ನವದೆಹಲಿ: ಟೀಂ ಇಂಡಿಯಾದ ಮಾಜಿ ಕೋಚ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರು ತವರಿನಲ್ಲಿ ನಡೆಯಲಿರುವ 19 ವರ್ಷದ ಒಳಗಿನವರ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತವರಿನಲ್ಲಿ ಭಾರತ ತಂಡ ಆಸೀಸ್ ವಿರುದ್ಧ ಸೆ.21 ರಿಂದ ಅ.10 ವರೆಗೆ ಮೂರು ಏಕದಿನ ಹಾಗೂ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯ ಆಡಲಿದೆ.
ಸಮಿತ್ ಅವರು ಏಕದಿನ ಹಾಗೂ ನಾಲ್ಕು ದಿನಗಳ ಟೆಸ್ಟ್ ಸರಣಿ ಎರಡೂ ತಂಡಗಳಲ್ಲಿಯೂ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ಸಮಿತ್ ಹೊರತುಪಡಿಸಿ ಕರ್ನಾಟಕದಿಂದ ಕೆ.ಪಿ ಕಾರ್ತಿಕೇಯ, ಎನ್ ಸಮರ್ಥ್ ಹಾಗೂ ಹಾರ್ದಿಕ್ ರಾಜ್ ಅವರು ಆಯ್ಕೆಯಾಗಿದ್ದಾರೆ.
ಆಸೀಸ್ ವಿರುದ್ಧ ಸರಣಿ ವೇಳಾಪಟ್ಟಿ:
ಏಕದಿನ ಸರಣಿ
ಸೆ.21: ಮೊದಲ ಏಕದಿನ ಪಂದ್ಯ
ಸೆ.23: ಎರಡನೇ ಏಕದಿನ ಪಂದ್ಯ
ಸೆ.26: ಮೂರನೇ ಏಕದಿನ ಪಂದ್ಯ
ನಾಲ್ಕು ದಿನಗಳ ಟೆಸ್ಟ್ ಸರಣಿ
ಸೆ.30 ರಿಂದ ಅ.3: ಮೊದಲ ಟೆಸ್ಟ್
ಅ.7 ರಿಂದ ಅ.10: ಎರಡನೇ ಟೆಸ್ಟ್
ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 9.30 ಗಂಟೆಗೆ ಆರಂಭವಾಗಲಿದೆ.
ಆಸೀಸ್ ವಿರುದ್ಧ ಸರಣಿಗೆ ಟೀಂ ಇಂಡಿಯಾ ತಂಡ ಇಂತಿದೆ:
ಏಕದಿನ ಸರಣಿ: ರುದ್ರ ಪಟೇಲ್ (ಉಪನಾಯಕ), ಸಾಹಿಲ್ ಪರಾಖ್, ಕಾರ್ತಿಕೇಯ ಕೆಪಿ, ಮೊಹಮ್ಮದ್ ಅಮಾನ್ (ನಾಯಕ), ಕಿರಣ್ ಚೋರ್ಮಲೆ, ಅಭಿಜ್ಞಾನ್ ಕುಂದು (ವಿ.ಕೀ), ಹರ್ವಂಶ್ ಸಿಂಗ್ ಪಂಗಾಲಿಯಾ (ವಿ.ಕೀ), ಸಮಿತ್ ದ್ರಾವಿಡ್, ಯುಧಾಜಿತ್ ಗುಹಾ, ಸಮರ್ಥ್ ಎನ್, ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಾಜಾವತ್, ಮೊಹಮ್ಮದ್ ಇನಾನ್.
ಟೆಸ್ಟ್ ಸರಣಿ: ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ (ಉಪ ನಾಯಕ), ಸೋಹಮ್ ಪಟವರ್ಧನ್ (ನಾಯಕ), ಕಾರ್ತಿಕೇಯ ಕೆ ಪಿ, ಸಮಿತ್ ದ್ರಾವಿಡ್, ಅಭಿಗ್ಯಾನ್ ಕುಂದು (ವಿ.ಕೀ), ಹರ್ವಂಶ್ ಸಿಂಗ್ ಪಂಗಾಲಿಯಾ(ವಿ.ಕೀ), ಚೇತನ್ ಶರ್ಮಾ, ಸಮರ್ಥ್ ಎನ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಆದಿತ್ಯ ಸಿಂಗ್, ಮೊಹಮ್ಮದ್ ಇನಾನ್.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…