ಬೆಂಗಳೂರು : ಪ್ರೊ ಕಬಡ್ಡಿ ಲೀಗ್‌ನ ದಬಾಂಗ್ ಡೆಲ್ಲಿ ಮತ್ತು ಬೆಂಗಳೂರು ಬುಲ್ಸ್ ನಡುವಿನ ಪಂದ್ಯದಲ್ಲಿ ದಬಾಂಗ್ ದೆಲ್ಲಿ ಜಯಭೇರಿ ಬಾರಿಸಿದೆ.
ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ೭ ಪಾಯಿಂಟ್‌ಗಳ ಅಂತರದಿಂದ ಗೆಲುವು ದಾಖಲಿಸಿತು. ಈ ಪಂದ್ಯ ಸೋತ ಬೆಂಗಳೂರು ಬುಲ್ಸ್ ಈ ಟೂರ್ನಿಯಲ್ಲಿ ಸತತ ಮೂರನೇ ಸೋಲು ಕಂಡಿತು.
ದಬಾಂಗ್ ಡೆಲ್ಲಿ ಪರ ಆಲ್‌ರೌಂಡರ್ ಆಟವಾಡಿದ ನವೀನ್ ಕುಮಾರ್ ರೈಡ್ ಪಾಯಿಂಟ್ ೭, ಟ್ಯಾಕಲ್ ೧ ಮತ್ತು ಬೋನಸ್ ೫ ಪಾಯಿಂಟ್ ಸೇರಿ ೧೩ ಅಂಕ ಗಳಿಸಿಕೊಟ್ಟರು. ಅಶು ಮಲ್ಲಿಕ್ ೧೦ ಪಾಯಿಂಟ್ಸ್ ಗಳಿಸಿ ನವೀನ್ ಕುಮಾರ್‌ಗೆ ನೆರವಾದರು. ಇನ್ನು ವಿಶಾಲ್ ಭಾರದ್ವಜ್ ೪ ಮತ್ತು ಹಿಮ್ಮತ್ ೩ ಪಾಯಿಂಟ್ ಗಳಿಸಿದರು.
ಬೆಂಗಳೂರು ಬುಲ್ಸ್ ಪರ ಭರತ್ ೧೦ ಏಕಾಂಗಿ ಹೋರಾಟ ನಡೆಸಿದರು. ಸುಶೀಲ್ ೫, ಅಮನ್ ೩ ಮತು ಅಕ್ಷಿತ್ ದುಲ್ ೩ ಪಾಯಿಂಟ್ ತಂದರು.
ಮೊದಲಾರ್ದದಲ್ಲೇ ಮುನ್ನಡೆ ಕಾಯ್ದುಕೊಂಡ ಡೆಲ್ಲಿ ತಂಡ ಅಲ್ಲಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಬುಲ್ಸ್‌ಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಬಿಡದ ಡೆಲ್ಲಿ ತಂಡ ಅಂತಿಮವಾಗಿ ೩೮-೩೧ ಅಂತರದಿಂದ ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ಡೆಲ್ಲಿ ಗೆದ್ದು ಬೀಗಿದರು.
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…
ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…
ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…