ಕ್ರೀಡೆ

ಟೀಂ ಇಂಡಿಯಾ ಡ್ರೆಸ್ಸಿಂಗ್‌ ರೂಂನಲ್ಲಿ ಪ್ರಧಾನಿ: ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಕೋಚ್‌

ಮುಂಬೈ : ಏಕದಿನ ವಿಶ್ವಕಪ್‌-೨೦೨೩ರ ಫೈನಲ್‌ನ ಸೋಲಿನ ನಂತರ ಭಾರತ ತಂಡದ ಡ್ರೆಸ್ಸಿಂಗ್‌ ರೂಂಗೆ ಭೇಟಿ ನೀಡಿ, ಟೀಮ್‌ ಇಂಡಿಯಾ ಆಟಗಾರರನ್ನು ಸಾಂತ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಭಾರತ ತಂದಡ ಮಾಜಿ ಕೋಚ್‌ ರವಿಶಾಸ್ತ್ರಿ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು,”‘ಡ್ರೆಸ್ಸಿಂಗ್ ರೂಮ್ ಹೇಗಿರುತ್ತದೆ ಎಂಬುದು ನನಗೆ ತಿಳಿದಿರುವ ಕಾರಣದಿಂದ ಇದು ಅತ್ಯಂತ ಮಹತ್ವದ ವಿಚಾರ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಕ್ರಿಕೆಟಿಗನಾಗಿ ಹಲವು ವರ್ಷಗಳಿಂದ, ಭಾರತದ ತರಬೇತುದಾರನಾಗಿ ಏಳು ವರ್ಷಗಳಿಗೂ ಹೆಚ್ಚು ಕಾಲ ಆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದೇನೆ”. ಒಂದು ದೇಶದ ಪ್ರಧಾನಿಯಾಗಿರುವಾಗ ಡ್ರೆಸ್ಸಿಂಗ್ ರೂಮ್‌ಗೆ ಕಾಲಿಡುವುದು ವಿಶೇಷವಾದ ನಡವಳಿಕೆ. ಇಂತಹ ಸಮಯದಲ್ಲಿ ಆಟಗಾರರಿಗೆ ಏನು ಅನಿಸುತ್ತದೆ ಎಂಬುದು ತಂಡದ ಮಾಜಿ ಕೋಚ್ ಆಗಿದ್ದ ನನಗೆ ತಿಳಿದಿದೆ

ಇದು ಕರುಳು ಹಿಂಡುವ ಭಾವನೆ ಮತ್ತು ನೀವು ಸೋಲಿನಿಂದಾಗಿ ಕಂಗೆಟ್ಟಿರುವಾಗ ಅದೊಂತರ ವಿಚಿತ್ರವಾದ ಭಾವನೆ ನಿಮ್ಮನ್ನು ಆವರಿಸಿರುತ್ತದೆ. ಇಂತಹ ಸಯಮದಲ್ಲಿ ಡ್ರೆಸ್ಸಿಂಗ್ ರೂಮ್‌ಗೆ ದೇಶದ ಪ್ರಧಾನಿಯಾದಂತವರು ಭೇಟಿ ನೀಡಿದಾಗ, ಅದು ದೊಡ್ಡ ವಿಚಾರವಾಗಿರುತ್ತದೆ. ಏಕೆಂದರೆ, ಅದು ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತದೆ’ ಎಂದು ಪ್ರಧಾನಿ ನಡೆಯನ್ನು ರವಿಶಾಸ್ತ್ರಿ ಕೊಂಡಾಡಿದ್ದಾರೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ.೧೯ ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ ಹಾಗೂ ಬೌಲಂಗ್‌ ಎರಡು ವಿಭಾಗದಲ್ಲಿಯೂ ವೈಫಲ್ಯ ಕಂಡು ಆಸೀಸ್‌ ವಿರುದ್ದ ೬ ವಿಕೆಟ್‌ಗಳಿಂದ ಸೋತಿತ್ತು. ಆಸೀಸ್‌ ತಮ್ಮ ೬ನೇ ಟ್ರೋಫಿಗೆ ಮುತ್ತಿಕ್ಕಿತ್ತು.

ಫೈನಲ್‌ ಪಂದ್ಯ ವೀಕ್ಷಣೆಗೆ ಹಲವಾರು ಗಣ್ಯರು ಹಾಗೂ ಚಲನಚಿತ್ರ ನಟರು ಆಗಮಿಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು. ಆಸೀಸ್‌ ತಂಡಕ್ಕೆ ಪ್ರಶಸ್ತಿ ನೀಡಿ ನಂತರ ಭಾರತ ತಂಡದ ಡ್ರೆಸ್ಸಿಂಗ್‌ ರೂಂಗೆ ಬಂದ ಪ್ರಧಾನಿ ಮೋದಿ, ಅವರೊಂದಿಗೆ ಕೆಲಕಾಲ ಕಳೆದು, ಸಂವಹನ ನಡೆಸಿ ಆಟಗಾರರಿಗೆ ಧೈರ್ಯ ತುಂಬಿದ್ದರು.

https://x.com/ANI/status/1727995687705735391?s=20

andolanait

Recent Posts

ಓದುಗರ ಪತ್ರ: ನದಿ ಮಾಲಿನ್ಯ ತಡೆಗಟ್ಟಿ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…

1 hour ago

ಓದುಗರ ಪತ್ರ: ಸಚಿವ ಸೋಮಣ್ಣ ಹೇಳಿಕೆ ಸ್ವಾಗತಾರ್ಹ

ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…

1 hour ago

ಓದುಗರ ಪತ್ರ: ಅಪಾಯಕಾರಿ ಮರದ ಕೊಂಬೆ ತೆರವುಗೊಳಿಸಿ

ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…

1 hour ago

ಓದುಗರ ಪತ್ರ: ನವ ಭಾರತದ ನಿರ್ಮಾತೃ ಡಾ.ಅಂಬೇಡ್ಕರ್

ಶ್ರೇಷ್ಠ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಅವರ ಬಾಳಿಗೆ…

2 hours ago

ಆಂತರಿಕ ಕ್ಲೋಭೆಯಿಂದ ಭಾರತ ರಕ್ಷಿಸಿದ ಅಂಬೇಡ್ಕರ್

ಸಿ.ಹರಕುಮಾರ್, ಬರಹಗಾರ ಬಾಬಾ ಸಾಹೇಬ್‌ರ ಧಾರ್ಮಿಕ ನಿಲುವು ಅರಿಯಲು ಬಹುತೇಕರು ವಿಫಲ ಭಾರತದ ಭಾಗ್ಯವಿಧಾತ ಮತ್ತು ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್…

2 hours ago

ಕೊಡಗು ಜಿಲ್ಲೆಯಲ್ಲೂ ಹೆಚ್ಚುತ್ತಿರುವ ತಾಪಮಾನ

ನವೀನ್ ಡಿಸೋಜ ಬಳಲಿಕೆಯೊಂದಿಗೆ ಆರೋಗ್ಯ ಹದಗೆಡುವ ಸಾಧ್ಯತೆ; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸಲಹೆ  ಮಡಿಕೇರಿ: ಅಚ್ಚ ಹಸಿರಿನ ಪರಿಸರದೊಂದಿಗೆ…

2 hours ago