ಕ್ರೀಡೆ

ರಣಜಿ ಟ್ರೋಫಿ: ಪಂಜಾಬ್‌ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಕರ್ನಾಟಕ

ಹುಬ್ಬಳ್ಳಿ: ಇಲ್ಲಿನ ಡಿ.ಆರ್‌ ಬೇಂದ್ರೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಂಜಾಬ್‌ ವಿರುದ್ಧ ನಡೆದ ಪಂದ್ಯದಲ್ಲಿ ೭ ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ಕರ್ನಾಟಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೧೫೨ ರನ್‌ ಗಳಿಗೆ ಆಲ್‌ಔಟ್‌ ಆಯಿತು. ಮೊದಲ ಇನ್ನಿಂಗ್ಸ್‌ ಆರಂಭಿಸಿದ ಕರ್ನಾಟಕ ೫೧೪ರನ್‌ ಬಾರಿಸಿ ಡಿಕ್ಲೇರ್‌ ತೆಗೆದುಕೊಂಡು ದೊಡ್ಡ ಮೊತ್ತ ಕಲೆಹಾಕಿ, ಎರಡನೇ ಇನ್ನಿಂಗ್ಸ್‌ ಪಂಜಾಬ್‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದ ಪಂಜಾಬ್‌ ೪೧೩ ರನ್‌ ಕಲೆಹಾಕಿ ಕರ್ನಾಟಕಕ್ಕೆ ಕೇವಲ ೫೨ ರನ್‌ಗಳ ಗುರಿ ನೀಡಿತು. ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ೩ ವಿಕೆಟ್‌ ಕಳೆದುಕೊಂಡು ಗೆದ್ದು ಬೀಗಿತು.

ಪಂಜಾಬ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ೧೫೨ ರನ್‌ಗಳಿಗೆ ಆಲ್‌ಔಟ್‌ ಆಯಿತು. ಕರ್ನಾಟಕ ಪರ ವಿ ಕೌಶಿಕ್‌ ೪೧ ರನ್‌ ನೀಡಿ ೭ ವಿಕೆಟ್‌ ಪಡೆದು ಮಿಂಚಿದರು. ನೆಹಾಲ್‌ ವಧೇರಾ ೪೪ ರನ್‌ ಗಳಿಸಿದ್ದೇ ಪಂಜಾಬ್‌ ಪರ ವಯಕ್ತಿಕ ಗರಿಷ್ಠ ರನ್‌ ಆಗಿತ್ತು.

ಕರ್ನಾಟಕ ತನ್ನ ಮೊಲದ ಇನ್ನಿಂಗ್ಸ್‌ನಲ್ಲಿ ೮ ವಿಕೆಟ್‌ ಕಳೆದುಕೊಂಡು ೫೧೪ರನ್‌ ಬಾರಿಸಿ ಡಿಕ್ಲೇರ್‌ ಮಾಡಿಕೊಂಡಿತು. ಕರ್ನಾಟಕ ಪರ ದೇವ್‌ದತ್ತ ಪಡಿಕ್ಕಲ್‌ ೨೧೬ ಎಸೆತಗಳಲ್ಲಿ ೨೪ ಬೌಂಡರಿ ಮತ್ತು ೪ ಸಿಕ್ಸರ್‌ ಸೇರಿ ೧೯೩ ರನ್‌ ಬಾರಿಸಿ ಔಟಾದರು. ಇವರಿಗೆ ಸಾಥ್‌ ನೀಡಿದ ಮನೀಶ್‌ ಪಾಂಡೆ ೧೬೫ ಎಸೆತಗಳಲ್ಲಿ ೧೩ ಬೌಂಡರಿ ಮತ್ತು ೩ ಸಿಕ್ಸರ್‌ ಸಹಿತ ೧೧೮ ರನ್‌ಗಳಿದರು. ಶರತ್‌ ೭೬ ರನ್‌ ಬಾರಿಸಿ ೩೬೨ ರನ್‌ಗಳ ಮುನ್ನಡೆ ಕಾಯ್ದುಕೊಂಡಿತು.

ಇನ್ನು ಕರ್ನಾಟಕ ನೀಡಿದ್ದ ೩೬೨ ರನ್‌ಗಳ ಮುನ್ನಡೆಯನ್ನು ಚೇಸ್‌ ಮಾಡಲು ಹೋದ ಪಂಜಾಬ್‌ ಈ ಬಾರಿ ದಿಟ್ಟ ಹೋರಾಟ ನೀಡಿತು. ಪ್ರಭ್‌ ಸಿಮ್ರಾನ್‌ ಸಿಂಗ್‌ ೧೦೦, ಅಭಿಶೇಕ್‌ ಶರ್ಮಾ ೯೧ ರನ್‌ಗಳಿಂದ ೪೧೩ ರನ್‌ ಬಾರಿಸಿ ಸರ್ವಪತನ ಕಂಡಿತು. ಮತ್ತು ಕರ್ನಾಟಕಕ್ಕೆ ೫೧ ರನ್‌ಗಳ ಗುರಿ ನೀಡಿತು. ಕರ್ನಾಟಕ ಪರ ರೋಹಿತ್‌ ಕುಮಾರ್‌ ಮತ್ತು ಶುಭಾಂಗ್‌ ಹೆಗ್ಡೆ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ೩ ವಿಕೆಟ್‌ ಕಳೆದುಕೊಂಡು ೫೨ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಪಂದ್ಯದ ಸಾರಾಂಶ:

ದಿನ 1: ಇನ್ನಿಂಗ್ಸ್ ಬ್ರೇಕ್ – ಪಂಜಾಬ್ – 152/10 (46.5 ಓವರ್‌)
ದಿನ 1: ಸ್ಟಂಪ್ಸ್ – ಕರ್ನಾಟಕ – 142/3 (33.0 ಓವರ್‌) 10 ರನ್ ಟ್ರಯಲ್, ದೇವದತ್ ಪಡಿಕ್ಕಲ್ 80 (80), ಮನೀಶ್ ಪಾಂಡೆ 13 (22)
ದಿನ 2: ಸ್ಟಂಪ್ಸ್ – ಕರ್ನಾಟಕ – 461/6 (123), ವಿಜಯ್ ಕುಮಾರ್ ವೈಶಾಕ್ 15(27), ಶ್ರೀನಿವಾಸ್ ಶರತ್ 55 (158), 309 ರನ್ ಮುನ್ನಡೆ
ದಿನ 3: ಇನ್ನಿಂಗ್ಸ್ ಬ್ರೇಕ್ – ಕರ್ನಾಟಕ – 514/8 ಡಿ (140) 362 ರನ್ ಮುನ್ನಡೆ
ದಿನ 3: ಸ್ಟಂಪ್ಸ್‌ – ಪಂಜಾಬ್ – 152 ಮತ್ತು 238/3 (68) 124 ರನ್‌ಗಳ ಹಿಂದೆ, ಮನ್‌ದೀಪ್ ಸಿಂಗ್ 15 (61), ನೆಹಾಲ್ ವಧೇರಾ 9 (35)
ದಿನ 4: 1 ನೇ ಸೆಷನ್ – ಪಂಜಾಬ್ – 152 & 285/5 (84), ಗೀತಾಂಶ್ ಖೇರಾ 11(13), ಪ್ರೇರಿತ್ ದತ್ತಾ 0(4), 77 ರನ್‌ಗಳಿಂದ ಹಿನ್ನಡೆ
ದಿನ 4: ಇನ್ನಿಂಗ್ಸ್ ಬ್ರೇಕ್ – ಪಂಜಾಬ್ – 152 & 413 ಆಲ್ ಔಟ್ (114.4), 51 ರನ್ ಮುನ್ನಡೆ
ದಿನ 4: 3 ನೇ ಅಧಿವೇಶನ – ಕರ್ನಾಟಕ – 514/8 d & 52/3 (17)
ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್‌ಗಳ ಜಯ

andolanait

Recent Posts

ಮತ್ತೆ ಬೆದರಿಕೆ ಒಡ್ಡಿದ ಟ್ರಂಪ್‌ ; ಕ್ಯಾರೆ ಎನ್ನದ ಇರಾನ್‌

ವಾಷಿಂಗ್ಟನ್ : ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ…

3 hours ago

ಶರಣ್ಯ ಸುರಕ್ಷಿತ ; ಅಧಿಕಾರಿ, ಸಿಬ್ಬಂದಿ, ಬುಡಕಟ್ಟು ಜನರಿಗೆ ಅಭಿನಂದನೆ ಸಲ್ಲಿಸಿದ ಖಂಡ್ರೆ

ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…

3 hours ago

KSOU | ಕುಲಸಚಿವೆಯಾಗಿ ಕೆಎಎಸ್‌ ಅಧಿಕಾರಿ ಕುಸುಮಾಕುಮಾರಿ ನೇಮಕ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…

3 hours ago

ಏ.9ರವರೆಗೆ ರಾಜ್ಯಾದ್ಯಂತ ಯಲ್ಲೋ ಅಲರ್ಟ್, ಮಳೆ ಮುನ್ಸೂಚನೆ

ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…

4 hours ago

ಕಾಂತರಾಜು-ಹೆಗಡೆ ವರದಿಗಳು ಇನ್ನೂ ಸ್ಟೋರೇಜ್‌ನಲ್ಲೇ ಏಕಿದೆ? ; ಕುಮಾರಸ್ವಾಮಿ ಪ್ರಶ್ನೆ

ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…

4 hours ago

ಅಹಿಂದ ಹತ್ತಿಕ್ಕುತ್ತಿರುವ ಸಿದ್ದರಾಮಯ್ಯ : ಕುಮಾರಸ್ವಾಮಿ ಆರೋಪ

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ…

4 hours ago