ವಿಶ್ವ ವಿಖ್ಯಾತ ತಾರೆಗಳು ತಮ್ಮ ಅಭಿಮಾನಿಗಳನ್ನು ಕನೆಕ್ಟ್ ಆಗಲು ಬಯಸುವವರು ಜನಪ್ರಿಯ ಸ್ಟ್ರೀಮಿಂಗ್ ಅಪ್ಲಕೇಷನ್ ಯೂಟ್ಯೂಬ್‌ನಲ್ಲಿ ತಮ್ಮ ಖಾತೆಗಳನ್ನು ತೆರೆಯುತ್ತಾರೆ. ಆ ಮೂಲಕ ಅಭಿಮಾನಿಗಳಿಗೆ ವೇಗವಾಗಿ ಕನೆಕ್ಟ್ ಆಗುತ್ತಾರೆ. ಏಕೆಂದರೆ ಯೂಟ್ಯೂಬ್ ಜನರೊಂದಿಗೆ ನೇರ ಸಂಪರ್ಕ ಬೆಸೆಯುವ ಬಹಳ ಪ್ರಬಲವಾದ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್ ಆಗಿದೆ.
ದಿಗ್ಗಜ ಫುಟ್ಬಾಲರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರು ತಮ್ಮ ಹೊಸ ಯೂಟ್ಯೂಬ್ ಖಾತೆ ತೆರೆದಿದ್ದಾರೆ. ಅವರು ತಮ್ಮ ಹೊಸ ಖಾತೆಗೆ UR cristiano ಎಂದು ಹೆಸರಿಟ್ಟಿದ್ದಾರೆ.
ಇದೇ ಆಗಸ್ಟ್ 28 ರಂದು ಆರಂಭವಾದ ನೂತನ ಚಾನಲ್ ಕೇವಲ ಮೂರೇ ದಿನಕ್ಕೆ ಬರೋಬ್ಬರಿ 54 ಮಿಲಿಯನ್ ಸಬ್‌ಸ್ಕ್ರೈಬರ್ ಗಳಿಸಿಕೊಂಡಿದೆ. ಆ ಮೂಲಕ ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಪಡೆದ ಏಕೈಕ ಚಾನೆಲ್ ಎಂಬ ದಾಖಲೆ UR cristiano ಯೂಟ್ಯೂಬ್ ಅಕೌಂಟ್ ಪಾಲಾಗಿದೆ.
ಈ ಮೂರು ದಿನಗಳಲ್ಲಿ 25 ವೀಡಿಯೋಗಳನ್ನು ತಮ್ಮ ಖಾತೆಯಲ್ಲೊ ರೊನಾಲ್ಡೊ ಹಂಚಿಕೊಂಡಿದ್ದು, ಎಲ್ಲಾ ವಿಡಿಯೋಗಳಿಂದ ಸುಮಾರು 40 ಕೋಟಿ ವೀಕ್ಷಣೆ ಪಡೆದುಕೊಂಡಿವೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಅಪಾರ ಬೆಂಬಲಿಗರನ್ನು ಒಳಗೊಂಡಿರುವ ರೊನಾಲ್ಡೊ ಅವರು, ಟ್ವಿಟ್ಟರ್ (ಎಕ್ಸ್) ನಲ್ಲಿ 113 ಮಿಲಿಯನ್ ಫಾಲೋವರ್ಸ್, ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಬರೋಬ್ಬರಿ 638 ಮಿಲಿಯನ್ ಫಾಲೋವರ್ಸ್ ಹೊಂದಿರುವ ಆಟಗಾರ ಇವರಾಗಿದ್ದಾರೆ.
ಪೊರ್ಜುಗೀಸ್‌ನ ಶ್ರೇಷ್ಠ ಫೂಟ್ಬಾಲ್ ಆಟಗಾರ ರೊನಾಲ್ಡೊ ಸದ್ಯ ಅಲ್ ನಾಸರ್ ಕ್ಲಬ್ ಪರವಾಗಿ ಆಡುತ್ತಿದ್ದಾರೆ.
1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ…
ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ…
ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…
ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…
ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…
ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…