ಮೆಲ್ಬರ್ನ್: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರ ಸಂಭಾವನೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಗುತ್ತಿಗೆ ವ್ಯಾಪ್ತಿಯಲ್ಲಿರುವ ಕೆಲವು ಆಟಗಾರ್ತಿಯರು ವಾರ್ಷಿಕ ₹ 5.56 ಕೋಟಿಗೂ ಅಧಿಕ ವೇತನ ಪಡೆಯಲಿದ್ದಾರೆ.
ಸಿಎ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಸ್ಥೆಯ ನಡುವಣ ಹೊಸ ಒಪ್ಪಂದದ ಪ್ರಕಾರ ವೃತ್ತಿಪರ ಕ್ರಿಕೆಟ್ ಆಟಗಾರ್ತಿಯರ ಸಂಭಾವನೆ ಶೇ 66 ರಷ್ಟು ಹೆಚ್ಚಳವಾಗಲಿದೆ. ಆಸ್ಟ್ರೇಲಿಯಾದ ದೇಸಿ ಟಿ20 ಲೀಗ್ ಮಹಿಳಾ ಬಿಗ್‌ಬ್ಯಾಷ್‌ನಲ್ಲಿ (ಡಬ್ಲ್ಯುಬಿಬಿಎಲ್) ಆಡುವ ಆಟಗಾರ್ತಿಯರ ಸಂಭಾವನೆ ಕೂಡಾ ಏರಿಕೆಯಾಗಲಿದೆ.
ಸಿಎ ಮತ್ತು ಡಬ್ಲ್ಯುಬಿಬಿಎಲ್ ಗುತ್ತಿಗೆ ಪಟ್ಟಿಯಲ್ಲಿರುವ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರು ವಾರ್ಷಿಕ ₹ 4.45 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಭಾರತದಲ್ಲಿ ನಡೆಯುವ ಡಬ್ಲ್ಯಪಿಎಲ್ ಮತ್ತು ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಪಡೆಯುವ ವೇತನವನ್ನು ಸೇರಿಸಿದರೆ ಅವರ ವಾರ್ಷಿಕ ಗಳಿಕೆ ₹ 5.56 ಕೋಟಿ ದಾಟಲಿದೆ.
ಸಿಎ ಗುತ್ತಿಗೆ ಪಟ್ಟಿಯಲ್ಲಿ ಮೆಗ್ ಲ್ಯಾನಿಂಗ್ ಬಳಿಕದ ಸ್ಥಾನಗಳಲ್ಲಿರುವ ಆರು ಆಟಗಾರ್ತಿಯರು ವಾರ್ಷಿಕ ₹ 2.78 ಕೋಟಿ ಗಳಿಸಲಿದ್ದಾರೆ. ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡದಲ್ಲಿ ಇಲ್ಲದ, ಆದರೆ ಮಹಿಳಾ ಬಿಗ್‌ಬ್ಯಾಷ್‌ನಲ್ಲಿ ಆಡುವ ಆಟಗಾರ್ತಿಯರು ವಾರ್ಷಿಕ ₹ 84 ಲಕ್ಷ ಗಳಿಸಲಿದ್ದಾರೆ.
ಸಿಎ ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರ್ತಿಯರ ಸಂಖ್ಯೆಯನ್ನು 15 ರಿಂದ 18 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಪುರುಷ ಕ್ರಿಕೆಟಿಗರ ಸಂಭಾವನೆಯಲ್ಲೂ ಏರಿಕೆಯಾಗಲಿದ್ದು, ಸಿಎ ಗುತ್ತಿಗೆ ವ್ಯಾಪ್ತಿಯಲ್ಲಿರುವ 24 ಆಟಗಾರರ ವಾರ್ಷಿಕ ಗಳಿಕೆ ಸರಾಸರಿ ಶೇ 7.5 ರಷ್ಟು ಹೆಚ್ಚಳವಾಗಲಿದೆ.
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…
ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.…
ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ…
ಬೆಂಗಳೂರು: ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ…
ದಾವಣಗೆರೆ: ಜಿಲ್ಲೆಯ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವಿಗೆ ಕಾರಣ ಬಹಿರಂಗವಾಗಿದೆ. ನಾಲ್ಕು ಚುಕ್ಕೆ…
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು…