ಕ್ರೀಡೆ

ಏಕದಿನ ವಿಶ್ವಕಪ್‌ನ ಅಧಿಕೃತ ಗೀತೆ ಬಿಡುಗಡೆಗೊಳಿಸಿದ ಐಸಿಸಿ

ನವದೆಹಲಿ : ಭಾರತದಲ್ಲಿ ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಅಧಿಕೃತ ಗೀತೆಯನ್ನು ಐಸಿಸಿ ಬುಧವಾರ ಬಿಡುಗಡೆ ಮಾಡಿದೆ.

ಈ ಗೀತೆಯನ್ನು ದಿಲ್ ಜಶ್ನ್ ಬೋಲೆ ಎಂದು ಕರೆಯಲಾಗುತ್ತಿದ್ದು ಇದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಖ್ಯಾತ ಸಂಗೀತ ಸಂಯೋಜಕ ಪ್ರೀತಮ್ ಈ ಗೀತೆಗೆ ಸಂಗೀತ ನೀಡಿದ್ದಾರೆ. ಗೀತೆಯಲ್ಲಿ ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಪತ್ನಿ, ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಕೂಡ ಇದ್ದಾರೆ.

3 ನಿಮಿಷಗಳ 22 ಸೆಕೆಂಡ್‌ಗಳ ಹಾಡಿಗೆ ಶ್ಲೋಕ್ ಲಾಲ್ ಹಾಗೂ ಸಾವೇರಿ ವರ್ಮಾ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಪ್ರೀತಮ್, ನಕಾಶ್ ಅಝೀಝ್, ಶ್ರೀರಾಮ ಚಂದ್ರ, ಅಮಿತ್ ಮಿಶ್ರಾ, ಜೋನಿತಾ ಗಾಂಧಿ, ಆಕಾಶ ಸಿಂಗ್ ಹಾಗೂ ಚರಣ್ ಹಾಡಿದ್ದಾರೆ.

https://x.com/ICC/status/1704384709646864506?s=20

ಕ್ರಿಕೆಟ್ ಸಂಭ್ರಮವನ್ನು ಆಚರಿಸಲು ಜಗತ್ತನ್ನು ಆಹ್ವಾನಿಸುವ ಗುರಿಯನ್ನು ಈ ಹಾಡು ಹೊಂದಿದೆ. ಕ್ರಿಕೆಟ್ ಬಗ್ಗೆ ಭಾರತದಲ್ಲಿ ಅತೀ ಹೆಚ್ಚು ಮಮಕಾರವಿದ್ದು , ಇದುವರೆಗಿನ ಅತಿದೊಡ್ಡ ವಿಶ್ವಕಪ್‌ಗಾಗಿ ದಿಲ್ ಜಶ್ನ್ ಬೋಲೆ ಅನ್ನು ರಚಿಸುವುದು ನನಗೆ ಅಪಾರ ಗೌರವವಾಗಿದೆ. ಈ ಹಾಡು 1.4 ಶತಕೋಟಿ ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲ ಇಡೀ ಜಗತ್ತು ಭಾರತಕ್ಕೆ ಬಂದು ಇದುವರೆಗಿನ ಅತಿದೊಡ್ಡ ವಿಶ್ವಕಪ್ ನ ಭಾಗವಾಗಲು ನೆರವಾಗಲಿದೆ ಎಂದು ಸಂಗೀತ ಸಂಯೋಜಕ ಪ್ರೀತಮ್ ಹೇಳಿದ್ದಾರೆ.

ಐಸಿಸಿ ಪ್ರಯತ್ನದ ಹೊರತಾಗಿಯೂ ಹಾಡಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಂದ ಆತ್ಮೀಯ ಸ್ವಾಗತ ಸಿಗಲಿಲ್ಲ. 2011 ಹಾಗೂ 2015ರ ಹಿಂದಿನ ಆವೃತ್ತಿಗಳ ಗೀತೆಗಳಂತೆ ಕ್ರಿಕೆಟ್ ಅಭಿಮಾನಿಗಳ ನಾಡಿಮಿಡಿತವನ್ನು ಸೆಳೆಯಲು ಈ ಗೀತೆಗೆ ಸಾಧ್ಯವಾಗದ ಕಾರಣ ಐಸಿಸಿಯನ್ನು ಎಲ್ಲರೂ ಟೀಕಿಸಿದ್ದಾರೆ.

2011ರ ವಿಶ್ವಕಪ್ ಗೀತೆಯನ್ನು ಶಂಕರ್ ಮಹಾದೇವನ್ ಸಂಯೋಜಿಸಿದ್ದರು ಹಾಗೂ ಇದನ್ನು ದೇ ಘುಮಾಕೆ ಎಂದು ಕರೆಯಲಾಗಿತ್ತು.

andolanait

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

15 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

16 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

17 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

17 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

21 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

21 hours ago