ಹ್ಯಾಂಗ್‍ಝೌ : ಭಾರತದ ಅಥ್ಲೆಟ್ ಗಳು, ಪ್ಯಾರಾ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ದೇಶಕ್ಕೆ ಅತ್ಯಧಿಕ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ಸ್ಥಾಪಿಸಿದರು. ಕೂಟದ ನಾಲ್ಕನೇ ದಿನವಾದ ಗುರುವಾರದ ಕೊನೆಗೆ ಭಾರತ 18 ಚಿನ್ನ ಸೇರಿದಂತೆ 82 ಪದಕಗಳನ್ನು ಗೆದ್ದುಕೊಂಡಿದೆ.
2018ರ ಜಕಾರ್ತಾ ಕೂಟದಲ್ಲಿ ಭಾರತದ ಅಥ್ಲೆಟ್ ಗಳು 72 ಪದಕಗಳನ್ನು (15 ಚಿನ್ನ-24 ಬೆಳ್ಳಿ-33 ಕಂಚು) ಗೆದ್ದುಕೊಂಡಿದ್ದು ಇದುವರೆಗಿನ ದಾಖಲೆ ಆಗಿತ್ತು. ಗುರುವಾರ ಒಂದೇ ದಿನ ಮೂರು ಚಿನ್ನ ಸೇರಿದಂತೆ 18 ಪದಕಗಳನ್ನು ಭಾರತದ ಅಥ್ಲೆಟ್ ಗಳು ಕೊರಳಿಗೆ ಹಾಕಿಕೊಂಡರು. ಭಾರತ ಒಟ್ಟಾರೆ 18 ಚಿನ್ನ, 23 ಬೆಳ್ಳಿ, 41 ಕಂಚಿನ ಪದಕಗಳನ್ನು ಗಳಿಸಿದೆ.
ಆದರೆ ಪದಕ ಪಟ್ಟಿಯಲ್ಲಿ ಭಾರತ, ಎರಡು ಸ್ಥಾನಗಳಷ್ಟು ಕುಸಿದಿದ್ದು ಎಂಟನೇ ಸ್ಥಾನಕ್ಕೆ ಸರಿಯಿತು. ಗುರುವಾರ ಹಲವು ಚಿನ್ನದ ಪದಕಗಳು ಪಣಕ್ಕಿದ್ದುದು ಇದಕ್ಕೆ ಒಂದು ಕಾರಣ. ಇನ್ನೂ ಎರಡು ದಿನ ಈ ಕೂಟ ನಡೆಯಲಿದ್ದು, ಭಾರತ ನೂರರ ಗಡಿಯನ್ನು ದಾಟುವ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ.
ದಕ್ಷಿಣ ಕೊರಿಯಾ ಮತ್ತು ಇಂಡೋನೇಷ್ಯಾ ಭಾರತಕ್ಕಿಂತ ಮೇಲಿನ ಸ್ಥಾನ ಪಡೆದವು. ಸಿಂಹಪಾಲು ಪದಕ ಗೆದ್ದಿರುವ ಆತಿಥೇಯ ಚೀನಾ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಈ ತಂಡದ ಕ್ರೀಡಾಪಟುಗಳು 156 ಚಿನ್ನ, 128 ಬೆಳ್ಳಿ, 108 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ಒಂದು ಚಿನ್ನ ಸೇರಿದಂತೆ ಎಂಟು ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಗೆದ್ದರು. ಭಾರತದ 82 ಪದಕಗಳಲ್ಲಿ ಅಥ್ಲೆಟಿಕ್ಸ್‌ನ ಕೊಡುಗೆ 45 ಪದಕಗಳು. 18ರಲ್ಲಿ 14 ಚಿನ್ನದ ಪದಕಗಳನ್ನು ಅಥ್ಲೆಟ್‌ಗಳೇ ಗೆದ್ದಿದ್ದಾರೆ.
ಸಚಿನ್ ಸರ್ಜೆರಾವ್ ಖಿಲಾರಿ ಅವರು ಪುರುಷರ ಎಫ್46 ಶಾಟ್‌ಪಟ್ ಸ್ಪರ್ಧೆಯಲ್ಲಿ 14.56 ಮೀ. ಸಾಧನೆಯೊಡನೆ ಕೂಟ ದಾಖಲೆಯೊಡನೆ ಚಿನ್ನ ಗೆದ್ದರು. ಇನ್ನೊಂದು ಚಿನ್ನವನ್ನು ಪ್ಯಾರಾ ಶೂಟರ್ ಸಿದ್ದಾರ್ಥ ಬಾಬು ಆರ್ 6 50 ಮೀ. ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗೆದ್ದರು.
ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ (ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್) ಅವರು ಚೀನಾದ ಜೋಡಿಯನ್ನು 151- 149 ರಿಂದ ಸೋಲಿಸಿ ಚಿನ್ನ ಗೆದ್ದರು.
ಚೆಸ್‌ನಲ್ಲಿ ಭವೇಶ ಕುಮಾರ್ ಹಿಮಾನ್ಶಿ ಮಹಿಳೆಯರ ವೈಯಕ್ತಿಕ ವಿ1-ಬಿ1 ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…