ಕ್ರೀಡೆ

ಉರುಗ್ವೆ ವಿರುದ್ಧ ಪೊರ್ಚುಗಲ್‌ ವಿಜಯ- ನಾಕೌಟ್‌ಗೆ ರೊನಾಲ್ಡೊ ಬಳಗ

ದೋಹಾ: ಇದು ಫುಟ್‌ಬಾಲ್ ಪಂದ್ಯದ ಮಹತ್ವದ ವಸ್ತು 

ಪೋರ್ಚುಗಲ್‌ ನಬ್ರೂನೊ ಫರ್ನಾಂಡಿಸ್ ಹೊಡೆದ ಎರಡು ಗೋಲುಗಳು ತಂಡವನ್ನು ನಾಕೌಟ್ ಹಂತಕ್ಕೆ ತಲುಪಿತು.

 ‘ಎಚ್‌’ ಗುಂಪಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೊರ್ಚುಗಲ್‌ 2–0 ಗೋಲುಗಳ ಅಂತರದಿಂದ ಉರುಗ್ವೆ ತಂಡವನ್ನು ಪರಾಭವಗೊಳಿಸಿತು.

ಲುಸೈಲ್ ಕ್ರೀಡಾಂಗಣದಲ್ಲಿ ಸೋಮವಾರ ತಡರಾತ್ರಿ ನಡೆದಪಂದ್ಯದ ಮೊದಲಾರ್ಧದಲ್ಲಿ ಪೋರ್ಚುಗಲ್ ಹಿಡಿತ ಸಾಧಿಸಿತು. ಅಧಿಕ ವೇಳೆ ಚೆಂಡನ್ನು ತನ್ನ ಪರಿಧಿಯಲ್ಲೇ ಉಳಿಸಿಕೊಂಡ ತಂಡ ಗೋಲು ಬಾರಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತು. ಆದರೆ ಉರುಗ್ವೆ ಗೋಲ್ಕೀಪರ್ ಸೆರ್ಗಿಯೊ ರೊಚೆಟ್ ಅವರ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಮೊದಲಾರ್ಧ ಮುಗಿದ ಎಂಟು ನಿಮಿಷಗಳಲ್ಲಿ ಫರ್ನಾಂಡಿಸ್ ಜಾದೂ ಮಾಡಿದರು. ಎಡಭಾಗದಿಂದ ಚೆಂಡನ್ನು ರೊನಾಲ್ಡೊ ಅವರತ್ತ   

ನೂಕಿದರು. ಜಿಗಿದ ರೊನಾಲ್ಡೊ ಚೆಂಡನ್ನು ಹೆಡ್‌ ಮಾಡಲು ಯತ್ನಿಸಿದರು. ಆದರೆ ಅವರಿಗೆ ತಾಗದ ಚೆಂಡು ಗೋಲ್ಪೋಸ್ಟ್ನೊಳಗೆ ಮಿಂಚಿನ ವೇಗದಲ್ಲಿ ಸೇರಿತು. ರೊನಾಲ್ಡೊ ಗೋಲು ಗಳಿಸಿದ ಸಂಭ್ರಮ ಆಚರಿಸಿದರು. ಆದರೆ ವಿಡಿಯೋ ಮರುಪರಿಶೀಲನೆಯ ಬಳಿಕ ಫಿಫಾ ಈ ಗೋಲನ್ನು ಫರ್ನಾಂಡಿಸ್ ಖಾತೆಗೆ ಸೇರಿಸಲಾಗಿದೆ.

ಈ ಗೋಲನ್ನು ರೊನಾಲ್ಡೊ ಗಳಿಸಿದ್ದರೆ ಪದವಿಯಲ್ಲಿ ಅವರ ಒಂಬತ್ತನೇ ಗೋ. ಆ ಮೂಲಕ ಅವರು ಪೋರ್ಚುಗಲ್ ತಂಡದ ದಿಗ್ಗಜ ಯುಸೆಬಿಯೊ ಅವರನ್ನು ಸರಿಗಟ್ಟುತ್ತಿದ್ದರು.

ಫರ್ನಾಂಡಿಸ್‌ ಗೋಲಿನ ಬಳಿಕ ಉರುಗ್ವೆ ವೇಗದ ಆಟಕ್ಕೆ ಮೊರೆಹೋಯಿತು. ತಂಡದ ಫಾರ್ವರ್ಡ್ ಆಟಗಾರ ಮ್ಯಾಕ್ಸಿ ಗೋಮೆಜ್‌ 20 ಯಾರ್ಡ್‌ನಿಂದ ಪಾಸ್‌ ಮಾಡಿದ ಚೆಂಡನ್ನು ಲೂಯಿಸ್‌ ಸ್ವಾರೆಜ್‌ ಗೋಲ್‌ಪೋಸ್ಟ್‌ನತ್ತ ತಳ್ಳಿದರು. ಆದರೆ ಚೆಂಡು ನೆಟ್ ಸಮೀಪದಿಂದ ಹಾಯ್ದುಹೋದಾಗ ಸ್ವಾರೆಜ್ ನಿರಾಸೆಗೊಳಗಾದರು.

ಗಾಯದ ಸಮಯದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಫರ್ನಾಂಡಿಸ್ ಅತಿ ಸುಲಭವಾಗಿ ಗೋಲಾಗಿ ಪರಿವರ್ತಿಸಿದರು. ಚೆಂಡನ್ನು ಗೋಲ್‌ಪೋಸ್ಟ್‌ನ ಬಲಭಾಗಕ್ಕೆ ಒಡ್ಡ ಅವರು ಗೋಲ್‌ಕೀಪರ್‌ ಸೆರ್ಗಿಯೊ ಅವರನ್ನು ವಂಚಿಸಿದರು.

ಇದೇ ಅವಧಿಯಲ್ಲೇ ಮತ್ತೊಂದು ಗೋಲು ಗಳಿಸಿ ಹ್ಯಾಟ್ರಿಕ್ ಸಾಧಿಸುವ ಫರ್ನಾಂಡಿಸ್ ಅವರಿಗಿತ್ತು. ಆದರೆ ಯಶಸ್ಸು ಸಾಧ್ಯವಾಗಲಿಲ್ಲ.

ಈ ಗೆಲುವಿನೊಂದಿಗೆ ಪೋರ್ಚುಗಲ್‌, 16ರ ಘಟ್ಟ ತಲುಪಿರುವ ಫ್ರಾನ್ಸ್ ಮತ್ತು ಬ್ರೆಜಿಲ್ ತಂಡಗಳ ಸಾಲಿಗೆ ಸೇರಿತು.

ಗುಂಪು ಹಂತದಲ್ಲಿ ಪೋರ್ಚುಗಲ್ ಸತತ ಎರಡು ಪಂದ್ಯಗಳನ್ನು ಗೆದ್ದಿರುವುದು ಇದು ಎರಡನೇ ಬಾರಿ.

andolana

Recent Posts

ಕರ್ತವ್ಯ ಮುಗಿಸಿ ಮನೆಗೆ ಬಂದಾಗಲೇ ಹೃದಯಾಘಾತ: ಎಎಸ್‌ಐ ಸಾವು

ಚಾಮರಾಜನಗರ: ಕರ್ತವ್ಯ ಮುಗಿಸಿ ಮನೆಗೆ ಬದ ತಕ್ಷಣ ಹೃದಯಾಘಾತ ಸಂಭವಿಸಿ ಎಎಸ್‌ಐ ಮೃತಪಟ್ಟಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.…

4 mins ago

ಹುಣಸೂರು: ಕೇವಲ 4 ನಿಮಿಷದಲ್ಲೇ ಕೆಜಿ ಕೆಜಿ ಚಿನ್ನ ದರೋಡೆ

ಹುಣಸೂರು: ಇಲ್ಲಿನ ಜ್ಯುವೆಲ್ಲರಿ ಶಾಪ್‌ನಲ್ಲಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಲಭ್ಯವಾಗಿದ್ದು, ದರೋಡೆಕೋರರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.…

14 mins ago

ಬಿಜೆಪಿ ಶಾಸಕ ಶರಣು ಸಲಗರ್‌ ವಿರುದ್ಧ ಎಫ್‌ಐಆರ್:‌ ಕಾರಣ ಇಷ್ಟೇ

ಬೀದರ್:‌ 99 ಲಕ್ಷ ಸಾಲ ಹಿಂತಿರುಗಿಸದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್‌ ವಿರುದ್ಧ ಎಫ್‌ಐಆರ್‌…

33 mins ago

ಪ್ರೀತಿ ವಿಚಾರವಾಗಿ ಹಲ್ಲೆ: ಮನನೊಂದು ಯುವಕ ಆತ್ಮಹತ್ಯೆ

ಮೈಸೂರು: ಯುವತಿಯ ಪ್ರೀತಿ ವಿಚಾರವಾಗಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರು ಜಿಲ್ಲೆ ಟಿ.ನರಸೀಪುರ…

1 hour ago

ರಾಷ್ಟ್ರಕವಿ ಕುವೆಂಪು ಕಟ್ಟಿದ ಸಂವಿಧಾನ ಸ್ವಾಗತ ಗೀತೆ

ನಮ್ಮ ಸಂವಿಧಾನಕ್ಕೆ ಬರೋಬ್ಬರಿ 75ವರ್ಷಗಳು ತುಂಬಿವೆ. ಭಾರತದ ಪ್ರಜೆಗಳಾದ ನಮಗೆ ಸಂವಿಧಾನವೇ ‘ಸಾಮಾಜಿಕ ನ್ಯಾಯದ ತಾಯಿ’. ಸರ್ವಜನಾಂಗದ ಹಿತರಕ್ಷಣೆಯ ಹೊಣೆಹೊತ್ತ…

2 hours ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂಚಲನ ಮೂಡಿಸಿದ ಬಿಜೆಪಿ-ಜಾ.ದಳ ಮೈತ್ರಿ ವಿಚಾರ

ಭವಿಷ್ಯದ ಗುರಿಸಾಧನೆಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ  ಕಳೆದ ವಾರ ಬಿಜೆಪಿ-ಜಾ.ದಳ ಪಾಳೆಯಗಳಲ್ಲಿ ದೊಡ್ಡ ಮಟ್ಟದ ಸಂಚಲನ…

2 hours ago