ಕ್ರೀಡೆ

IPL 2024: ಕ್ವಾಲಿಫೈಯರ್‌-2ನಲ್ಲಿ ಎಲಿಮಿನೇಟ್‌ ಆದ ಆರ್‌ಆರ್‌: ನಾಲ್ಕನೇ ಬಾರಿಗೆ ಫೈನಲ್‌ ಪ್ರವೇಶಿಸಿದ ಹೈದರಾಬಾದ್‌

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್‌ ಸೀಸನ್‌ನ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ರಾಜಸ್ಥಾನ್‌ ರಾಯಲ್ಸ್‌ ತಂಡದ ವಿರುದ್ಧ 36 ರನ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಕ್ವಾಲಿಫೈಯರ್‌-2 ಪಂದ್ಯ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೇ ಮೇ.26ರಂದು ಚೆನ್ನೈ ನ ಇದೇ ಚಿದಂಬರಂ ಕ್ರಿಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಕೊಲ್ಕತ್ತಾ ನೈಟ್‌ರೈಡರ್ಸ್‌ ತಂಡವನ್ನು ಎದುರಿಸಲಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 175 ರನ್‌ ಕಲೆಹಾಕಿ 176 ರನ್‌ಗಳ ಗುರಿ ನೀಡಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸನ್‌ರೈಸರ್ಸ್‌ ಹೈದರಾಬಾದ್‌ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ಪರವಾಗಿ ಟ್ರಾವಿಸ್‌ ಹೆಡ್‌ ಹಾಗೂ ಅಭಿಷೇಕ್‌ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಟ್ರಾವಿಸ್‌ ಹೆಡ್‌ 34(28) ರನ್‌ ಗಳಿಸಿದರೇ, ಅಭಿಷೇಕ್‌ ಶರ್ಮಾ 12(5) ರನ್‌ ಗಳಿಸಿ ಔಟಾದರು.

ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ರಾಹುಲ್‌ ತ್ರಿಪಾಟಿ 37(15) ರನ್‌, ಮಾರ್ಕ್ರಂ 1(2)ರನ್‌ ಗಳಿಸಿ ಕುಸಿತ ಕಂಡಿತು. ಈ ವೇಳೆ ಸುಭದ್ರವಾಗಿ ನಿಂತು ಇನ್ನಿಂಗ್ಸ್‌ ಕಟ್ಟಿದ ವಿಕೇಟ್‌ ಕೀಪರ್‌ ಕ್ಲಾಸೆನ್‌ ತಂಡಕ್ಕೆ ಚೇತರಿಕೆಯ ಆಟವಾಡಿದರು. ಇವರು 34 ಎಸೆತ ಎದರಿಸಿ 4 ಸಿಕ್ಸರ್‌ ಸಹಿತ 50 ರನ್‌ ಬಾರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಶ್ರಮಿಸಿದರು. ಉಳಿದಂತೆ ನಿತೀಶ್‌ ರೆಡ್ಡಿ 5(10)ರನ್‌, ಶಹಬಾಜ್‌ ಅಹ್ಮದ್‌ 18(18)ರನ್‌, ಅಬ್ದುಲ್‌ ಸಮದ್‌ ಡಕ್‌ಔಟ್‌, ಉನಾದ್ಕಟ್‌ 5(2) ಮತ್ತು ನಾಯಕ ಕಮಿನ್ಸ್‌ ಔಟಾಗದೇ 5(5) ರನ್‌ ಬಾರಿಸಿದರು.

ರಾಜಸ್ಥಾನ್‌ ಪರ ಟ್ರೆಂಟ್‌ ಬೌಲ್ಟ್‌ ಹಾಗೂ ಅವೇಶ್‌ ಖಾನ್‌ ತಲಾ ಮೂರು ವಿಕೆಟ್‌ ಪಡೆದರು. ಸಂದೀಪ್‌ ಶರ್ಮಾ 2 ವಿಕೆಟ್ ಕಬಳಿಸಿ ಮಿಂಚಿದರು.

ರಾಜಸ್ಥಾನ್‌ ರಾಯಲ್ಸ್‌ ಇನ್ನಿಂಗ್ಸ್‌: ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ಗೆ ಪರವಾಗಿ ಆರಂಭಿಕರಾಗು ಟಾಮ್‌ ಕೊಹ್ಲರ್‌ ಕ್ಯಾಡ್ಮೋರ್‌ ಮತ್ತು ಜೈಸ್ವಾಲ್‌ ಕಣಕ್ಕಿಳಿದರು. ಟಾಮ್‌ ಕೊಹ್ಲರ್‌ ಕ್ಯಾಡ್ಮೋರ್‌ 10(16)ರನ್‌ ಗಳಿಸಿ ಔಟಾದರೇ, ಜೈಸ್ವಾಲ್‌ 42(21) ಉತ್ತಮ ಇನ್ನಿಂಗ್ಸ್‌ ಕಟ್ಟಿಕೊಟ್ಟು ಔಟಾದರು. ಬಳಿಕ ತಂಡ ದಿಢೀರ್‌ ಕುಸಿತ ಕಂಡಿತು. ಬಂದ ಯಾರಿಂದಲೂ ನಿರೀಕ್ಷಿತ ಆಟ ಕಂಡು ಬರಲಿಲ್ಲ.

ನಾಯಕ ಸಂಜು ಸ್ಯಾಮ್ಸನ್‌ 10(11)ರನ್‌, ರಿಯಾನ್‌ ಪರಾಗ್‌ 6(10)ರನ್‌, ರವಿಚಂದ್ರನ್‌ ಅಶ್ವಿನ್‌ ಡಕ್‌ಔಟ್‌ ಆದರೆ, ಹೆಟ್ಮಾಯರ್‌ 4(10)ರನ್‌, ರೋಮನ್‌ ಪೋವೆಲ್‌ 4(10) ಗಳಿಸಿ ಔಟಾದರು.

ಕೊನೆಯಲ್ಲಿ ಅಬ್ಬರಿಸಿದ ಧೃವ್‌ ಜುರೆಲ್‌ ಔಟಾಗದೇ 35 ಎಸೆತಗಳಲ್ಲಿ 7ಬೌಂಡರಿ 2 ಸಿಕ್ಸರ್‌ ಸಹಿತ 56 ರನ್‌ ಗಳಿಸಿಯೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ. ಬೋಲ್ಟ್‌ ಯಾವುದೇ ರನ್‌ ಬಾರಿಸದೇ ನಾಟ್‌ಔಟ್‌ ಆಗಿ ಉಳಿದರು. ಬ್ಯಾಟಿಂಗ್‌ ವೈಫಲ್ಯದಿಂದಾಗಿ ಈ ಪಂದ್ಯ ಸೋತ ಆರ್‌ಆರ್‌ ಟೂರ್ನಿಯಲ್ಲಿ ಅಭಿಯಾನ ಮುಗಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಹೈದರಾಬಾದ್‌ ಪರ ಷಹಬಾಜ್‌ ಅಹ್ಮದ್‌ 3, ಅಭಿಷೇಕ್‌ ಶರ್ಮಾ 2, ನಾಯಕ ಕಮಿನ್ಸ್‌ ಹಾಗೂ ನಟರಾಜನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಜೂಜಾಟ, ಮದ್ಯ ಅಕ್ರಮ ಮಾರಾಟಕ್ಕೆ ಲಕ್ಷ  ರೂ. ದಂಡ!

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಯುವಕರು, ವಯಸ್ಕರು ಮದ್ಯ ವ್ಯಸನ ಹಾಗೂ ಜೂಜಾಟಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದ್ದು ಹಾಗೂ ಅಶಾಂತಿಗೆ…

8 mins ago

ರೋಹಿತ್‌ ಬ್ಯಾಟಿಂಗ್‌ ಅಬ್ಬರ : ಭರ್ಜರಿ ಗೆಲುವು ದಾಖಲಿಸಿದ ಮುಂಬೈ

ಮುಂಬೈ : 13 ವರ್ಷಗಳ ಸೋಲಿನ ಓಟಕ್ಕೆ ಬ್ರೇಕ್‌ ಹಾಕಿದ ಮುಂಬೈ ಇಂಡಿಯನ್ಸ್‌ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯವನ್ನು ಭರ್ಜರಿಯಾಗಿ…

7 hours ago

ಷೇರುಪೇಟೆ ವಹಿವಾಟಿನಲ್ಲಿ ಇಳಿಕೆ ; ಟಾಪ್-10 ಕಂಪನಿಗಳಲ್ಲಿ 7ಕ್ಕೆ ಭಾರೀ ನಷ್ಟ

ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ…

10 hours ago

ಎಲ್‌ಪಿಜಿ ಹೊತ್ತ ಮತ್ತೆರಡು ಹಡಗು ಭಾರತದತ್ತ

ಮುಂಬೈ : ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾಗಶಃ ಅನುಮತಿ ನೀಡಿದ ನಂತರ ಭಾರತ ಧ್ವಜ ಹೊತ್ತ ಎರಡು ಎಲ್‌ಪಿಜಿ (ದ್ರವೀಕೃತ…

11 hours ago

ಮೇಲುಕೋಟೆ ಜಾತ್ರೆ | ವೈರಮುಡಿ ಕಿರೀಟಧಾರಣಾ ಮಹೋತ್ಸವದಲ್ಲಿ 2 ಲಕ್ಷ ಜನರು ಭಾಗಿ

ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…

11 hours ago