ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ತಂಡದ ಅಂಡರ್-19 ವಿಭಾಗದ ನಾಯಕ ಡೇವಿಡ್ ಟೀಗರ್ ಅವರನ್ನು ಸೌಥ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಾಯಕನ ಸ್ಥಾನದಿಂದ ಕೆಳಗಿಳಿಸಿದೆ.
ಇಸ್ರೆಲ್ ಪರವಾಗಿ ಹೇಳಿಕೆ ನೀಡಿದ್ದರು ಎಂಬ ಹಿನ್ನಲೆ ಅವರನ್ನು ಯುದ್ಧ ವಿರೋಧಿ ಪ್ರತಿಭಟನಕಾರರು ಗುರಿಯಾಗಿಸಬಹುದು ಎಂಬ ಭೀತಿಯಲ್ಲಿ ಸಿಎಸ್‌ಎ ಶುಕ್ರವಾರ ಈ ಕ್ರಮವನ್ನು ತೆಗೆದುಕೊಂಡಿದೆ. ಆದರೆ, ಟೀಗರ್ ತಂಡದ ಸದಸ್ಯರಾಗಿ ಮುಂದುವರಿಯುವರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಟೀಗರ್ ಯಾವುದೇ ತಪ್ಪು ಮಾಡಿಲ್ಲ ಎಂದು ಈ ಹಿಂದೆ ತನಿಖಾ ಸಂಸ್ಥೆ ವರದಿ ನೀಡಿತ್ತು.
ಯಹೂದಿ ಸಾಧಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಟೀಗರ್,”ನಾನೀಗ ಅರಳುತ್ತಿರುವ ತಾರೆ. ಆದರೆ ಇಸ್ರೇಲ್ ನ ಯುವ ಸೈನಿಕರು ನಿಜವಾದ ಅರಳುತ್ತಿರುವ ತಾರೆಗಳು. ನಾನು ಈ ಪ್ರಶಸ್ತಿಯನ್ನು ಇಸ್ರೇಲ್ ದೇಶಕ್ಕೆ ಮತ್ತು ನಾವು ಶಾಂತಿಯಿಂದ ಬದುಕಲು ಸಾಧ್ಯವಾಗುವಂತೆ ಹೋರಾಟ ನಡೆಸುತ್ತಿರುವ ಪ್ರತಿಯೊಬ್ಬ ಸೈನಿಕನಿಗೆ ಅರ್ಪಿಸುತ್ತೇನೆ” ಎಂದು ಟೀಗರ್ ಹೇಳಿದ್ದರು.
ಇದಕ್ಕೆ ಫೆಲೆಸ್ತೀನ್ ಸಾಲಿಡಾರಿಟಿ ಅಲಯನ್ಸ್ (ಪಿಎಸ್‌ಎ) ಪ್ರತಿಭಟನೆ ವ್ಯಕ್ತಪಡಿಸಿತ್ತು. ಅದು ಕ್ರಿಕೆಟ್ ಆಟಗಾರನ ವಿರುದ್ಧ ದಕ್ಷಿಣ ಆಫ್ರಿಕ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ (ಎಸ್‌ಎಎಸ್ಸಿಒಸಿ)ಗೆ ದೂರು ನೀಡಿತ್ತು. ಈ ಬಗ್ಗೆ ಸ್ವತಂತ್ರ ತನಿಖೆಯ ನಂತರ ಟೀಗರ್‌ರನ್ನು ದೋಷಮುಕ್ತಗೊಳಿಸಿದರು, ನಾಯಕತ್ವದಿಂದ ತೆಗೆಯಲಾಗಿದೆ.
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…