ಕ್ರೀಡೆ

ವಿಶ್ವಕಪ್ ವೇಳಾಪಟ್ಟಿ ಬದಲಾವಣೆಗೆ ಪಾಕಿಸ್ತಾನ ಸಮ್ಮತಿ: ಅ.14ರಂದು ಭಾರತ ವಿರುದ್ಧ ಪಂದ್ಯ

ನವದೆಹಲಿ : 2023ರ ಏಕದಿನ ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ನಡುವಣದ ಪಂದ್ಯವನ್ನು ಐಸಿಸಿ ಮೂಲ ವೇಳಾಪಟ್ಟಿ ಅಕ್ಟೋಬರ್ 15ರ ಬದಲಿಗೆ ಅಕ್ಟೋಬರ್ 14ರಂದು ಆಡಲಾಗುತ್ತದೆ. ಐಸಿಸಿ ಈ ಕುರಿತು ಇನ್ನಷ್ಟೇ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದು, ಈ ವಾರದ ಅಂತ್ಯಕ್ಕೆ ವೇಳಾಪಟ್ಟಿ ಪ್ರಕಟವಾಗಬಹುದು.

ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ದಿನಾಂಕ ಬದಲಾವಣೆಗೆ ಒಪ್ಪಿಕೊಂಡಿದೆ. ಪಂದ್ಯವು ಅಹಮದಾಬಾದ್ನಲ್ಲಿಯೇ ನಡೆಯಲಿದೆ.

ವಿಶ್ವಕಪ್ನ ಅತ್ಯಂತ ಪ್ರಮುಖ ಪಂದ್ಯದಲ್ಲಿನ ದಿನಾಂಕ ಬದಲಾವಣೆಯು ಪಾಕಿಸ್ತಾನದ ಮುಂದಿನ ಪಂದ್ಯದ ಮೇಲೆ ಪರಿಣಾಮಬೀರುತ್ತದೆ. ಪಾಕ್ ಆಡಲಿರುವ ಶ್ರೀಲಂಕಾ ವಿರುದ್ಧ ಪಂದ್ಯವು ಹೈದರಾಬಾದ್ನಲ್ಲೇ ನಡೆಯಲಿದ್ದು, ಆದರೆ ಅಕ್ಟೋಬರ್ 12ರ ಬದಲಿಗೆ ಅ.10ರಂದು ನಡೆಯಲಿದೆ. ಪಾಕ್ಗೆ ಎರಡು ಪಂದ್ಯಗಳ ನಡುವೆ ಸಾಕಷ್ಟು ಅಂತರ ಇರಲಿದೆ.

ಭಾರತ-ಪಾಕಿಸ್ತಾನ ನಡುವೆ ಅ.15ರಂದು ವಿಶ್ವಕಪ್ ಪಂದ್ಯ ನಿಗದಿಯಾಗಿದೆ. ಆದರೆ ಈ ದಿನ ನವರಾತ್ರಿ ಉತ್ಸವದ ಮೊದಲ ದಿನವಾಗಿದೆ. ಈ ದಿನ ಸಾಕಷ್ಟು ಭದ್ರತೆ ನೀಡಲು ಕಷ್ಟವಾಗುತ್ತದೆ ಎಂದು ಸ್ಥಳೀಯ ಪೊಲೀಸರು ಅಳಲು ತೋಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಪಿಸಿಬಿ ಬದಲಾವಣೆಯ ಕುರಿತಂತೆ ಐಸಿಸಿಗೆ ಪತ್ರ ಬರೆದಿದ್ದು, ಪಿಸಿಬಿ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

ವೇಳಾಪಟ್ಟಿ ಬದಲಾವಣೆಗೆ ನವರಾತ್ರಿ ಉತ್ಸವ ಕಾರಣವಲ್ಲ ಎಂದಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಕಳೆದ ವಾರ ಹಲವು ಸದಸ್ಯ ರಾಷ್ಟ್ರಗಳು ವೇಳಾಪಟ್ಟಿ ಬದಲಾವಣೆಗೆ ಕೋರಿದ್ದರು. ಕೆಲವು ಬದಲಾವಣೆ ಮಾಡಲಾಗಿದೆ ಎಂದರು.

andolanait

Recent Posts

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆದಿಚುಂಚನಗಿರಿ : ಬಿಗಿ ಪೊಲೀಸ್‌ ಭದ್ರತೆ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…

5 mins ago

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

1 hour ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

2 hours ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

2 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

3 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

4 hours ago