕೆಟ್‌ ಗಳಿಸಿದರು, ಉತ್ತಮ್‌ ಅಯ್ಯಪ್ಪ ಹಾಗೂ ಕೆ.ಸಿ, ಕಾರಿಯಪ್ಪ ತಲಾ 2 ವಿಕೆಟ್‌ ಗಳಿಸಿದರೆ. ಡಿ. ಅವಿನಾಶ್‌ 24 ರನ್‌ಗೆ 3 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌ :
ಗುಲ್ಬರ್ಗ ಮಿಸ್ಟಿಕ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 118 (ಜಸ್ವತ್‌ ಆಚಾರ್ಯ 22, ರಿತೇಶ್‌ ಭಟ್ಕಳ್‌ 38, ಅವಿನಾಶ್‌ 24ಕ್ಕೆ 3, ಉತ್ತಮ್‌ ಅಯ್ಯಪ್ಪ 23ಕ್ಕೆ 2, ಕೆ.ಸಿ. ಕಾರಿಯಪ್ಪ 22ಕ್ಕೆ 2)ಶಿವಮೊಗ್ಗ ಸ್ಟ್ರೈಕರ್ಸ್‌: 6.3 ಓವರ್‌ಗಳಲ್ಲಿ 4 ವಿಕೆಟ್‌ಗೆ 54 (ಕೆ. ಸಿದ್ಧಾರ್ಥ್‌ 18, ಡಿ, ಅವಿನಾಶ್‌ 11* ವಿದ್ವತ್‌ ಕಾವೇರಪ್ಪ 22ಕ್ಕೆ 1)

andolanait

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

2 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

3 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

4 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

7 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

8 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

8 hours ago