ಕ್ರೀಡೆ

ಅಭಿಮಾನಿಗಳಿಗೆ ಶಾಕ್‌ ನೀಡಿದ ಸೆರೆನಾ ವಿಲಿಯಮ್ಸ್ ದುಡುಕಿನ ನಿರ್ಧಾರ

ನ್ಯೂಯಾರ್ಕ್: ತವರಿನಲ್ಲಿ ನಡೆಯುತ್ತಿರುವ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೋಲಿನೊಂದಿಗೆ ಸೆರೆನಾ ವಿಲಿಯಮ್ಸ್ ವೃತ್ತಿ ಜೀವನಕ್ಕೆ ಶನಿವಾರ ವಿದಾಯ ಹೇಳಿದರು.
ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ೪೬ನೇ ಶ್ರೇಯಾಂಕದ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲಜಾviliನೊವಿಚ್ ವಿರುದ್ಧ ೭-೫, ೬-೭(೪), ೬-೧ರ ಅಂತರದಲ್ಲಿ ಪರಾಭವಗೊಳ್ಳುವ ಮೂಲಕ ತಮ್ಮ ಟೆನ್ನಿಸ್ ಪಯಣವನ್ನು ಅಂತ್ಯಗೊಳಿಸಿದರು.

ಸೆರೆನಾ ಸಾಗಿದ ಹಾದಿ…

* ೧೯೯೫ರಲ್ಲಿ ೧೪ನೇ ವಯಸ್ಸಿಗೆ ವೃತ್ತಿ ಜೀವನ ಆರಂಭ
* ೨೩ ಸಿಂಗಲ್ಸ್ ಗ್ರ್ಯಾನ್‌ಸ್ಲ್ಯಾಮ್ ಕಿರೀಟಗಳ ಒಡತಿ
* ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ (೨೪) ಬಳಿಕ
ಮಹಿಳಾ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಅತಿ ಹೆಚ್ಚು ಪ್ರಶಸ್ತಿ
* ‘ಕೆರಿಯರ್ ಗ್ರ್ಯಾನ್‌ಸ್ಲ್ಯಾಮ್’ ಸಾಧನೆಯ ವಿಶ್ವದ ಮೊದಲ ಆಟಗಾರ್ತಿ
* ಏಳು ಬಾರಿ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್
* ಆರು ಬಾರಿ ಅಮೆರಿಕನ್ ಓಪನ್ ಪ್ರಶಸ್ತಿ
* ಮೂರು ಸಲ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ
* ೧೯೯೯ರಲ್ಲಿ ಮೊದಲ ಗ್ರ್ಯಾನ್ಸ್ಲಾಮ್ (ಅಮೆರಿಕನ್ ಓಪನ್)
* ಅಲ್ಲಿಂದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಧಿಪತ್ಯ
* ಮಹಿಳಾ ಡಬಲ್ಸ್ ವಿಭಾಗದಲ್ಲಿ ೧೪ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ
* ೨೦೧೨ರ ಲಂಡನ್ ಒಲಿಂಪಿಕ್ಸ್ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ
* ಒಲಿಂಪಿಕ್ಸ್‌ನ ಮಹಿಳಾ ಡಬಲ್ಸ್‌ನಲ್ಲಿ ಮೂರು ಬಾರಿ ಸ್ವರ್ಣ ಪದಕ

ಗ್ರ್ಯಾನ್‌ಸ್ಲ್ಯಾಮ್ ಸಾಧನೆ (ಮಹಿಳಾ ಸಿಂಗಲ್ಸ್)
ಆಸ್ಟ್ರೇಲಿಯನ್ ಓಪನ್ (೨೦೦೩, ೨೦೦೫, ೨೦೦೭, ೨೦೦೯, ೨೦೧೦, ೨೦೧೫, ೨೦೧೭)
ಫ್ರೆಂಚ್ ಓಪನ್ (೨೦೦೨, ೨೦೧೩, ೨೦೧೫)
ವಿಂಬಲ್ಡನ್ (೨೦೦೨, ೨೦೦೩, ೨೦೦೯, ೨೦೧೦, ೨೦೧೨, ೨೦೧೫, ೨೦೧೬)
ಅಮೆರಿಕನ್ ಓಪನ್ (೧೯೯೯, ೨೦೦೨, ೨೦೦೮, ೨೦೧೨, ೨೦೧೩, ೨೦೧೪)

andolanait

Recent Posts

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: ಏ.9ರಂದು ಆ ಭಾಗದ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ

ಬೆಂಗಳೂರು: ಏಪ್ರಿಲ್.‌9ರಂದು ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನದ ದಿನದಂದು ಆ ಭಾಗದ ಸರ್ಕಾರಿ ಕಚೇರಿಗಳಿಗೆ…

14 mins ago

ಮಹಿಳಾ ಕಾಲೇಜಿಗೆ ಹವಾ ನಿಯಂತ್ರಣ ಯಂತ್ರ: ಶಾಸಕ ರವಿಕುಮಾರ್‌

ಮಂಡ್ಯ: ಮಹಿಳಾ ಸರ್ಕಾರಿ ಕಾಲೇಜಿನಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಹವಾನಿಯಂತ್ರಣ ಯಂತ್ರ ಒಳಗೊಂಡಂತೆ ಲೇಡಿಸ್‌ ಲಾಂಜ್‌ ನಿರ್ಮಾಣ ಮಾಡಲು…

36 mins ago

ಕೊಡಗಿನಲ್ಲಿ ರಶ್ಮಿಕಾ-ವಿಜಯ್‌ ಡಿನ್ನರ್‌ ಪಾರ್ಟಿ

ಮಡಿಕೇರಿ: ಮದುವೆ ಆದ ಬಳಿಕ ತವರಿಗೆ ಆಗಮಿಸಿದ ರಶ್ಮಿಕಾ ಮಂದಣ್ಣ ಕೊಡಗಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ…

2 hours ago

ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ದೂರು

ಬೆಂಗಳೂರು: ಸಮುದಾಯವೊಂದರ ಮೀಸಲಾತಿಗಾಗಿ ರಾಜ್ಯಾದ್ಯಂತ ಹೋರಾಟ ನಡೆಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ…

3 hours ago

ಏಪ್ರಿಲ್.‌9ರಂದು ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ ಸಾಧ್ಯತೆ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ -1 ಫಲಿತಾಂಶದ ದಿನಾಂಕ ಪ್ರಕಟಣೆ ಗೊಂದಲಕ್ಕೆ ತೆರೆ ಬಿದ್ದಿದ್ದು, ಕರ್ನಾಟಕ ಪರೀಕ್ಷಾ ಮಂಡಳಿಯು ಇದೇ…

3 hours ago

ರೈತರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ: ಜೆಸಿಬಿ ಕಾರ್ಯ ಸ್ಥಗಿತ

ಮೈಸೂರು: ವರುಣ ಕ್ಷೇತ್ರದ ಕೃಷಿ ಭೂಮಿಯಲ್ಲಿ ನಿಮ್ಹಾನ್ಸ್‌ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈತರಿಂದ ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಗುಡುಮಾದನಹಳ್ಳಿಯಲ್ಲಿ…

4 hours ago