ಕತಾರ್: ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶನಿವಾರ
ಮೊರೊಕೊ ತಂಡ 1-0 ಗೋಲಿನ ಅಂತರದಲ್ಲಿ ಪೋರ್ಚುಗಲ್ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿತು.
ಈ ಮೂಲಕ ವಿಶ್ವಕಪ್ ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕನ್ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಟೂರ್ನಿಯಲ್ಲಿ ಈಗಾಗಲೇ ಅಚ್ಚರಿಯ ಫಲಿತಾಂಶದಿಂದ ಸದ್ದು ಮಾಡಿರುವ ಮೊರೊಕೊ, ಅಲ್ ತುಮಾಮಾ ಕ್ರೀಡಾಂಗಣದಲ್ಲಿ ಗೆಲುವಿನ ಓಟ ಮುಂದುವರಿಸಿ ತನ್ನ ಕನಸನ್ನು ನನಸು ಮಾಡಿಕೊಂಡಿತು. 36 ವರ್ಷಗಳ ಹಿಂದೆ ಮೆಕ್ಸಿಕೊದಲ್ಲಿ ನಡೆದಿದ್ದ ಟೂರ್ನಿಯಲ್ಲಿ 16ರ ಘಟ್ಟ ಪ್ರವೇಶಿಸಿದ್ದ ಮೊರೊಕ್ಕೊ ಈ ಸಾಧನೆ ಮಾಡಿದ ಆಫ್ರಿಕಾದ ಮೊದಲ ದೇಶ ಎಂಬ ಗೌರವ ಪಡೆದುಕೊಂಡಿತ್ತು.
ಪಂದ್ಯದ ಆರಂಭದಿಂದಲೂ ಎರಡೂ ತಂಡಗಳು ಪೈಪೋಟಿಯ ಪ್ರದರ್ಶನ ನೀಡಿದವು.
ಯೂಸೆಫ್ ಎನ್ ನೇಸಿರಿ 42 ನೇ ನಿಮಿಷದಲ್ಲಿ ಪೋರ್ಚುಗಲ್ ಡಿಫೆಂಡರ್‌ಗಳ ರಕ್ಷಣಾ ಗೋಡೆ ಭೇದಿಸಿದರು.
ಗೋಲ್‌ಕೀಪರ್ ಡಿಯೊಗೊ ಕೋಸ್ಟಾ ನೇಸಿರಿ ಅವರ ಹಾರಾಟವನ್ನು ತಪ್ಪಾಗಿ ಪರಿಗಣಿಸಿದ್ದರಿಂದ ಚೆಂಡು ಗೋಲು ಫೋಸ್ಟ್ ಸೇರಿತು.
ಈ ಮಧ್ಯೆ ಪೋರ್ಚುಗಲ್ ಮೊರೊಕೊ ರಕ್ಷಣೆಯನ್ನು ಭೇದಿಸಲು ಹೆಣಗಾಡಿತು. ಮೊರೊಕೊ ಗೋಲು ಹೊಡೆದ ಸ್ವಲ್ಪ ಸಮಯದ ನಂತರ ಬ್ರೂನೋ ಫೆರ್ನಾಂಡಿಸ್ ಗೋಲು ಗಳಿಸಲು ಯತ್ನಿಸಿದರು. ಕ್ರಿಸ್ಟಿಯಾನೊ ರೊನಾಲ್ಡೊ ಸಹ ಪ್ರಯತ್ನಿಸಿದರು. ಆದರೆ ತಂಡಕ್ಕೆ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
ಸೆಮಿಫೈನಲ್ ನಲ್ಲಿ ಮೊರಾಕೊ ತಂಡ ಇಂಗ್ಲೆಂಡ್ ಅಥವಾ ಫ್ರಾನ್ಸ್‌ನೊಂದಿಗೆ ಸೆಮಿಫೈನಲ್ ಹಣಾಹಣಿ ನಡೆಸಲಿದೆ.
‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…
ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…
ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…
ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…