ಕ್ರೀಡೆ

ಎರಡನೇ ಏಕದಿನ: ಅಫ್ಘಾನಿಸ್ತಾನ ವಿರುದ್ಧ ಕೊನೆಯ ಓವರ್ ನಲ್ಲಿ ಗೆದ್ದ ಪಾಕಿಸ್ತಾನ

ಕೊಲಂಬೊ : ಆರಂಭಿಕ ಬ್ಯಾಟರ್ ಇಮಾಮ್ ವುಲ್-ಹಕ್(91 ರನ್), ನಾಯಕ ಬಾಬರ್ ಅಝಮ್(53 ರನ್) ಹಾಗೂ ಶಾದಾಬ್ ಖಾನ್ ಅವರ 48 ರನ್ ಗಳ ಮಹತ್ವದ ಕೊಡುಗೆಯ ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊನೆಯ ಓವರ್ ಥ್ರಿಲ್ಲರ್ ನಲ್ಲಿ 1 ವಿಕೆಟ್ ಅಂತರದಿಂದ ಜಯಶಾಲಿಯಾಯಿತು. ಅಫ್ಘಾನ್ ಬ್ಯಾಟರ್ ರಹಮನುಲ್ಲಾ ಗುರ್ಬಾಝ್ ಅವರ ಶತಕ(151 ರನ್, 151 ಎಸೆತ)ವ್ಯರ್ಥವಾಯಿತು.

ಗುರುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 602 ರನ್ ಗಳಿಸಿದ್ದವು. ಇದು ಪಾಕ್ ಹಾಗೂ ಅಫ್ಗಾನ್ ನಡುವಿನ ಪಂದ್ಯದಲ್ಲಿ ದಾಖಲಾದ ಗರಿಷ್ಠ ಸ್ಕೋರಾಗಿದೆ. ಈ ಗೆಲುವಿನ ಮೂಲಕ ಪಾಕ್ ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ ಗುರ್ಬಾಝ್ ಅವರ ಅದ್ಭುತ 151 ರನ್ನುಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತು.ಇದು ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ ಗಳಿಸಿದ ಗರಿಷ್ಠ ಮೊತ್ತವಾಗಿತ್ತು.

14 ಬೌಂಡರಿಗಳು ಹಾಗೂ ಮೂರು ಸಿಕ್ಸರ್ ಗಳನ್ನು ಸಿಡಿಸಿದ ಗುರ್ಬಾಝ್ ಅವರು ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಇಬ್ರಾಹಿಂ ಝದ್ರಾನ್ (80 ರನ್) ಜೊತೆಗೂಡಿ ಮೊದಲ ವಿಕೆಟ್ ಗೆ 227 ರನ್ ಗಳನ್ನು ಸೇರಿಸಿದರು.

ಗುರ್ಬಾಝ್ ಅವರು ಪಾಕಿಸ್ತಾನದ ವಿರುದ್ಧ ಅತ್ಯಧಿಕ ಸ್ಕೋರ್ ಗಳಿಸಿದ ಹಾಗೂ ಶತಕ ಗಳಿಸಿದ ಅಫ್ಘಾನಿಸ್ತಾನದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಹಶ್ಮತುಲ್ಲಾ ಶಾಹಿದಿ ( ಅಜೇಯ 97)ಅಫ್ಗಾನ್ ಪರ ಗರಿಷ್ಠ ಸ್ಕೋರ್ ಗಳಿಸಿದ್ದರು.

ಅಫ್ಘಾನ್ ಇನಿಂಗ್ಸ್ ಗೆ ಪ್ರತ್ಯುತ್ತರವಾಗಿ ಪಾಕಿಸ್ತಾನವು ಒಂದು ಹಂತದಲ್ಲಿ ಇಮಾಮ್-ಉಲ್-ಹಕ್ (91) ಮತ್ತು ಬಾಬರ್ ಅಝಮ್ (53) ನಡುವಿನ ಎರಡನೇ ವಿಕೆಟ್ ಗೆ 118 ರನ್ ಗಳ ಜೊತೆಯಾಟದ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು.

ಆದಾಗ್ಯೂ, ಪಾಕಿಸ್ತಾನವು 41 ರನ್ ಗಳಿಗೆ ಐದು ವಿಕೆಟ್ ಗಳನ್ನು ಕಳೆದುಕೊಂಡು ಕುಸಿತ ಕಂಡಿತು. ಶಾದಾಬ್ ಖಾನ್ ಹಾಗೂ ಇಫ್ತಿಕರ್ ಅಹ್ಮದ್ (17 ರನ್) ತಂಡವನ್ನು ಆಧರಿಸಿದರೂ ವಿಕೆಟಟ್ ಗಳು ಉರುಳುತ್ತಲೇ ಇದ್ದವು, ಅಫ್ಘಾನಿಸ್ತಾನ ಗೆಲುವಿನ ಸನಿಹವಿತ್ತು.

12 ಎಸೆತಗಳಲ್ಲಿ 27 ರನ್ ಗಳ ಅಗತ್ಯವಿದ್ದಾಗ ಶಾದಾಬ್ 49ನೇ ಓವರ್ ನ ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ಶಾದಾಬ್ ಕೊನೆಯ ಓವರ್ ನ ಮೊದಲ ಎಸೆತದಲ್ಲಿ ನಾನ್ ಸ್ಟ್ರೈಕರ್ ತುದಿಯಲ್ಲಿ ರನೌಟ್ ಆದರು. ನಸೀಂ ಶಾ(ಔಟಾಗದೆ 10) ಬೌಂಡರಿ ಗಳಿಸಿ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಪಾಕ್ ಗೆ ರೋಚಕ ಜಯ ತಂದುಕೊಟ್ಟರು. ಪಾಕ್ 49.5 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು.

andolanait

Recent Posts

ಪುಲ್ವಾಮಾ ದಾಳಿ 7 ವರ್ಷ : ಹುತಾತ್ಮರಿಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ನಮನ

ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಸಿಬ್ಬಂದಿಗೆ…

39 mins ago

ಎಮರ್ಜೆನ್ಸಿ ಲ್ಯಾಂಡಿಂಗ್‌ ಉದ್ಘಾಟಿಸಿದ ಪ್ರಧಾನಿ ಮೋದಿ

ಮೋರನ್ : ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಮೋರಂನಲ್ಲಿರುವ ಸಿ-130ಜೆ ವಿಮಾನದಲ್ಲಿ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ…

1 hour ago

ಸಚ್ಚಿದಾನದ ಶ್ರೀಗಳ ನೇತೃತ್ವದಲ್ಲಿ ಹನುಮಾನ್‌ ಚಾಲೀಸಾ ಪಾರಾಯಣ ಯಜ್ಞ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಸಾಮೂಹಿಕ ಹನುಮಾನ್…

2 hours ago

ಓದುಗರ ಪತ್ರ | ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌಲಭ್ಯ ಕಲ್ಪಿಸಿ

ಚಾಮರಾಜನಗರ ಜಿಲ್ಲೆಯ ಎಲ್ಲಾ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೇ ಅಪಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿ ರೋಗಿಗಳು ಹಾಗೂ…

3 hours ago

ಭಾರತ – ಅಮೆರಿಕ ವ್ಯಾಪಾರ ಒಪ್ಪಂದ : ಹಿನ್ನೆಲೆ ಮತ್ತು ಪರಿಣಾಮ

• ರಮಾನಂದ ಶರ್ಮಾ, ಅರ್ಥಿಕ, ರಾಜಕೀಯ ವಿಶ್ಲೇಷಕರು ಭಾರೀ ಹಗ್ಗಜಗ್ಗಾಟದ ನಂತರ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಹಿ…

3 hours ago

ಓದುಗರ ಪತ್ರ | ಯಡತೊರೆಯಲ್ಲಿ ಬಸ್ ತಂಗುದಾಣ ನಿರ್ಮಿಸಿ

ತಿ.ನರಸೀಪುರ ತಾಲ್ಲೂಕಿನ ಯಡದೊರೆ ಗ್ರಾಮದಲ್ಲಿ ಬಸ್ ತಂಗುದಾಣ ಇಲ್ಲದೇ ಸಾರ್ವಜನಿಕರು ಮರದ ಕೆಳಗೆ ನಿಲ್ಲುವುದು ಅನಿವಾರ್ಯವಾಗಿದೆ. ಬಸ್ಸುಗಳು ಯಡದೊರೆ ಹತ್ತಿರ…

3 hours ago