ಮುಂಬೈ: ಎರಡು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕೊನೆಗೂ ಮರಿ ತೆಂಡೂಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಪ್ಲೇಯಿಂಗ್ XI ಸ್ಥಾನ ಲಭಿಸಿತು. ಇದರಿಂದ ಸಂತೋಷಗೊಂಡ ಕ್ರಿಕೆಟ್ ದೇವರು, ತಮ್ಮ ಪುತ್ರನ ಕ್ರಿಕೆಟ್ ಜೀವನಕ್ಕೆ ಶುಭ ಹಾರೈಸಿದ್ದಾರೆ.
2021ರ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ.ಗಳಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದ ಮರಿ ತೆಂಡೂಲ್ಕರ್‌ಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ. 2022 ರಲ್ಲೂ 30 ಲಕ್ಷ ನೀಡಿ ತಂಡದಲ್ಲಿ ಉಳಿಸಿಕೊಂಡರೂ ಅವಕಾಶ ಸಿಗದೆ ಬೆಂಚ್ ಕಾದಿದ್ದ ಎಡಗೈ ವೇಗಿಗೆ, ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕೆಕೆಆರ್ ವಿರುದ್ಧ ಪಂದ್ಯದಲ್ಲಿಆಡುವ ಅವಕಾಶ ಲಭಿಸಿತು. 5 ಬಾರಿ ಚಾಂಪಿಯನ್ಸ್ ನಾಯಕ ರೋಹಿತ್ ಶರ್ಮಾ , ಅರ್ಜುನ್ ತೆಂಡೂಲ್ಕರ್‌ಗೆ ಕ್ಯಾಪ್ ನೀಡಿದರು. ಈ ಕ್ಷಣಕ್ಕೆ ಸಚಿನ್ ತೆಂಡೂಲ್ಕರ್ ಹಾಗೂ ಕುಟುಂಬದವರು ಸಾಕ್ಷಿಯಾದರು.
ಪವರ್‌ಪ್ಲೇನಲ್ಲಿ ಮರಿ ತೆಂಡೂಲ್ಕರ್ 2 ಓವರ್ ಬೌಲ್ ಮಾಡಿ 17 ರನ್ ನೀಡಿ ಗಮನ ಸೆಳೆದರು. ಆದರೆ, ದ್ವಿತೀಯನಲ್ಲಿ ಬ್ಯಾಟಿಂಗ್‌ಗೆ ಅವಕಾಶ ಸಿಗಲಿಲ್ಲ. ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್ 5 ವಿಕೆಟ್‌ನಿಂದ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಅರ್ಜುನ್ ತೆಂಡೂಲ್ಕರ್ ಅವರ ಐಪಿಎಲ್ ವೃತ್ತಿ ಜೀವನ ಶುಭಾರಂಭವಾಯಿತು.
“ಅರ್ಜುನ್ ಇಂದು ನಿಮ್ಮ ಕ್ರಿಕೆಟ್ ಜೀವನದಲ್ಲಿ ಮತ್ತೊಂದು ಮಹತ್ತರವಾದ ಹೆಜ್ಜೆಯನ್ನು ಇಟ್ಟಿದ್ದೀರಿ. ನಿನ್ನ ತಂದೆಯಾಗಿ ನಿನ್ನನ್ನು ತುಂಬಾ ಪ್ರೀತಿಸುವ ಮತ್ತು ಕ್ರಿಕೆಟ್ ರಂಗದ ಬಗ್ಗೆ ಭಾವನಾತ್ಮಕತೆ ಹೊಂದಿರುವ ನನಗೆ, ನೀವು ಈ ಆಟವನ್ನು ತುಂಬಾ ಗೌರವಿಸುತ್ತೀರಿ ಹಾಗೂ ಉತ್ತಮ ಪ್ರದರ್ಶನ ತೋರುತ್ತೀರಿ ಎಂಬ ನಂಬಿಕೆ ನನಗೆ ಇದೆ. ಇದನ್ನು ನೀವು ಪಾಲಿಸಿದರೆ, ಕ್ರಿಕೆಟ್ ನಿಮ್ಮನ್ನು ಪ್ರೀತಿಸುತ್ತದೆ,” ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ
“ನೀವು ಈ ಹಂತ ತಲುಪಲು ಸಾಕಷ್ಟು ಪರಿಶ್ರಮ ಪಟ್ಟಿದ್ದೀರಿ, ಇನ್ನು ಮುಂದೆಯೂ ಇದೇ ರೀತಿಯ ಶ್ರಮ ವಹಿಸುತ್ತೀರಿ ಎಂಬುದು ನನಗೆ ತಿಳಿದಿದೆ. ಕ್ರಿಕೆಟ್ ಎಂಬ ಸುಂದರ ಜೀವನದಲ್ಲಿ ಪಯಣ ಆರಂಭಿಸಿರುವ ನಿನಗೆ ಒಳ್ಳೆಯದಾಗಲಿ, ಆಲ್ ದಿ ಬೆಸ್ಟ್,” ಎಂದು ಸಚಿನ್ ತೆಂಡೂಲ್ಕರ್ ತಮ್ಮ ಮಗನಿಗೆ ಶುಭ ಹಾರೈಸಿದ್ದಾರೆ.
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಮತ್ತೆ ಹತ್ಯೆಗೆ ಯತ್ನ ನಡೆದಿದೆ. ಹಿಲ್ಟನ್ ಹೋಟೆಲ್‌ನ ಘಟನೆ…
ನವದೆಹಲಿ : ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರು ಎಎಪಿ(ಆಮ್ ಆದ್ಮಿ ಪಾರ್ಟಿ) ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಸಾಮಾಜಿಕ…
ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಮೇ 2ರಂದು ಐಡಿಎಸ್‌ಜಿ ಫಸ್ಟ್…
ವೃತ್ತಿ ಶಿಕ್ಷಣದ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಿಇಟಿ ಪರೀಕ್ಷೆಗೆ ಆಗಮಿಸಿದ್ಧ ಜನಿವಾರ ಧರಿಸಿದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಮತ್ತೊಂದೆಡೆ ಮೂಗುಬಟ್ಟು…
ದೆಹಲಿ ಕಣ್ಣೋಟ ಸಂಸತ್ತು ಅಂಗೀಕರಿಸಬೇಕಿದ್ದ ಸಂವಿಧಾನದ ೧೩೧ನೇ ತಿದ್ದುಪಡಿ ಮಸೂದೆ ಮಹಿಳಾ ಮೀಸಲಾತಿಯೋ ಅಥವಾ ಜನಗಣತಿಯ ನಂತರ ಲೋಕಸಭೆ ಮತ್ತು…
ನವದೆಹಲಿ : ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಡಿನ್ನರ್ ಕಾರ್ಯಕ್ರದಲ್ಲಿ ಗುಂಡಿನ ದಾಳಿ ನಡೆದ ಘಟನೆ ಕುರಿತು…