ಕ್ರೀಡೆ

ಅರಬ್ ಕ್ಲಬ್ ಚಾಂಪಿಯನ್ಸ್ ಕಪ್ ಗೆದ್ದ ರೊನಾಲ್ಡೊ ಪಡೆ

ರಿಯಾದ್: ಅವಳಿ ಗೋಲು ಗಳಿಸಿದ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ನಸ್ರ್ ತಂಡ ಫೈನಲ್ ನಲ್ಲಿ ಅಲ್ ಹಿಲಾಲ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಅರಬ್ ಕ್ಲಬ್ ಚಾಂಪಿಯನ್ಸ್ ಕಪ್ ಜಯಿಸಲು ನೆರವಾಗಿದ್ದಾರೆ.

ಕಳೆದ ವರ್ಷ ಸೌದಿ ಪ್ರೊ ಲೀಗ್ ನಲ್ಲಿ ಅಲ್-ನಸ್ರ್ ರನ್ ಅಪ್ ಗೆ ತೃಪ್ತಿಪಟ್ಟ ಕಾರಣ ರೊನಾಲ್ಡೊ ಟ್ರೋಫಿ ಜಯಿಸುವಲ್ಲಿ ವಿಫಲರಾಗಿದ್ದರು. ಆದರೆ 38ರ ವಯಸ್ಸಿನ ರೊನಾಲ್ಡೊ ಶನಿವಾರ ಕಿಂಗ್ ಫಹದ್ ಇಂಟರ್ನ್ಯಾಶನಲ್ ಸ್ಟೇಡಿಯಮ್ ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ(98ನೇ ನಿಮಿಷ)ಗೋಲು ಗಳಿಸಿ ಅಲ್ ನಸ್ರ್ ತಂಡ ಮೊತ್ತ ಮೊದಲ ಬಾರಿ ಅರಬ್ ಕ್ಲಬ್ ಚಾಂಪಿಯ್ಸನ್ ಕ್ಲಬ್ ಜಯಿಸಲು ಪ್ರಮುಖ ಕೊಡುಗೆ ನೀಡಿದರು.

ಅಲ್ ಹಿಲಾಲ್ ತಂಡ ಆರಂಭದಿಂದಲೂ ಪ್ರಾಬಲ್ಯ ಮೆರೆದಿದ್ದು, ಸ್ಟಾರ್ ಆಟಗಾರರನ್ನು ಒಳಗೊಂಡ ಅಲ್ ನಸ್ರ್ ತಂಡ ಮೊದಲಾರ್ಧದಲ್ಲಿ ಗೋಲು ಗಳಿಸುವ ಹಲವು ಅವಕಾಶಗಳನ್ನು ಪಡೆದಿತ್ತು. ಆದರೆ ಅಲ್ ಹಿಲಾಲ್ ಗೋಲ್ ಕೀಪರ್ ಗೋಲು ನಿರಾಕರಿಸಿದರು. ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದ ಕಾರಣ ಮೊದಲಾರ್ಧದ ಪಂದ್ಯ ಗೋಲುರಹಿತವಾಗಿ ಅಂತ್ಯವಾಯಿತು. 51ನೇ ನಿಮಿಷದಲ್ಲಿ ಹೆಡರ್ನ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸಿದ ಬ್ರೆಝಿಲ್ ನ ಮೈಕಲ್ ಅಲ್ ಹಿಲಾಲ್ ತಂಡ 1-0 ಮುನ್ನಡೆ ಪಡೆಯಲು ನೆರವಾದರು.

ತನ್ನ ಖ್ಯಾತಿಗೆ ತಕ್ಕಂತೆ ಆಡಿದ ರೊನಾಲ್ಡೊ 74ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. ಐದು ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ ಟೂರ್ನಮೆಂಟ್ ನಲ್ಲಿ ಒಟ್ಟು 6 ಗೋಲುಗಳನ್ನು ಗಳಿಸಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು.

ನಿಗದಿತ ಸಮಯದಲ್ಲಿ ಸ್ಕೋರ್ 1-1ರಿಂದ ಸಮಬಲಗೊಂಡ ಕಾರಣ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಯಿತು. 98ನೇ ನಿಮಿಷದಲ್ಲಿ ಗೋಲು ಗಳಿಸಿದ ರೊನಾಲ್ಡೊ 2021ರ ಡಿಸೆಂಬರ್ ನಂತರ ಮೊದಲ ಬಾರಿ ಅಲ್ ನಸ್ರ್ ತಂಡ ಅಲ್ ಹಿಲಾಲ್ ತಂಡವನ್ನು ಸೋಲಿಸಲು ಅಮೂಲ್ಯ ಕೊಡುಗೆ ನೀಡಿದರು. ಹೆಚ್ಚುವರಿ ಸಮಯದ ಎರಡನೇ ಅವಧಿಯಲ್ಲಿ ಗಾಯಗೊಂಡಿರುವ ರೊನಾಲ್ಡೊ ಮೈದಾನವನ್ನು ತೊರೆದರು. ಸೌದಿ ಪ್ರೊ ಲೀಗ್ ಆರಂಭವಾಗಲು ಕೇವಲ ಎರಡು ದಿನಗಳಿರುವಾಗ ರೊನಾಲ್ಡೊ ಗಾಯಗೊಂಡಿರುವುದು ಅಲ್ ನಸ್ರ್ ತಂಡಕ್ಕೆ ಹಿನ್ನಡೆಯಾಗಿದೆ.

2022-23ರ ಋತುವಿನಲ್ಲಿ ಸೌದಿ ಪ್ರೊ ಲೀಗ್ ನಲ್ಲಿ ಅಲ್ ನಸ್ರ್ 2ನೇ ಸ್ಥಾನ ಪಡೆದಿದ್ದರೆ, ಅಲ್ ಹಿಲಾಲ್ ಮೂರನೇ ಸ್ಥಾನ ಪಡೆದಿತ್ತು.

ಅರಬ್ ಕ್ಲಬ್ ಚಾಂಪಿಯ್ಸನ್ ಕ್ಲಬ್ ಪಂದ್ಯಾವಳಿಯನ್ನು ಪ್ರದೇಶದ ಅಗ್ರ ಅರಬ್ ಕ್ಲಬ್ ಗಳು ಆಡುತ್ತವೆ. ಸೌದಿ ಅರೇಬಿಯಾ, ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್, ಇರಾಕ್, ಮೊರಾಕ್ಕೊ, ಟುನೀಶಿಯಾ ಹಾಗೂ ಅಲ್ಜೀರಿಯಾದ ತಂಡಗಳು ಇದರಲ್ಲಿ ಒಳಗೊಂಡಿವೆ.

andolanait

Recent Posts

ಇರಾನ್‌ನ ಭದ್ರತಾ ಮುಖ್ಯಸ್ಥ ಹತ್ಯೆ : ಇಸ್ರೆಲ್‌

ಜೆರುಸಲೆಮ್ : ಇಸ್ರೇಲ್‌ನ ಸೇನಾ ದಾಳಿಯಲ್ಲಿ ಇರಾನ್‌ನ ಹಿರಿಯ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹತ್ಯೆಯಾದ್ದಾರೆ ಎಂದು ಇಸ್ರೇಲ್‌ ರಕ್ಷಣಾ…

37 mins ago

SSLC EXAM | ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ 2026ರ ಎಸ್ಎಸ್ಎಲ್‌ಸಿ ಪರೀಕ್ಷೆ-1 ಆರಂಭವಾಗಲಿದ್ದು, ಒಟ್ಟು 9,02,899 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಏಪ್ರಿಲ್ 2ರ ವರೆಗೂ…

1 hour ago

ಕಾಬೂಲ್‌ ಆಸ್ಪತ್ರೆ ಮೇಲೆ ಪಾಕ್‌ ದಾಳಿ : 400 ಮಂದಿ ಸಾವು; ಭಾರತ ಖಂಡನೆ

ಕಾಬೂಲ್‌ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಸಂಘರ್ಷ ಈಗ ಭೀಕರ ಯುದ್ಧಕ್ಕೆ ತಿರುಗಿದ್ದು, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌…

1 hour ago

ಶಿವಾಲಿಕ್‌ ಬಳಿಕ ಎಲ್‌ಪಿಜಿ ಹೊತ್ತ ನಂದಾದೇವಿ ಹಡಗು ಗುಜರಾತ್‌ಗೆ ಆಗಮನ

ಅಹಮದಬಾದ್‌ : 47,000 ಟನ್ ಎಲ್‌ಪಿಜಿ ಹೊತ್ತ ನಂದಾದೇವಿ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಸುರಕ್ಷಿತವಾಗಿ ಇಂದು(ಮಾರ್ಚ್.‌17) ತಲುಪಿರುವುದಾಗಿ ವರದಿಯಾಗಿದೆ.…

2 hours ago

ಇರಾನ್‌ ಹೋರಾಟ ಕಂಡು ಆಘಾತಗೊಂಡೆವು, ಶೀಘ್ರದಲ್ಲೇ ಯುದ್ಧ ನಿಲ್ಲಲಿದೆ : ಡೊನಾಲ್ಡ್ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪ್ರತೀಕಾರಿ ದಾಳಿಗಳನ್ನು ಕಂಡು "ನಾವು ನಿಜಕ್ಕೂ ಆಘಾತಗೊಂಡಿದ್ದೇವೆ" ಎಂದು…

3 hours ago

ಹೊರ್ಮುಜ್‌ ಜಲಸಂಧಿ | ಮನವಿ ತಿರಸ್ಕರಿಸಿದ ಮಿತ್ರ ರಾಷ್ಟ್ರಗಳು : ಟ್ರಂಪ್‌ಗೆ ಹಿನ್ನಡೆ

ವಾಷಿಂಗ್ಟನ್‌ : ಇರಾನ್ ವಿರುದ್ಧದ ಅಮೆರಿಕಾ-ಇಸ್ರೇಲ್ ಯುದ್ಧದ ಪರಿಣಾಮ ಪ್ರಪಂಚದ ಅತಿ ಮುಖ್ಯ ತೈಲ ಮಾರ್ಗ ಹೊರ್ಮುಜ್‌ ಜಲಸಂಧಿಯ ಮೂಲಕ…

3 hours ago